ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆ ಎಐ ಎಂಜಿನಿಯರ್: ಲಿಂಕ್ಡ್‌ ಇನ್ 'ಜಾಬ್ಸ್ ಆನ್ ದಿ ರೈಸ್ 2026' ವರದಿ ಬಿಡುಗಡೆ

ಶೇಕಡ 72ರಷ್ಟು ಜನರು 2026ರಲ್ಲಿ ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಆದರೆ ತಂತ್ರಜ್ಞಾನದ ವೇಗದ ಬದಲಾವಣೆಗೆ ತಕ್ಕಂತೆ ಬೇಕಾದ ಕೌಶಲ್ಯಗಳ ಕೊರತೆ (38%) ಮತ್ತು ಇಂದಿನ ಹೆಚ್ಚುತ್ತಿರುವ ಪೈಪೋಟಿಯ ನಡುವೆ ತಾವು ಹೇಗೆ ಎದ್ದು ಕಾಣಬಹುದು (37%) ಎಂಬುದರ ಬಗ್ಗೆ ಮೂರನೇ ಒಂದ ಕ್ಕಿಂತ ಹೆಚ್ಚು ಮಂದಿ ತಾವು ಸಿದ್ಧರಾಗಿಲ್ಲ ಎಂಬ ಭಾವನೆ ಹೊಂದಿದ್ದಾರೆ

ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆ ಎಐ ಎಂಜಿನಿಯರ್

-

Ashok Nayak
Ashok Nayak Jan 22, 2026 3:39 PM

ಬೆಂಗಳೂರು: ಭಾರತದ ವೃತ್ತಿಪರ ನೆಟ್ ವರ್ಕ್ ಆಗಿರುವ ಲಿಂಕ್ಡ್‌ ಇನ್‌(Linkedin) ಸಂಸ್ಥೆಯು 'ಜಾಬ್ಸ್ ಆನ್ ದಿ ರೈಸ್ 2026' ವರದಿಯನ್ನು ಬಿಡುಗಡೆ ಮಾಡಿದ್ದು, ಈ ವರದಿಯು ಬೆಂಗಳೂರಿನಲ್ಲಿ ಅತಿ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ಹುದ್ದೆಗಳಲ್ಲಿ ಎಐ ಇಂಜಿನಿಯರ್ ಮೊದಲನೇ ಸ್ಥಾನ ದಲ್ಲಿದೆ ಎಂದು ತಿಳಿಸಿದೆ.

ಈ ಹೊಸ ಸಂಶೋಧನೆಯ ಪ್ರಕಾರ, ಶೇಕಡ 72ರಷ್ಟು ಜನರು 2026ರಲ್ಲಿ ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಆದರೆ ತಂತ್ರಜ್ಞಾನದ ವೇಗದ ಬದಲಾವಣೆಗೆ ತಕ್ಕಂತೆ ಬೇಕಾದ ಕೌಶಲ್ಯಗಳ ಕೊರತೆ (38%) ಮತ್ತು ಇಂದಿನ ಹೆಚ್ಚುತ್ತಿರುವ ಪೈಪೋಟಿಯ ನಡುವೆ ತಾವು ಹೇಗೆ ಎದ್ದು ಕಾಣಬಹುದು (37%) ಎಂಬುದರ ಬಗ್ಗೆ ಮೂರನೇ ಒಂದಕ್ಕಿಂತ ಹೆಚ್ಚು ಮಂದಿ ತಾವು ಸಿದ್ಧರಾಗಿಲ್ಲ ಎಂಬ ಭಾವನೆ ಹೊಂದಿದ್ದಾರೆ.

ಈ ಅನಿಶ್ಚಿತತೆಯನ್ನು ಎದುರಿಸಲು ವೃತ್ತಿಪರರಿಗೆ ಸಹಾಯ ಮಾಡಲು, ಲಿಂಕ್ಡ್‌ ಇನ್ ತನ್ನ 'ಜಾಬ್ಸ್ ಆನ್ ದಿ ರೈಸ್ 2026' ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಎಐ ಎಂಜಿನಿಯರ್ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಉದ್ಯೋಗವಾಗಿ ಹೊರಹೊಮ್ಮಿದೆ.

