ಒಮ್ಮತವಿಲ್ಲದೇ ಮುಗಿದ ಸಿಎಂ ಸಭೆ: ಇಂದು ರಾಜ್ಯ ಬಂದ್
ಅ.29ರಂದು ಕೇಂದ್ರದ ತಂಡ ರಾಜ್ಯಕ್ಕೆ ಬರಲಿದ್ದು, ಆಗ ನಾನು ರೈತರ ಪರವಾಗಿ ಧ್ವನಿಯೆತ್ತುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿ ಸಭೆಗೂ ಮುನ್ನ ಚೂನಪ್ಪ ಪೂಜೇರಿ ಬಣದ ನಾಯಕರು, ಕೋಡಿಹಳ್ಳಿ ಚಂದ್ರಶೇಖರ್(Kodihalli Chandrashekher) ಬಣದ ರೈತ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಪರಸ್ಪರ ಘರ್ಷ ಣೆಯವರೆಗೂ ಹೋಗಿತ್ತು. ಕೆಲವರು ಈ ವೇಳೆ ಬಟ್ಟೆ ಹರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
-
ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಸೋಮವಾರ ನಡೆದ ಕಬ್ಬು ಬೆಳೆಗಾರರು ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ನಡುವಿನ ಮಾತುಕತೆ ಯಲ್ಲಿ ಯಾವುದೇ ಮಹತ್ವದ ನಿರ್ಧಾರವಾಗಿಲ್ಲ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕೇಂದ್ರ ಸರ್ಕಾರ ನಿರ್ಧರಿಸುವವರೆಗೆ, ಇತರೆ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಹೇಳಿರುವು ದರಿಂದ, ರೈತಸಂಘ ಗಳು ಸಿಟ್ಟಾಗಿದ್ದು ಮಂಗಳವಾರ ರಾಜ್ಯ ಬಂದ್(karnataka Bandh)ಗೆ ಕರೆ ನೀಡಿವೆ.
ಅ.29ರಂದು ಕೇಂದ್ರದ ತಂಡ ರಾಜ್ಯಕ್ಕೆ ಬರಲಿದ್ದು, ಆಗ ನಾನು ರೈತರ ಪರವಾಗಿ ಧ್ವನಿಯೆತ್ತುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿ ಸಭೆಗೂ ಮುನ್ನ ಚೂನಪ್ಪ ಪೂಜೇರಿ ಬಣದ ನಾಯಕರು, ಕೋಡಿಹಳ್ಳಿ ಚಂದ್ರಶೇಖರ್(Kodihalli Chandrashekher) ಬಣದ ರೈತ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಪರಸ್ಪರ ಘರ್ಷ ಣೆಯವರೆಗೂ ಹೋಗಿತ್ತು. ಕೆಲವರು ಈ ವೇಳೆ ಬಟ್ಟೆ ಹರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಗಲಾಟೆ ಮಾಡುತ್ತಿದ್ದವರನ್ನು ಹೊರಗೆ ಒಯ್ದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ರೈತರು -ಸಿಎಂ ಸಭೆಯಲ್ಲಿ ಮಾತುಕತೆಗಿಂತ ಹೆಚ್ಚಾಗಿ ಘರ್ಷಣೆಯ ಕಾರಣಕ್ಕೆ ವಿವಾದ ಹುಟ್ಟಿಸಿದೆ. ಸಂಘರ್ಷವೇಕೆ?: ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಚರ್ಚಿಸಲು ವಿವಿಧ ಬಣಗಳ ರೈತ ಮುಖಂಡರು ಹಾಗೂ ರೈತರು ಸುವರ್ಣಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಸಂಜೆ 4ರ ಹೊತ್ತಿಗೆ ಸೇರಿದ್ದರು. ಆಗಿನ್ನೂ ಮುಖ್ಯಮಂತ್ರಿಯ ಆಗಮನವಾಗಿರಲಿಲ್ಲ. ಈ ಹೊತ್ತಿನಲ್ಲೇ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ ಸುವರ್ಣ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಿಎಂ ಸಭೆ ನಡೆಸಿದ್ದರು. ಬಳಿಕ ಅವರು ಸವದತ್ತಿಯ ಸರ್ಕಾರಿ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳ ಮುಖಂಡರು ಸೆಂಟ್ರಲ್ ಸಭಾಂಗಣದಲ್ಲಿ ಜಮಾಯಿಸಿ ಮುಖ್ಯಮಂತ್ರಿಗಳ ಆಗಮನಕ್ಕಾಗಿ ಕಾಯುತ್ತಿದ್ದರು.
