ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SBI Recruitment 2026: ಎಸ್‌ಬಿಐಯಲ್ಲಿದೆ 9,124 ಜೂನಿಯರ್ ಅಸೋಸಿಯೇಟ್ ಹುದ್ದೆ; ಹೀಗೆ ಅಪ್ಲೈ ಮಾಡಿ

Bank Jobs: ಎಸ್‌ಬಿಐ 2026ನೇ ಸಾಲಿನ Junior Associate (Customer Support & Sales) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ದೇಶಾದ್ಯಂತ ಒಟ್ಟು 9,124 ಹುದ್ದೆಗಳಿವೆ. ಕರ್ನಾಟಕದಲ್ಲಿ 760 ರೆಗ್ಯುಲರ್ ಮತ್ತು 39 ಬ್ಯಾಕ್‌ಲ್ಯಾಗ್‌ ಹುದ್ದೆಗಳು ಸೇರಿ ಒಟ್ಟು 799 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಆಗಸ್ಟ್ 31ರವರೆಗೆ ಅವಕಾಶವಿದೆ.

ಎಸ್‌ಬಿಐಯಲ್ಲಿದೆ 9,124 ಜೂನಿಯರ್ ಅಸೋಸಿಯೇಟ್ ಹುದ್ದೆ

ಸಾಂದರ್ಬಿಕ ಚಿತ್ರ. ಒಳಚಿತ್ರದಲ್ಲಿ ಲೇಖಕ ಆರ್.ಕೆ. ಬಾಲಚಂದ್ರ -

Ramesh Ballamoole
Ramesh Ballamoole Aug 15, 2026 9:29 PM
  • ಆರ್.ಕೆ. ಬಾಲಚಂದ್ರ

ಬೆಂಗಳೂರು, ಆ. 15: ಬ್ಯಾಂಕ್ ಉದ್ಯೋಗದ (Bank Jobs) ಕನಸು ಕಾಣುತ್ತಿರುವ ಯುವಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ದೊಡ್ಡ ಅವಕಾಶ ನೀಡಿದೆ. ಎಸ್‌ಬಿಐ 2026ನೇ ಸಾಲಿನ Junior Associate (Customer Support & Sales) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ (SBI Recruitment 2026). ಈ ಬಾರಿ ದೇಶಾದ್ಯಂತ 7,680 ರೆಗ್ಯುಲರ್‌ ಮತ್ತು 1,444 ಬ್ಯಾಕ್‌ಲ್ಯಾಗ್‌ ಹುದ್ದೆಗಳು ಸೇರಿ ಒಟ್ಟು 9,124 ಹುದ್ದೆಗಳು ಪ್ರಕಟವಾಗಿವೆ. ಕರ್ನಾಟಕಕ್ಕೆ 760 ರೆಗ್ಯುಲರ್ ಮತ್ತು 39 ಬ್ಯಾಕ್‌ಲ್ಯಾಗ್‌ ಹುದ್ದೆಗಳು ಸೇರಿ ಒಟ್ಟು 799 ಹುದ್ದೆಗಳು ಲಭ್ಯವಿವೆ. ರಾಜ್ಯದ 760 ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳಿಗೆ 121, ಎಸ್‌ಟಿ ಅಭ್ಯರ್ಥಿಗಳಿಗೆ 53, ಒಬಿಸಿ 205, ಆರ್ಥಿಕ ದುರ್ಬಲ ವರ್ಗ 76 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 305 ಹುದ್ದೆಗಳನ್ನು ಮೀಸಲಿಡಲಾಗಿದೆ.

ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಆಗಸ್ಟ್ 11ರಿಂದ ಆಗಸ್ಟ್ 31ರವರೆಗೆ ಅವಕಾಶ ನೀಡಲಾಗಿದೆ. ಪ್ರಿಲಿಮ್ಸ್ ಪರೀಕ್ಷೆಯನ್ನು 2026ರ ಸೆಪ್ಟೆಂಬರ್‌ನಲ್ಲಿ ಮತ್ತು ಮುಖ್ಯ ಪರೀಕ್ಷೆಯನ್ನು 2026ರ ನವೆಂಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ನಿಖರ ದಿನಾಂಕಗಳಿಗಾಗಿ ಅಭ್ಯರ್ಥಿಗಳು ಎಸ್‌ಬಿಐ ಅನ್ನು ಗಮನಿಸುತ್ತಿರಬೇಕು.