ಇದು ತಂತ್ರಜ್ಞಾನ, ಉತ್ಪನ್ನ ಹೊಸತನ ಮತ್ತು ಜಾಗತಿಕ ಡಿಜಿಟಲ್ ಸೇವೆಗಳಲ್ಲಿ ನಗರದ ನಾಯ ಕತ್ವ ಮುಂದುವರಿದಿರುವುದನ್ನು ತೋರಿಸುತ್ತದೆ. ತಂತ್ರಜ್ಞಾನದ ಹೊರತಾಗಿ, ಈ ಪಟ್ಟಿಯಲ್ಲಿ ಈ ಕೆಳಗಿನ ಉದ್ಯೋಗಗಳು ಸ್ಥಾನ ಪಡೆದಿವೆ: ಪ್ರೊಫೆಸರ್ (ಸ್ಥಾನ #3), ವೈಸ್ ಪ್ರೆಸಿಡೆಂಟ್ ಆಫ್ ಗ್ಲೋಬಲ್ ಸೇಲ್ಸ್ (ಸ್ಥಾನ #4), ಡೈರೆಕ್ಟರ್ ಆಫ್ ಪ್ರಾಡಕ್ಟ್ ಎಂಜಿನಿಯರಿಂಗ್ (ಸ್ಥಾನ #5), ಜನರಲ್ ಮ್ಯಾನೇಜರ್, ಬಿಸಿನೆಸ್ ಡೆವಲಪ್‌ಮೆಂಟ್ (ಸ್ಥಾನ #6). ಇದು ನಗರದ ವಿಕಸನ ಗೊಳ್ಳುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಶಿಕ್ಷಣ, ಮಾರಾಟ, ಉತ್ಪನ್ನ ಆಧಾರಿತ ಉದ್ಯಮಗಳು ಮತ್ತು ಕಾರ್ಯತಂತ್ರದ ವ್ಯವಹಾರ ಕ್ಷೇತ್ರಗಳು ಬೆಳವಣಿಗೆ ಹೊಂದುತ್ತಿರುವುದನ್ನು ಸಾರುತ್ತದೆ.

ಇದನ್ನೂ ಓದಿ: EPFO Employee Enrollment Scheme 2025: ಉದ್ಯೋಗಿಗಳ ದಾಖಲಾತಿ ಯೋಜನೆಗೆ ಯಾರು ಅರ್ಹರು ?

ಈ ಕುರಿತು ಮಾತನಾಡಿರುವ ಲಿಂಕ್ಡ್‌ ಇನ್ ನ ವೃತ್ತಿಪರ ಸಲಹೆಗಾರ್ತಿ ಮತ್ತು ಲಿಂಕ್ಡ್‌ಇನ್ ಇಂಡಿಯಾ ನ್ಯೂಸ್ ನ ಹಿರಿಯ ವ್ಯವಸ್ಥಾಪಕ ಸಂಪಾದಕರಾದ ನಿರಜಿತಾ ಬ್ಯಾನರ್ಜಿ ಅವರು, "ಬದಲಾವಣೆಗೆ ಹೊಂದಿಕೊಳ್ಳಬಲ್ಲ ವೃತ್ತಿಪರರಿಗೆ ಬೆಂಗಳೂರಿನ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಿರವಾದ ಬೇಡಿಕೆ ಕಂಡುಬರುತ್ತಿದೆ. ವಿವಿಧ ಕಾರ್ಯಕ್ಷೇತ್ರಗಳಲ್ಲಿ ಉದ್ಯೋಗದ ಸ್ವರೂಪಗಳು ಬದಲಾಗುತ್ತಿರುವುದರಿಂದ, ಉದ್ಯೋಗದಾತರು ಉದ್ಯೋಗಿಗಳಲ್ಲಿರುವ ಹೊಂದಾಣಿಕೆಯ ಗುಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ತಮ್ಮ ಮೂಲಬೂತ ಕೌಶಲ್ಯಗಳೊಂದಿಗೆ ಎಐ ಜ್ಞಾನವನ್ನು ಹೊಂದಿರುವ, ನಿರ್ದಿಷ್ಟ ಯೋಜನೆಗಳ ಮೂಲಕ ಉತ್ತಮ ಫಲಿತಾಂಶಗಳನ್ನು ನೀಡಬಲ್ಲ ಮತ್ತು ವಿವಿಧ ಜವಾಬ್ದಾರಿಗಳನ್ನು ಸ್ವೀಕರಿಸಲು ಸಿದ್ಧರಿರುವ ವೃತ್ತಿಪರರು ಉತ್ತಮ ಭವಿಷ್ಯವನ್ನು ಕಂಡುಕೊಳ್ಳುತ್ತಿದ್ದಾರೆ. ಏಕೆಂದರೆ ನೇಮಕಾತಿಯು ತಂತ್ರಜ್ಞಾನದ ಆಚೆಗೆ ವಿನ್ಯಾಸ ಮತ್ತು ಸಲಹಾ ವಿಭಾಗಗಳಿಗೂ ವಿಸ್ತರಿಸುತ್ತಿದೆ" ಎಂದು ಹೇಳಿದರು.

