ಕಲ್ಲಂಗಡಿ ಅಥವಾ ಕರ್ಬೂಜ: ಯಾವುದು ದೇಹಕ್ಕೆ ಉತ್ತಮ?
Health Tips: ಹಣ್ಣುಗಳ ಸೇವನೆ ಅಗತ್ಯವಾಗಿದ್ದು ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣುಗಳ ಹವಾ ಜೋರಾಗಿದೆ. ಆದರೆ ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣುಗಳ ವಿಚಾರಕ್ಕೆ ಬಂದಾಗ ನಿಮ್ಮ ಆರೋಗ್ಯಕ್ಕೆ ಯಾವುದು ಉತ್ತಮ ಎನ್ನುವ ಪ್ರಶ್ನೆ ನಿಮ್ಮಲ್ಲಿ ಇರಬಹುದು. ನಿಮ್ಮ ಆರೋಗ್ಯಕ್ಕೆ ತಕ್ಕಂತೆ ಯಾವ ಹಣ್ಣುಗಳನ್ನು ನೀವು ಸೇವಿದರೆ ಉತ್ತಮ?
ಸಂಗ್ರಹ ಚಿತ್ರ -
ಬೆಂಗಳೂರು,ಮಾ.26: ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ದೇಹ ತಂಪು ಬಯಸುವ ಆಹಾರವನ್ನು ಬಯಸುತ್ತದೆ. ಅದರಲ್ಲೂ ಈ ಸಮಯದಲ್ಲಿ ಹಣ್ಣುಗಳ ಸೇವನೆ ಅಗತ್ಯವಾಗಿದ್ದು ಮಾರುಕಟ್ಟೆಯಲ್ಲಿ ಕಲ್ಲಂಗಡಿ (Watermelon) ಹಾಗೂ ಕರ್ಬೂಜ ಹಣ್ಣುಗಳ (Muskmelon) ಹವಾ ಜೋರಾಗಿದೆ. ಆದರೆ ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣುಗಳ ವಿಚಾರಕ್ಕೆ ಬಂದಾಗ ನಿಮ್ಮ ಆರೋಗ್ಯಕ್ಕೆ ಯಾವುದು ಉತ್ತಮ ಎನ್ನುವ ಪ್ರಶ್ನೆ ನಿಮ್ಮಲ್ಲಿ ಇರಬಹುದು. ನಿಮ್ಮ ಆರೋಗ್ಯಕ್ಕೆ ತಕ್ಕಂತೆ ಯಾವ ಹಣ್ಣುಗಳನ್ನು ನೀವು ಸೇವಿದರೆ ಉತ್ತಮ?
ಕಲ್ಲಂಗಡಿ ಹೈಡ್ರೇಟರ್ ಆಗಿ ಕೆಲಸ ಮಾಡುತ್ತದೆ:
ಬಿಸಿಲಿನಲ್ಲಿ ಸುಸ್ತಾಗಿದ್ದಾಗ ಕಲ್ಲಂಗಡಿ ಹಣ್ಣಿನ ಸೇವನೆ ಅತೀ ಅಗತ್ಯವಾಗಿದೆ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿದ್ದು ಕಲ್ಲಂಗಡಿ ಲೈಕೋಪೀನ್‌ನ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ. ಇದು ದೇಹಕ್ಕೆ ಪ್ರಬಲ ಉತ್ಕರ್ಷಣ ನಿರೋಧಕವಾಗಿದೆ.
ತೂಕ ಇಳಿಕೆಗೂ ಪ್ರಯೋಜನಕಾರಿ:
ಬಿಸಿಲಿನ ಹೊರತಾಗಿಯೂ ಜಿಮ್‌ಗೆ ಹೋಗುವವರಿಗೆ, ತೂಕ ಇಳಿಕೆ ಮಾಡೋರಿಗೆ ಕಲ್ಲಂಗಡಿ ಒಂದು ರಹಸ್ಯ ಆಯುಧವಾಗಿದೆ. ಇದು L-ಸಿಟ್ರುಲಿನ್ ಎಂಬ ಅಮೈನೋ ಆಮ್ಲವನ್ನು ಹೊಂದಿದ್ದು ತೂಕ ಇಳಿಕೆಗೂ ಸಹಕಾರಿಯಾಗುತ್ತದೆ.
