ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sugarcane farmers protest: ಕಬ್ಬಿಗೆ ₹5,500 ದರಕ್ಕೆ ಪಟ್ಟು; ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಕೆ: ಹೆದ್ದಾರಿ ಮೇಲೆಯೇ ಅನ್ನದಾತರ ಊಟ

ಕಬ್ಬಿಗೆ ಕ್ವಿಂಟಲ್‌ಗೆ ₹5,500 ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ರಾಮಮಂದಿರ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸುತ್ತಿರುವ ರೈತರು ಮಂಗಳವಾರ ರಾತ್ರಿ ರಸ್ತೆಯ ಮೇಲೆಯೇ ಊಟ ಮಾಡಿ ಹೋರಾಟ ಮುಂದುವರಿಸಿದರು. ಹಗಲು-ರಾತ್ರಿ ಎನ್ನದೆ ಹೆದ್ದಾರಿಯಲ್ಲೇ ಕುಳಿತಿರುವ ಅನ್ನದಾತರು, ಮನೆಗೆ ತೆರಳಿ ಊಟ ಮಾಡುವ ಬದಲು ಪ್ರತಿಭಟನಾ ಸ್ಥಳದಲ್ಲೇ ಊಟ ಸೇವಿಸಿ ಹೋರಾಟದ ಕಾವು ಹೆಚ್ಚಿಸಿದರು. ಚಪಾತಿ, ಆಲೂ ಪಲ್ಯ, ಹೆಸರು ಪಲ್ಯ, ಸೋನಪಾಪಡಿ, ಚಿತ್ರಾನ್ನ ಹಾಗೂ ಹುಗ್ಗಿಯನ್ನು ರೈತರು ಒಟ್ಟಿಗೆ ಕುಳಿತು ಸವಿದರು.

ಹೆದ್ದಾರಿ ಮೇಲೆಯೇ ಅನ್ನದಾತರ ಊಟ

-

Profile
Ashok Nayak Oct 13, 2026 10:16 PM

ರಾತ್ರಿ ಧರಣಿಯಲ್ಲೇ ಚಪಾತಿ, ಪಲ್ಯ, ಚಿತ್ರಾನ್ನ, ಹುಗ್ಗಿ ಸವಿದ ರೈತರು

ಕಲಬುರಗಿ: ಕಬ್ಬಿಗೆ ಕ್ವಿಂಟಲ್‌ಗೆ ₹5,500 ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ರಾಮಮಂದಿರ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸುತ್ತಿರುವ ರೈತರು ಮಂಗಳವಾರ ರಾತ್ರಿ ರಸ್ತೆಯ ಮೇಲೆಯೇ ಊಟ ಮಾಡಿ ಹೋರಾಟ ಮುಂದುವರಿಸಿದರು.

ಹಗಲು-ರಾತ್ರಿ ಎನ್ನದೆ ಹೆದ್ದಾರಿಯಲ್ಲೇ ಕುಳಿತಿರುವ ಅನ್ನದಾತರು, ಮನೆಗೆ ತೆರಳಿ ಊಟ ಮಾಡುವ ಬದಲು ಪ್ರತಿಭಟನಾ ಸ್ಥಳದಲ್ಲೇ ಊಟ ಸೇವಿಸಿ ಹೋರಾಟದ ಕಾವು ಹೆಚ್ಚಿಸಿದರು. ಚಪಾತಿ, ಆಲೂ ಪಲ್ಯ, ಹೆಸರು ಪಲ್ಯ, ಸೋನಪಾಪಡಿ, ಚಿತ್ರಾನ್ನ ಹಾಗೂ ಹುಗ್ಗಿಯನ್ನು ರೈತರು ಒಟ್ಟಿಗೆ ಕುಳಿತು ಸವಿದರು.

ಇದನ್ನೂ ಓದಿ: Sugar cane Farmer protest: ಕೇಂದ್ರದೊಂದಿಗೆ ನಡೆದ ಸಂಧಾನ ಸಭೆ ವಿಫಲ, ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡದಿರಲು ರೈತರ ನಿರ್ಧಾರ

ಜೈ ಕರ್ನಾಟಕ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ್ ಅವರ ವತಿಯಿಂದ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನಾಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದ್ದು, ರೈತರ ಹೋರಾಟಕ್ಕೆ ಸಾರ್ವಜನಿಕರು ಸಹಾಯಹಸ್ತ ಚಾಚಿದರು.

ಕೇಂದ್ರದೊಂದಿಗೆ ನಡೆದ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡದಿರಲು ರೈತರು ನಿರ್ಧರಿಸಿದ್ದಾರೆ. ಹೀಗಾಗಿ ರಾಮಮಂದಿರ ವೃತ್ತದಲ್ಲಿ ಅಹೋ ರಾತ್ರಿ ಹೆದ್ದಾರಿ ಧರಣಿ ಮುಂದುವರಿದಿದೆ.

ಪ್ರತಿಭಟನೆಯಲ್ಲಿ ಸಿದ್ದರಾಮ ದಣ್ಣೂರ, ಶರಣಬಸಪ್ಪ ಮಮಶೆಟ್ಟಿ, ಜೇವರ್ಗಿಯ ಮಲ್ಲಣ್ಣಗೌಡ, ಶಿವಾನಂದ, ಬಸವರಾಜಪ್ಪ ಕೋರಿ, ಸುಖೇಶ ರೆಡ್ಡಿ ಜೈನಾಪುರ, ಎಂ.ಎಸ್. ಪಾಟೀಲ ನರಿಬೋಳ, ಮಲ್ಲಿಕಾರ್ಜುನ ಸಾರವಾಡ್, ಸಿದ್ದು ಎಸ್.ಎಲ್., ಕರೆಪ್ಪ ಕಾರಿಗೊಂಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.