ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ: ಎರಡನೇ ಟಿ20ಐನಿಂದ ಇಶಾನ್‌ ಕಿಶನ್‌ ಔಟ್‌, ಕುಮಾರ್‌ ಕುಶಾಗ್ರಾಗೆ ಸ್ಥಾನ!

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯಕ್ಕೂ ಮುನ್ನ ಬಿಸಿಸಿಐ ಮಹತ್ವದ ಪ್ರಕಟಣೆ ಹೊರಡಿಸಿದೆ. ಮೊದಲ ಪಂದ್ಯದಲ್ಲಿ ತೊಡೆಸಂದು ಭಾಗದ ಗಾಯಕ್ಕೆ ತುತ್ತಾಗಿದ್ದ ಇಶಾನ್ ಕಿಶನ್ ಎರಡನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಬದಲಿ ಸ್ಥಾನಕ್ಕೆ ಕುಮಾರ್‌ ಕುಶಾಗ್ರಾ ಅವರನ್ನು ಭಾರತ ತಂಡಕ್ಕೆ ಸೇರಿಸಲಾಗಿದೆ.

ಎರಡನೇ ಟಿ20ಐನಲ್ಲಿ ಇಶಾನ್‌ ಕಿಶನ್‌ ಸ್ಥಾನಕ್ಕೆ ಕುಮಾರ್‌ ಕುಶಾಗ್ರಾಗೆ ಸ್ಥಾನ

ಎರಡನೇ ಟಿ20ಐ ಪಂದ್ಯದಿಂದ ಇಶಾನ್‌ ಕಿಶನ್‌ ಔಟ್‌. -

Profile
Ramesh Kote Oct 23, 2026 10:38 PM

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಶನಿವಾರ (ಅಕ್ಟೋಬರ್ 24) ನಡೆಯಲಿರುವ ಎರಡನೇ ಟಿ20ಐ ಪಂದ್ಯದಿಂದ (IND vs NZ) ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ (Ishan Kishan) ಹೊರ ನಡೆದಿದ್ದಾರೆ. ಮೊದಲ ಟಿ20 ಪಂದ್ಯದ ವೇಳೆ ಅವರ ಬಲ ತೊಡೆಯ ಒಳಭಾಗದ ಸ್ನಾಯುವಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ. ಸದ್ಯಕ್ಕೆ ಕಿಶನ್ ಎರಡನೇ ಪಂದ್ಯದಿಂದ ಮಾತ್ರ ಹೊರಗುಳಿದಿದ್ದು, ಮುಂದಿನ ಪಂದ್ಯಗಳಲ್ಲಿ ಅವರ ಲಭ್ಯತೆಯ ಕುರಿತು ಸ್ಪಷ್ಟ ಮಾಹಿತಿ ನೀಡಿಲ್ಲ.

ಇಶಾನ್‌ ಕಿಶನ್ ಬದಲಿಯಾಗಿ ವಿಕೆಟ್‌ಕೀಪರ್-ಬ್ಯಾಟರ್ ಕುಮಾರ್ ಕುಶಾಗ್ರ ಅವರನ್ನು ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಕುಶಾಗ್ರ ಈಗಾಗಲೇ ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್‌ನಲ್ಲಿದ್ದಾರೆ. ಭಾರತ ಎ ಮತ್ತು ನ್ಯೂಜಿಲೆಂಡ್ ಎ ತಂಡಗಳ ನಡುವಿನ ಮೂರು ಅನಧಿಕೃತ ಟೆಸ್ಟ್ ಪಂದ್ಯಗಳ ಸರಣಿ ಅಕ್ಟೋಬರ್ 24ರಿಂದ ಆರಂಭವಾಗಲಿದೆ. ಆದರೆ, ಟಿ20 ತಂಡಕ್ಕೆ ಸೇರ್ಪಡೆಯಾದ ಕಾರಣ ಕುಶಾಗ್ರ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.

IND vs NZ 2nd T20I: ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ವಿವರ!

ಕುಶಾಗ್ರ ಭಾರತ ತಂಡದ ಏಕದಿನ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ. ಆದರೆ, ಅವರು ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಮಾತ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮೂರನೇ ಏಕದಿನ ಪಂದ್ಯ ನವೆಂಬರ್ 10ರಂದು ನಡೆಯಲಿದ್ದು, ಐದನೇ ಹಾಗೂ ಅಂತಿಮ ಪಂದ್ಯ ನವೆಂಬರ್ 15ರಂದು ಆಯೋಜಿಸಲಾಗಿದೆ. ಭಾರತ ತಂಡದ ಟೆಸ್ಟ್ ಆಟಗಾರರು ಮೂರನೇ ಏಕದಿನ ಪಂದ್ಯದ ಬಳಿಕ ಟೆಸ್ಟ್ ಸರಣಿಯ ಸಿದ್ಧತೆಗಾಗಿ ತಂಡದಿಂದ ತೆರಳಲಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ನವೆಂಬರ್ 19ರಿಂದ ಆರಂಭವಾಗಲಿದೆ.

ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಪರಿಷ್ಕೃತ ತಂಡ

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ (ಉಪನಾಯಕ), ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್ ಮತ್ತು ಕುಮಾರ್ ಕುಶಾಗ್ರ (ವಿಕೆಟ್‌ಕೀಪರ್).‌



ಇಶಾನ್ ಬದಲಿಗೆ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುತ್ತಾ?

ಇಶಾನ್ ಕಿಶನ್ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಎರಡನೇ ಟಿ20 ಪಂದ್ಯದ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಆದರೆ, ಅವರಿಗೆ ಆರಂಭಿಕ ಆಟಗಾರನಾಗಿ ಅವಕಾಶ ನೀಡಲಾಗುತ್ತದೆಯೇ ಅಥವಾ ಮೂರನೇ ಕ್ರಮಾಂಕದಲ್ಲಿ ಆಡಿಸಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

IND vs NZ: ಎರಡನೇ ಟಿ20ಐಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ತಂದ ಎಸ್‌ ಬದ್ರಿನಾಥ್!

ಏಷ್ಯನ್ ಗೇಮ್ಸ್‌ನಲ್ಲಿ ವೈಭವ್ ಸೂರ್ಯವಂಶಿ ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ಆಗ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಇತ್ತೀಚಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಸಂಜು ಉತ್ತಮ ಪ್ರದರ್ಶನ ನೀಡಿರುವುದರಿಂದ ಅವರನ್ನು ಕೆಳ ಕ್ರಮಾಂಕಕ್ಕೆ ಇಳಿಸುವುದು ತಂಡದ ಆಡಳಿತ ಮಂಡಳಿಗೆ ಸುಲಭದ ನಿರ್ಧಾರವಾಗುವುದಿಲ್ಲ. ಹೀಗಾಗಿ, ಎರಡನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಹೇಗಿರಲಿದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.