ಭಾರತೀಯ ವೃತ್ತಿಪರರು ಆರಾಮದಾಯಕವಾಗಿ ಎಐ ಬಳಸುತ್ತಿದ್ದಾರೆ, ಆದರೆ ನೇಮಕಾತಿಯಲ್ಲಿ ಎಐ ಬಳಕೆ ಕುರಿತು ಅನಿಶ್ಚಿತತೆ ಹೊಂದಿದ್ದಾರೆ.

ಲಿಂಕ್ಡ್‌ ಇನ್ ಸಂಶೋಧನೆ ಪ್ರಕಾರ ಭಾರತದ 94% ವೃತ್ತಿಪರರು ತಮ್ಮ ಉದ್ಯೋಗದ ಹುಡುಕಾಟ ದಲ್ಲಿ ಆರಾಮದಾಯಕವಾಗಿ ಎಐ ಬಳಸಬಲ್ಲರು ಎಂದು ತಿಳಿಸಿದೆ. ಆದರೆ ನೇಮಕಾತಿಯಲ್ಲಿ ಎಐ ಬಳಸಿದಾಗ ತಾವು ಹೇಗೆ ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು ಎಂಬುದು ಸುಮಾರು ಅರ್ಧದಷ್ಟು (48%) ಮಂದಿಗೆ ತಿಳಿದಿಲ್ಲ ಎಂದು ವರದಿ ಬಹಿರಂಗ ಪಡಿಸಿದೆ. ಅವರಲ್ಲಿ 54%ರಷ್ಟು ಮಂದಿ ನೇಮಕಾತಿದಾರರ ಗಮನ ಸೆಳೆಯುವಲ್ಲಿ ಎಐ ಒಂದು ತಡೆಯಾಗಬಹುದು ಎಂದು ಹೇಳುತ್ತಾರೆ. ಈ ಆತಂಕಗಳ ಹೊರತಾಗಿಯೂ, 65%ರಷ್ಟು ಜನರು ಎಐ ಅಭ್ಯರ್ಥಿ ಹಾಗೂ ನೇಮಕಾತಿದಾರರ ನಡುವಿನ ಸಂವಹನದ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನೇಮಕಾತಿ ದಾರರ ಜೊತೆಗಿನ ಸಂವಹನವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

ಲಿಂಕ್ಡ್‌ ಇನ್‌ನ ಎಐ ಪರಿಕರಗಳು ಉದ್ಯೋಗ ಹುಡುಕಾಟ ಮತ್ತು ಉದ್ಯೋಗ ಹೊಂದಾಣಿಕೆಯನ್ನು ಹೇಗೆ ಸುಧಾರಿಸುತ್ತಿವೆ.