ಅಧಿಕ ಪೋಷಕಾಂಶಗಳು ಇದರಲ್ಲಿದೆ:
ವಿಟಮಿನ್ ಸಿ, ಎ, B6, ಮೆಗ್ನೀಸಿಯಮ್ ಮತ್ತು ಲೈಕೋಪೀನ್ ಆಂಟಿಆಕ್ಸಿಡೆಂಟ್‌ಗಳ ಸಮೃದ್ಧ ಮೂಲವಾಗಿದ್ದು ಅಧಿಕ ಪೋಷಕಾಂಶಗಳನ್ನು ಇದು ದೇಹಕ್ಕೆ ನೀಡುತ್ತದೆ.
Health Tips: ಕೇಸರಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ ಗೊತ್ತಾ?
ಕರ್ಬೂಜ ಹಣ್ಣು:
ನೀರಿನಂಶ ಜೊತೆಗೆ ಪೌಷ್ಟಿಕಾಂಶ ಬಯಸುವವರಿಗೆ ಕರ್ಬೂಜ ಅತೀ ಉತ್ತಮವಾಗಿದೆ. ಇದರಲ್ಲಿ ನಾರಿನಂಶ ಅಧಿಕವಾಗಿದ್ದು ಉತ್ತಮ ಜೀರ್ಣಕ್ರಿಯೆಯಾಗಿ ಕೆಲಸ ಮಾಡುತ್ತದೆ.ಬೇಸಿಗೆಯಲ್ಲಿ ಆಲಸ್ಯ ಅಥವಾ ಮಲಬದ್ಧತೆಯಿಂದ ಬಳಲುತ್ತಿರುವಾಗ ಇದು ಉತ್ತಮವಾಗಿದೆ.
ಚರ್ಮದ ಆರೋಗ್ಯಕ್ಕೆ ಉತ್ತಮ:
ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯಕ್ಕೆ ಕರ್ಬೂಜ ಉತ್ತಮವಾಗಿದೆ. ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಸರಿಪಡಿಸಿ ಹೃದಯದ ಆರೋಗ್ಯ ಕಾಪಾಡುವಂತೆ ಮಾಡುತ್ತದೆ.
ತೂಕ ಇಳಿಕೆ ಮಾಡೋರಿಗೆ ಯಾವುದು ಉತ್ತಮ?
ನೀವು ಕ್ಯಾಲೋರಿ ಇಳಿಕೆ ಮಾಡುವುದಾದರೆ ಕಲ್ಲಂಗಡಿ ಸೇವನೆ ಉತ್ತಮ ಆಗಿದೆ. ಇದು ಸ್ವಲ್ಪ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆದರೆ ಇದರ ಹೆಚ್ಚಿನ GI ಗ್ಲೈಸೆಮಿಕ್ ಸೂಚ್ಯಂಕ ಎಂದರೆ ಇದು ರಕ್ತದಲ್ಲಿನ ಸಕ್ಕರೆಯಲ್ಲಿ ತ್ವರಿತ ಏರಿಕೆಗೆ ಕಾರಣವಾಗಿ ಬೇಗನೆ ಹಸಿವಿಗೆ ಕಾರಣವಾಗಬಹುದು. ಆದರೆ ಈ ಎರಡೂ ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದು ಅಷ್ಟು ಸೂಕ್ತವಲ್ಲ. ರಾತ್ರಿ ಸೇವಿಸುವುದರಿಂದ ದೇಹದಲ್ಲಿ ಕಫ ಹೆಚ್ಚಾಗಿ ನೆಗಡಿ ಹಾಗೂ ಕೆಮ್ಮು ಕಾಣಿಸಬಹುದು