ಆ ವೇಳೆ ಮಾತನಾಡುತ್ತಿದ್ದ ಚೂನಪ್ಪ ಪೂಜೇರಿ, ಪ್ರತಿ ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳಿಂದ 4500 ರು. ಹಾಗೂ ರಾಜ್ಯ ಸರ್ಕಾರದಿಂದ 1000 ರು. ಪ್ರೋತ್ಸಾಹಧನ ನೀಡಬೇಕು. ಈ ಮೂಲಕ ರೈತರಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟು ರು. 5500 ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಚೂನಪ್ಪ ಪೂಜೇರಿ ಒತ್ತಾಯಿಸುತ್ತಿದ್ದರು. ಈ ವೇಳೆ ಪೂರ್ಣ ಕೇಳಿಸಿಕೊಳ್ಳದ ಕೋಡಿಹಳ್ಳಿ ಬಣದ ಕಾರ್ಯಕರ್ತರು, ಯಾಕೆ ಬರೀ 4500 ರು. ಎಂದು ಹೇಳುತ್ತಿದ್ದೀರಿ ಎಂದು ಕೆರಳಿದರು.
ಕಲಬುರಗಿ ಮೂಲದ ರೈತ ಮುಖಂಡ ರೊಬ್ಬರು, ಚೂನಪ್ಪ ಪೂಜೇರಿಯನ್ನು ಸೂಟ್‌ಕೇಸ್ ಗಿರಾಕಿ ಎಂದು ಟೀಕಿಸಿದರು. ಇದೇ ವೇಳೆ ಕುಡಿಯುವ ನೀರಿನ ಗ್ಲಾಸ್ ಎಸೆದ ಪರಿಣಾಮ ಪರಿಸ್ಥಿತಿ ಏಕಾಏಕಿ ಉದ್ವಿಗ್ನಗೊಂಡಿತು. ತಮ್ಮ ಮುಖಂಡರ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಕ್ಕೆ, ಪೂಜೇರಿ ಬಣದ ರೈತರು ಕೆರಳಿದರು. ಪರಸ್ಪರ ಆರೋಪ- ಪ್ರತ್ಯಾರೋಪಗಳು ಹೆಚ್ಚಾದಂತೆ ಪರಿಸ್ಥಿತಿ ಕೈಮೀರಿ ಮಾರಾಮಾರಿಗೆ ತಿರುಗಿತು. ಕಬ್ಬು ಬೆಳೆಯಲು ತಗಲುತ್ತಿರುವ ವೆಚ್ಚ, ಕೃಷಿ ಕಾರ್ಮಿಕರ ಕೂಲಿ, ರಸಗೊಬ್ಬರ ಹಾಗೂ ಇತರ ಕೃಷಿ ಸಾಮಗ್ರಿಗಳ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಸೂಕ್ತ ದರ ದೊರೆಯಬೇಕೆಂಬುದು ರೈತ ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬಿನ ದರ ನಿಗದಿ ವಿಚಾರವಾಗಿ ರೈತ ಮುಖಂಡರು ತಮ್ಮ ನಿಲುವುಗಳನ್ನು ಮಂಡಿಸುತ್ತಿದ್ದರು.
