ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಮಾನವ ಜೀವ ಇಷ್ಟೊಂದು ಅಗ್ಗವೇ?!

ಜನರನ್ನು ರಕ್ಷಿಸುವ ಹೊಣೆ ಹೊತ್ತವರೇ ಹೀಗೆ ಜನಹತ್ಯೆಗೆ ಮುಂದಾದರೆ ಅದು ‘ಚೇಳಿಗೆ ಪಾರುಪತ್ಯ ವನ್ನು ಕೊಟ್ಟಂತೆ’ ಎಂಬ ಮಾತನ್ನು ನೆನಪಿಸುವ ನಡೆಯಾಗುತ್ತದೆ. ಆಡಳಿತಾರೂಢರ ವಿರುದ್ಧದ ಜನರ ಇಂಥ ದಂಗೆಗೆ ಕೆಲವೊಮ್ಮೆ ಬಾಹ್ಯಶಕ್ತಿಗಳ ಕುಮ್ಮಕ್ಕೂ ಇರುತ್ತದೆ ಎಂಬುದು ನಿಜವಾದರೂ, ಇರಾನ್ ವಿಷಯದಲ್ಲಿ ಆ ಗ್ರಹಿಕೆಯನ್ನು ಸಂಪೂರ್ಣ ನಂಬಲಾಗದು.

Vishwavani Editorial: ಮಾನವ ಜೀವ ಇಷ್ಟೊಂದು ಅಗ್ಗವೇ?!

-

Ashok Nayak
Ashok Nayak Jan 17, 2026 9:10 AM

ಆರ್ಥಿಕ ಪರಿಸ್ಥಿತಿಯು ಅತಿರೇಕವೆಂಬಷ್ಟರ ಮಟ್ಟಿಗೆ ಹದಗೆಟ್ಟಿರುವುದರಿಂದ ಹಾಗೂ ಜೀವನೋ ಪಾಯಕ್ಕೂ ಸಂಚಕಾರ ಒದಗಿರುವು ದರಿಂದ ಇರಾನಿನ ಜನರು ಆಕ್ರೋಶಗೊಂಡಿದ್ದಾರೆ. ಧಾರ್ಮಿಕ ನಾಯಕ ಆಯತೊಲ್ಲಾ ಅಲಿ ಖಮೇನಿ ಆಡಳಿತದ ವಿರುದ್ಧ ಅವರು ತೀವ್ರ ಪ್ರತಿಭಟನೆಗೆ ಮುಂದಾ ಗಿದ್ದಾರೆ.

ಆದರೆ ಸಮಸ್ಯೆಯ ಮೂಲವನ್ನು ಹುಡುಕಬೇಕಿದ್ದ ಆಳುಗರು ಅದರ ಗೋಜಿಗೂ ಹೋಗದೆ, ಪ್ರಾಣಿ ಗಳನ್ನು ಬಲಿ ಹಾಕುವ ರೀತಿಯಲ್ಲಿ ಜನರನ್ನು ಕೊಲ್ಲುತ್ತಿದ್ದಾರೆ. ಇದನ್ನು ಬರೆಯುತ್ತಿರುವ ಹೊತ್ತಿಗೆ ಜನರ ಸಾವಿನ ಸಂಖ್ಯೆ 3500ನ್ನು ಮೀರಿರುವುದು, ಶವಗಳನ್ನು ತೆರವು ಮಾಡಲು ಜೆಸಿಬಿ ಯಂತ್ರಗಳ ಬಳಕೆಯಾಗುತ್ತಿರುವುದು ಅಲ್ಲಿ ತಲೆದೋರಿರುವ ಭೀಕರತೆಗೆ ಸಾಕ್ಷಿ. ಈ ಬೆಳವಣಿಗೆಯನ್ನು ಅವಲೋಕಿಸಿದಾಗ, ‘ಮಾನವಜೀವ ಇಷ್ಟೊಂದು ಅಗ್ಗವಾಗಿ ಹೋಯಿತೇ?’ ಎಂಬ ವಿಷಾದಭರಿತ ಪ್ರಶ್ನೆ ಯಾರಲ್ಲಾದರೂ ಹೊಮ್ಮಿದರೆ ಅದೇನೂ ಅಚ್ಚರಿಯಲ್ಲ.

ಇದನ್ನೂ ಓದಿ: Vishwavani Editorial: ಶಾಂತಿದೂತನ ಇಬ್ಬಂದಿತನ

ಜನರನ್ನು ರಕ್ಷಿಸುವ ಹೊಣೆ ಹೊತ್ತವರೇ ಹೀಗೆ ಜನಹತ್ಯೆಗೆ ಮುಂದಾದರೆ ಅದು ‘ಚೇಳಿಗೆ ಪಾರು ಪತ್ಯವನ್ನು ಕೊಟ್ಟಂತೆ’ ಎಂಬ ಮಾತನ್ನು ನೆನಪಿಸುವ ನಡೆಯಾಗುತ್ತದೆ. ಆಡಳಿತಾರೂಢರ ವಿರುದ್ಧದ ಜನರ ಇಂಥ ದಂಗೆಗೆ ಕೆಲವೊಮ್ಮೆ ಬಾಹ್ಯಶಕ್ತಿಗಳ ಕುಮ್ಮಕ್ಕೂ ಇರುತ್ತದೆ ಎಂಬುದು ನಿಜವಾದರೂ, ಇರಾನ್ ವಿಷಯದಲ್ಲಿ ಆ ಗ್ರಹಿಕೆಯನ್ನು ಸಂಪೂರ್ಣ ನಂಬಲಾಗದು.

ಹೀಗಾಗಿ, ‘ಬೆಂಕಿಯಿಲ್ಲದೆ ಹೊಗೆ ಏಳುವುದಿಲ್ಲ’ ಎಂಬ ಸತ್ಯವನ್ನು ಆಳುಗರು ಇನ್ನಾದರೂ ಅರಿತು, ಸಮಸ್ಯೆಯ ಮೂಲವನ್ನು ಕಿತ್ತೊಗೆಯುವುದರ ಕಡೆಗೆ ಗಮನಹರಿಸಬೇಕಿದೆ. ‘ಕಾಯುವುದು ದೇವರ ಕೆಲಸ, ಕೊಲ್ಲುವುದು ರಾಕ್ಷಸರ ಕೆಲಸ’ ಎಂಬುದು ಹಿರಿಯರ ಹಿತೋಕ್ತಿ. ಸರಕಾರಗಳು ‘ಕಾಯುವ ದೇವರು’ ಆಗಬೇಕಿರುವುದು ಸಾರ್ವಕಾಲಿಕ ನಿರೀಕ್ಷೆ, ಅಲ್ಲವೇ?