ಕರ್ನಾಟಕದ ಅಭ್ಯರ್ಥಿಗಳಿಗೆ 799 ಹುದ್ದೆಗಳ ಅವಕಾಶ

ಕರ್ನಾಟಕಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿತ ಸ್ಥಳೀಯ ಭಾಷೆ ಕನ್ನಡ. ಅಭ್ಯರ್ಥಿಯು ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಪ್ರಾವೀಣ್ಯತೆ ಹೊಂದಿರಬೇಕು ಇನ್ನೊಂದು ಅನುಕೂಲವೆಂದರೆ ಕರ್ನಾಟಕದ ಅಭ್ಯರ್ಥಿಗಳು ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ ಅಥವಾ ಕನ್ನಡ ಭಾಷೆಯಲ್ಲಿ ಬರೆಯಬಹುದು. ಅಭ್ಯರ್ಥಿಯು ಒಂದು State/UTಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಆಯ್ಕೆಯೂ ರಾಜ್ಯವಾರು ಮತ್ತು ವರ್ಗವಾರು ಮೆರಿಟ್ ಆಧಾರದಲ್ಲೇ ನಡೆಯುತ್ತದೆ.

ಪರೀಕ್ಷಾ ಪೂರ್ವ ತರಬೇತಿ

ಎಸ್ಸಿ/ಎಸ್‌ಟಿ/ ಒಬಿಸಿ/ವಿಶೇಷ ಚೇತನರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಬ್ಯಾಂಕ್ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಆನ್‌ಲೈನ್ ಮೂಲಕವೇ ತರಬೇತಿ ಕಾರ್ಯಕ್ರಮ ನಡೆಯುತ್ತದೆ. ಇದರ ಅಗತ್ಯವಿದ್ದರೆ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ನೀಡಿರುವ ಈ ಸಂಬಂಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು.

ವಯೋಮಿತಿ ಎಷ್ಟು?

2026ರ ಏಪ್ರಿಲ್ 1ರಂತೆ ಅಭ್ಯರ್ಥಿಯ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ಇರಬೇಕು. ಸರ್ಕಾರದ ನಿಯಮಾನುಸಾರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ. ಸಾಮಾನ್ಯವಾಗಿ OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. PwBD, ಮಾಜಿ ಸೈನಿಕರು ಹಾಗೂ ಇತರ ಅರ್ಹ ವರ್ಗಗಳಿಗೆ ಅಧಿಸೂಚನೆ ಮತ್ತು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪ್ರತ್ಯೇಕ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

1,538 ಕ್ಲರ್ಕ್ ಹುದ್ದೆಗಳಿಗೆ ಎಸ್‌ಬಿಐಯಿಂದ ಅರ್ಜಿ ಆಹ್ವಾನ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ

ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ?

ಕರ್ನಾಟಕದಲ್ಲಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗೆ ಈ ಕೇಂದ್ರಗಳನ್ನು ನಿಗದಿ ಪಡಿಸಲಾಗಿದೆ: ಬೆಂಗಳೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ/ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ತನಗೆ ಬೇಕಾದ ಕೇಂದ್ರವನ್ನು ಆಯ್ಕೆ ಮಾಡಬಹುದು. ಆದರೆ ಆಡಳಿತಾತ್ಮಕ ಕಾರಣಗಳು ಅಥವಾ ಅಭ್ಯರ್ಥಿಗಳ ಸಂಖ್ಯೆಯನ್ನು ಆಧರಿಸಿ ಕೇಂದ್ರವನ್ನು ಬದಲಿಸುವ ಅಥವಾ ಬೇರೆ ಕೇಂದ್ರವನ್ನು ಹಂಚುವ ಅಧಿಕಾರ ಎಸ್‌ಬಿಐಗೆ ಇರುತ್ತದೆ. ಪರೀಕ್ಷಾ ಕೇಂದ್ರ, ದಿನಾಂಕ ಅಥವಾ session ಬದಲಿಸಲು ಅಭ್ಯರ್ಥಿಯ ಮನವಿಯನ್ನು ಪರಿಗಣಿಸಲಾಗುವುದಿಲ್ಲ.