ಪೊಲೀಸರ ಹರಸಾಹಸ: ರೈತರ ನಡುವೆ ಗಲಾಟೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದ ರೈತರನ್ನು ಸಮಾಧಾನಪಡಿಸಿ, ಗಲಾಟೆ ಮತ್ತಷ್ಟು ತೀವ್ರಗೊಳ್ಳದಂತೆ ತಡೆಯಲು ಪೊಲೀಸರು ಹರಸಾಹಸಪಡ ಬೇಕಾಯಿತು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರೈತರ ಸಮಸ್ಯೆಗಳ ಕುರಿತು ಮಹತ್ವದ ಚರ್ಚೆ ನಡೆಯಬೇಕಿದ್ದ ಸುವರ್ಣ ವಿಧಾನಸೌಧದ ಸಭಾಂಗಣದ ರೈತ ಬಣಗಳ ನಡುವೆ ಸಂಘರ್ಷ ನಡೆದಿದ್ದು ಪೊಲೀಸರಿಗೆ ನಿಯಂತ್ರಣ ಮಾಡುವುದು ಸವಾಲ್ ಆಗಿ ಪರಿಣಮಿಸಿತ್ತು. ಕೂಡಲೇ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಹೋರಾಟ ಮುಂದುವರಿಯುತ್ತೆ
ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಆಗುವವರೆಗೆ ರಾಜ್ಯ ರೈತ ಸಂಘಟನೆ ಹೋರಾಟ ಮುಂದುವರಿಸಲಿದ್ದೇವೆ ಎಂದು ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹೇಳಿದ್ದಾರೆ. ಈಗಾಗಲೇ ರೈತ ಸಂಘಟನೆಯಿಂದ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಾವಿರಾರು ಸಂಖ್ಯೆಯ ರೈತರು ಜಮಾವಣೆ ಆಗುತ್ತಿದ್ದು ಹೋರಾಟ ತೀವ್ರ ಸ್ವರೂಪ ಪಡೆಯುವಲ್ಲಿ ಅನುಮಾನವಿಲ್ಲ.
![]()
ಪ್ರತಿ ಕಬ್ಬ ಟನ್’ಗೆ 5500 ರು. ನೀಡಬೇಕೆಂದು ನಿರಂತರವಾಗಿ ಮುಖ್ಯ ಮಂತ್ರಿಗೆ ಒತ್ತಾಯ ಮಾಡಲಾಗಿದೆ. ಜೊತೆ ಗೆ ತೂಕದಲ್ಲಿ ಆಗುತ್ತಿರುವ ಮೋಸಕ್ಕೆ ಕಡಿವಾಣ ಹಾಕುವುದು ಸೇರಿದಂತೆ ಸಾಕಷ್ಟು ಬೇಡಿಕೆ ಇವೆ. ನಮ್ಮ ಒತ್ತಾಯಗಳಿಗೆ ಉದ್ದೇಶ ಪೂರ್ವಕವಾಗಿ ಕೆಲ ರೈತರು ವಿರೋಧ ಮಾಡಿದ್ದಾರೆ. ಈ ರೀತಿಯ ಬೆಳವಣಿಗೆಗಳು ನಡೆಯಬಾರದು. ಅದು ಒಳಿತಲ್ಲ.
-ಚೂನಪ್ಪ ಪೂಜೇರಿ, ರೈತ ನಾಯಕ
![]()
ರೈತರ ಸಮಸ್ಯೆ ಕುರಿತು ಕೇಂದ್ರದ ಜೊತೆ ಮಾತನಾಡಲು ಸಿದ್ದರಿದ್ದೇವೆ. ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ನೀಡಲು 22 ಸಾವಿರ ಕೋಟಿ ರು., ಗೃಹಜ್ಯೋತಿಗೆ 7 ಸಾವಿರ ಕೋಟಿ ರು. ವೆಚ್ಚವಾಗುತ್ತಿದೆ. ಈ ವರ್ಷ ಬರದ ಹಿನ್ನೆಲೆಯಲ್ಲಿ 9 ಸಾವಿರ ಕೋಟಿ ರು. ಹೆಚ್ಚುವರಿ ಹಣ ಕಟ್ಟಬೇಕಿದೆ. ನಮ್ಮ ಆರ್ಥಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