ಲಿಂಕ್ಡ್‌ ಇನ್ ವ್ಯಾಪಕ ಶ್ರೇಣಿಯ ಎಐ ಪರಿಕರಗಳನ್ನು ಒದಗಿಸುತ್ತಿದ್ದು, ಇದರಲ್ಲಿ ಎಐ-ಚಾಲಿತ ಉದ್ಯೋಗ ಹುಡುಕಾಟ ಫೀಚರ್ ಕೂಡ ಒಳಗೊಂಡಿದೆ. ಸದಸ್ಯರು ತಮ್ಮದೇ ಆದ ಪದಗಳಲ್ಲಿ ಉದ್ಯೋಗಗಳನ್ನು ಹುಡುಕಲು ಮತ್ತು ತಾವು ಎಂದಿಗೂ ಯೋಚಿಸದ ಹೊಸ ಉದ್ಯೋಗಗಳನ್ನು ಕಂಡುಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ಈ ಸೌಲಭ್ಯವು ಈಗ ಜಾಗತಿಕವಾಗಿ ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ಲಭ್ಯವಾಗುತ್ತಿದೆ. ಈಗಾಗಲೇ ಜಾಗತಿಕವಾಗಿ 13 ಲಕ್ಷಕ್ಕೂ ಹೆಚ್ಚು ಸದಸ್ಯರು ಈ ಫೀಚರನ್ನು ಪ್ರತಿದಿನ ಬಳಸುತ್ತಿದ್ದಾರೆ ಮತ್ತು ವಾರಕ್ಕೆ 2.5 ಕೋಟಿಗೂ ಹೆಚ್ಚು ಹುಡುಕಾಟಗಳು ಈ ಹೊಸ ಉದ್ಯೋಗ ಹುಡುಕಾಟ ಫೀಚರ್ ಮೂಲಕ ನಡೆಯುತ್ತಿವೆ. ಒಮ್ಮೆ ನೀವು ಸೂಕ್ತವಾದ ಉದ್ಯೋಗಗಳನ್ನು ಕಂಡುಕೊಂಡ ನಂತರ, ಲಿಂಕ್ಡ್‌ ಇನ್‌ ನ ಜಾಬ್ ಮ್ಯಾಚ್ ಫೀಚರ್ ಅನ್ನು ಬಳಸಿಕೊಂಡು ಯಾವ ಉದ್ಯೋಗಗಳು ನಿಮ್ಮ ಕೌಶಲ್ಯ ಮತ್ತು ಅರ್ಹತೆಗಳಿಗೆ ಹೊಂದಿಕೆಯಾಗುತ್ತವೆ ಎಂಬುದನ್ನು ನೋಡಬಹುದು. ಇದರಿಂದ ನೀವು ಹೆಚ್ಚು ಸೂಕ್ತವಾದ ಮತ್ತು ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುವ ಅವಕಾಶಗಳ ಮೇಲೆ ಗಮನ ಕೇಂದ್ರೀಕರಿಸಬಹುದು.

ಬೆಂಗಳೂರಿನಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಟಾಪ್ 10 ಉದ್ಯೋಗಗಳು

  1. ಎಐ ಎಂಜಿನಿಯರ್
  2. ಡೈರೆಕ್ಟರ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
  3. ಪ್ರೊಫೆಸರ್
  4. ವೈಸ್ ಪ್ರೆಸಿಡೆಂಟ್ ಆಫ್ ಗ್ಲೋಬಲ್ ಸೇಲ್ಸ್
  5. ಡೈರೆಕ್ಟರ್ ಆಫ್ ಪ್ರಾಡಕ್ಟ್ ಎಂಜಿನಿಯರಿಂಗ್
  6. ಜನರಲ್ ಮ್ಯಾನೇಜರ್ ಬಿಸಿನೆಸ್ ಡೆವಲಪ್‌ಮೆಂಟ್
  7. ವೇರ್‌ಹೌಸ್ ಟೀಮ್ ಲೀಡ್
  8. ಇನ್ಫರ್ಮೇಷನ್ ಟೆಕ್ನಾಲಜಿ ಆಡಿಟರ್
  9. ಲೀಗಲ್ ಅನಾಲಿಸ್ಟ್
  10. ಫೌಂಡರ್