ಯಾರು ಅರ್ಜಿ ಸಲ್ಲಿಸಬಹುದು?

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಅಂತಿಮ ವರ್ಷದ ಅಥವಾ ಅಂತಿಮ semester ವಿದ್ಯಾರ್ಥಿಗಳೂ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು. ಆದರೆ ಆಯ್ಕೆಯಾದರೆ 2026ರ ಡಿಸೆಂಬರ್ 31ರೊಳಗೆ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪುರಾವೆ ಸಲ್ಲಿಸಬೇಕು. ವಯೋಮಿತಿ ಸೇರಿದಂತೆ ಇತರೆ ಅರ್ಹತಾ ಷರತ್ತುಗಳನ್ನು ಅಭ್ಯರ್ಥಿಗಳು ಅಧಿಸೂಚನೆಯ ಪ್ರಕಾರ ಪರಿಶೀಲಿಸುವುದು ಅಗತ್ಯ. SC/ST/PwBD/Ex-Servicemen ಸಂಬಂಧಿತ ಅರ್ಹ ವರ್ಗಗಳಿಗೆ ಅರ್ಜಿ ಶುಲ್ಕವಿಲ್ಲ. General/OBC/EWS ಅಭ್ಯರ್ಥಿಗಳಿಗೆ 750 ರುಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

ಪೂರ್ವಭಾವಿ ಪರೀಕ್ಷೆ

ವಿಭಾಗ ಪ್ರಶ್ನೆಗಳು ಅಂಕಗಳು ಸಮಯ
English Language 30 30 20 ನಿಮಿಷ
Numerical Ability 35 35 20 ನಿಮಿಷ
Reasoning Ability 35 35 20 ನಿಮಿಷ
ಒಟ್ಟು 100 100 1 ಗಂಟೆ

ತಪ್ಪು ಉತ್ತರಕ್ಕೆ ¼ ಅಂಕದ ಋಣಾತ್ಮಕ ಮೌಲ್ಯ ಮಾಪನವಿದೆ. ಪೂರ್ವ ಭಾವಿ ಪರೀಕ್ಷೆಯ ಅಂಕಗಳನ್ನು ಅಂತಿಮ meritಗೆ ಸೇರಿಸಲಾಗುವುದಿಲ್ಲ. ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುವುದು ಈ ಹಂತದ ಉದ್ದೇಶ.

ಗಮನಿಸಿ: ಪ್ರಿಲಿಮ್ಸ್ ಪರೀಕ್ಷೆಯಲ್ಲಿ Sectional Cut-off ಇರುವುದಿಲ್ಲ. ಒಟ್ಟು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

ಮುಖ್ಯ ಪರೀಕ್ಷೆ

ವಿಭಾಗ ಪ್ರಶ್ನೆಗಳು ಅಂಕಗಳು ಸಮಯ
General/Financial Awareness 50 50 35 ನಿಮಿಷ
General English 40 40 35 ನಿಮಿಷ
Quantitative Aptitude 50 50 45 ನಿಮಿಷ
Reasoning Ability & Computer Aptitude 50 60 45 ನಿಮಿಷ
ಒಟ್ಟು 190 200 2 ಗಂಟೆ 40 ನಿಮಿಷ

ಮೇನ್ಸ್ ಪರೀಕ್ಷೆಯಲ್ಲಿನ aggregate score ಅನ್ನು ಅಂತಿಮ merit list ಸಿದ್ಧಪಡಿಸಲು ಪರಿಗಣಿಸಲಾಗುತ್ತದೆ. ಪ್ರಿಲಿಮ್ಸ್ ಪರೀಕ್ಷೆಯ ಅಂಕಗಳು ಅಂತಿಮ ಆಯ್ಕೆಗೆ ಪರಿಗಣಿಸುವುದಿಲ್ಲ.

ಗಮನಿಸಿ: ಮುಖ್ಯ ಪರೀಕ್ಷೆ ಯಲ್ಲಿ ಸೆಕ್ಸನಲ್ ಕಟ್ ಅಫ್ ಇದೆ. ಅಂದರೆ ಅಂತಿಮ ಆಯ್ಕೆ ಪ್ರಕ್ರಿಯೆಯ ಪರಿಗಣನೆಗೆ ಬರಲು ಅಭ್ಯರ್ಥಿಯು ಒಟ್ಟು ಪ್ರದರ್ಶನದ ಜೊತೆಗೆ ಬ್ಯಾಂಕ್ ನಿಗದಿಪಡಿಸುವ ಪ್ರತಿಯೊಂದು ವಿಭಾಗದ ಕನಿಷ್ಠ ಅರ್ಹತಾ ಮಾನದಂಡವನ್ನೂ ಪೂರೈಸಬೇಕು.

SBI ಅಪ್ರೆಂಟಿಸ್ ಶಿಪ್ ಮುಗಿಸಿದವರಿಗೆ ಹೆಚ್ಚುವರಿ 5 ಅಂಕಗಳು

ಈ ಅಧಿಸೂಚನೆಯಲ್ಲಿ ಗಮನಿಸಬೇಕಾದ ವಿಶೇಷ ಅಂಶವೆಂದರೆ ಎಸ್‌ಬಿಐಯಲ್ಲಿ ತರಬೇತಿ ಪಡೆದ ಅರ್ಹ ಅಪ್ರೆಂಟಿಸ್ ಗೆ ಮುಖ್ಯ ಪರಿಕ್ಷೆಯಲ್ಲಿ 200 ಅಂಕಗಳಲ್ಲಿ 2.5%, ಅಂದರೆ 5 ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತದೆ. ಈ ಅಂಕಗಳನ್ನು ಅಭ್ಯರ್ಥಿಯ aggregate scoreಗೆ ಸೇರಿಸಲಾಗುತ್ತದೆ.

ಆದರೆ ಈ ಸೌಲಭ್ಯ ಎಲ್ಲ ಅಪ್ರೆಂಟಿಸ್ ಗೂ ದೊರೆಯುವುದಿಲ್ಲ. 2022ರ ಜನವರಿ 1 ಅಥವಾ ನಂತರ ಅಪ್ರೆಂಟಿಸ್ ಶಿಪ್ ಆರಂಭಿಸಿ, ನಿಗದಿತ ಒಂದು ವರ್ಷದ ಶಾಖಾ ಅನುಭವವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಸೇರಿದಂತೆ ಅಧಿಸೂಚನೆಯಲ್ಲಿ ತಿಳಿಸಿರುವ ಷರತ್ತುಗಳನ್ನು ಪೂರೈಸಬೇಕು. Trade Test ಉತ್ತೀರ್ಣರಾಗಿ ಸಂಬಂಧಿತ National Apprenticeship Certificate ಹೊಂದಿರುವುದೂ ಅಗತ್ಯ.

ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ – LLPT

10ನೇ ಅಥವಾ 12ನೇ ತರಗತಿಯಲ್ಲಿ ಕರ್ನಾಟಕದ ನಿಗದಿತ ಸ್ಥಳೀಯ ಭಾಷೆಯಾದ ಕನ್ನಡವನ್ನು ಕಲಿತಿರುವುದಕ್ಕೆ marks card ಅಥವಾ certificate ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತ್ಯೇಕ ಭಾಷಾ ಪರೀಕ್ಷೆ ಇರುವುದಿಲ್ಲ. ಅಂತಹ ಪುರಾವೆ ಇಲ್ಲದ, ಆದರೆ Main Examination ಮೂಲಕ ತಾತ್ಕಾಲಿಕ ಆಯ್ಕೆಗೆ ಅರ್ಹರಾದ ಅಭ್ಯರ್ಥಿಗಳು ನೇಮಕಾತಿಗೆ ಮುನ್ನ ಕನ್ನಡ Local Language Proficiency Testನಲ್ಲಿ ಅರ್ಹತೆ ಪಡೆಯಬೇಕು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯದ ಅಭ್ಯರ್ಥಿಗೆ ನೇಮಕಾತಿ ನೀಡಲಾಗುವುದಿಲ್ಲ.

LLPT ಪರೀಕ್ಷೆಯ ಮಾದರಿ ಹೇಗಿರುತ್ತದೆ?

ಸ್ಥಳೀಯ ಭಾಷೆಯನ್ನು 10ನೇ ಅಥವಾ 12ನೇ ತರಗತಿಯಲ್ಲಿ ಓದಿರುವುದಕ್ಕೆ ಸೂಕ್ತ ಪುರಾವೆ ಸಲ್ಲಿಸದ ಅಭ್ಯರ್ಥಿಗಳು ಸ್ಥಳೀಯ ಬಾಷಾ ಪ್ರಾವೀಣ್ಯತೆ ಪರೀಕ್ಷೆ (LLPT)ಗೆ ಹಾಜರಾಗಬೇಕು. ಈ ಬಾರಿ ಅಧಿಸೂಚನೆಯಲ್ಲಿ LLPT ಪರೀಕ್ಷೆಯ ಮಾದರಿಯನ್ನೂ ಸ್ಪಷ್ಟವಾಗಿ ತಿಳಿಸಲಾಗಿದೆ.

LLPT ಪರೀಕ್ಷೆಯ ಮಾದರಿ

ಪರೀಕ್ಷೆ ಮಾದರಿ Passages/ಪ್ರಶ್ನೆಗಳು ಅಂಕಗಳು
Non-Verbal Test Objective 3 Passages – 15 ಪ್ರಶ್ನೆಗಳು 15
Non-Verbal Test Subjective 3 Passages – 15 ಪ್ರಶ್ನೆಗಳು 15
Verbal Test Verbal 20
ಒಟ್ಟು 50 ಅಂಕಗಳು

ಗಮನಿಸಿ: ಅಭ್ಯರ್ಥಿಯು ಬ್ಯಾಂಕ್ ನಿಗದಿಪಡಿಸುವ ಕನಿಷ್ಠ ಅರ್ಹತಾ ಅಂಕಗಳನ್ನು ಪ್ರತಿಯೊಂದು ಪರೀಕ್ಷೆ ಯಲ್ಲೂ ಪ್ರತ್ಯೇಕವಾಗಿ ಪಡೆಯಬೇಕು. ಸ್ಥಳೀಯ ಬಾಷಾ ಪ್ರಾವೀಣ್ಯತೆ ಪರೀಕ್ಷೆ ಯಲ್ಲಿ ಅರ್ಹತೆ ಪಡೆಯದ ಅಭ್ಯರ್ಥಿಗೆ ನೇಮಕಾತಿ ನೀಡಲಾಗುವುದಿಲ್ಲ.

ವೇತನವೂ ಗಮನಾರ್ಹ

Junior Associate ಹುದ್ದೆಯ ಆರಂಭಿಕ Basic Pay ₹26,730. Metro ನಗರಗಳಲ್ಲಿ ಹೊಸದಾಗಿ ನೇಮಕವಾಗುವ graduate Junior Associateಗೆ ವಿವಿಧ ಭತ್ಯೆಗಳನ್ನು ಒಳಗೊಂಡು ಆರಂಭಿಕ ಒಟ್ಟು ವೇತನ ಸುಮಾರು ₹46,000 ಇರಬಹುದು. ಆದರೆ posting ಸ್ಥಳವನ್ನು ಆಧರಿಸಿ ಭತ್ಯೆಗಳಲ್ಲಿ ವ್ಯತ್ಯಾಸವಾಗಬಹುದು.

ಮುಂದೇನು?

ಈ ಬಾರಿ ಹುದ್ದೆಗಳ ಸಂಖ್ಯೆ ದೊಡ್ಡದಾಗಿದೆ ಎಂದು ಪರೀಕ್ಷೆ ಸುಲಭವಾಗುತ್ತದೆ ಎಂದುಕೊಳ್ಳುವುದು ಸರಿಯಲ್ಲ. ಬ್ಯಾಂಕಿಂಗ್ ಉದ್ಯೋಗಕ್ಕಾಗಿ ಸ್ಪರ್ಧೆ ಇನ್ನೂ ತೀವ್ರವಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಮ್ಮ ವಯಸ್ಸು, ವಿದ್ಯಾರ್ಹತೆ, ರಾಜ್ಯ, ಸ್ಥಳೀಯ ಭಾಷೆ ಮತ್ತು ಪರೀಕ್ಷಾ ಕೇಂದ್ರದ ಆಯ್ಕೆಯನ್ನು ಪರಿಶೀಲಿಸಬೇಕು. Prelims ಸೆಪ್ಟೆಂಬರ್‌ನಲ್ಲೇ ಇರುವುದರಿಂದ Reasoning, Numerical Ability ಮತ್ತು English ವಿಭಾಗಗಳ ಅಭ್ಯಾಸವನ್ನು ತಕ್ಷಣ ಆರಂಭಿಸಬೇಕು. ಆದರೆ Prelims ಗಾಗಿ ಮಾತ್ರ ಓದಿ ಮುಖ್ಯ ಪರೀಕ್ಷೆಗೆ ನಂತರ ನೋಡೋಣ ಎಂಬ ವಿಧಾನ ಸೂಕ್ತವಲ್ಲ. ಏಕೆಂದರೆ ಅಂತಿಮ merit ನಿರ್ಧರಿಸುವುದು ಮುಖ್ಯ ಪರಿಕ್ಷೆಯ ಅಂಕಗಳೇ.

ಕೆಎಎಸ್‌ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; 5 ವರ್ಷ ವಯೋಮಿತಿ ಸಡಿಲಿಸಿ ಕೆಪಿಎಸ್‌ಸಿ ಆದೇಶ

ಕೊನೆಯ ಮಾತು

ಎಸ್‌ಬಿಐ Junior Associate ಹುದ್ದೆ ಕೇವಲ ಒಂದು ಉದ್ಯೋಗವಲ್ಲ. ಗ್ರಾಮೀಣ ಮತ್ತು ಮಧ್ಯಮ ವರ್ಗದ ಸಾವಿರಾರು ಯುವಕರಿಗೆ ಸ್ಥಿರ ಬ್ಯಾಂಕಿಂಗ್ ವೃತ್ತಿಜೀವನದತ್ತ ಸಾಗುವ ಪ್ರಮುಖ ಅವಕಾಶವಾಗಿದೆ. ಅಧಿಸೂಚನೆಯನ್ನು ಸರಿಯಾಗಿ ಓದಿ, ಸರಿಯಾದ State ಆಯ್ಕೆ ಮಾಡಿ, ಕನ್ನಡ ಭಾಷೆಯ ನಿಯಮವನ್ನು ಅರ್ಥ ಮಾಡಿಕೊಂಡು, ಪರೀಕ್ಷಾ ಕೇಂದ್ರವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ ಮತ್ತು ಪೂರ್ವಬಾವಿ ಪರೀಕ್ಷೆಯ ಜೊತೆಗೆ ಮುಖ್ಯ ಪರೀಕ್ಷೆಗೂ ಮೊದಲ ದಿನದಿಂದಲೇ ಸಿದ್ಧತೆ ಆರಂಭಿಸುವುದು ಉತ್ತಮ.

ಇನ್ನಷ್ಟು ಉದ್ಯೋಗದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.