ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Belgaum News: ಗೊಡಚಿಯಲ್ಲಿ ಪರಿಸರ ಜಾಗೃತಿ ಶಿಬಿರ: 50 ಗಿಡಗಳ ವಿತರಣೆ

ಗಿಡ ನೆಡುವುದು, ಸಾವಯವ ಕೃಷಿ ಅಳವಡಿಸಿಕೊಳ್ಳುವುದು, ಮನೆ ತೋಟ ಬೆಳೆಸುವುದು, ಸಾರ್ವಜನಿಕ ಸಾರಿಗೆ ಬಳಕೆ, ವಾಹನಗಳ ಮಾಲಿನ್ಯ ನಿಯಂತ್ರಣ ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. “ಇಂದು ನಾವು ಪರಿಸರವನ್ನು ರಕ್ಷಿಸಿದರೆ, ನಾಳೆ ಪರಿಸರ ನಮ್ಮನ್ನು ರಕ್ಷಿಸುತ್ತದೆ

ಗೊಡಚಿಯಲ್ಲಿ ಪರಿಸರ ಜಾಗೃತಿ ಶಿಬಿರ: 50 ಗಿಡಗಳ ವಿತರಣೆ

-

Profile
Ashok Nayak Jun 17, 2026 9:21 PM

ಗೊಡಚಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯರಗಟ್ಟಿ ತಾಲೂಕಿನ ನರಸಾ ಪುರ ವಲಯದ ವತಿಯಿಂದ ಗೊಡಚಿ ಗ್ರಾಮದ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಪರಿಸರ ಜಾಗೃತಿ ಶಿಬಿರ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಸ್.ಪಿ. ಮಾಶಾಳಿ ವಹಿಸಿದ್ದರು. ಕುಮಾರಿ ಆರತಿ ಹಾಗೂ ಸಂಗಡಿಗರು ಪ್ರಾರ್ಥನೆಯ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: Belagavi News: ಬೆಳಗಾವಿಯಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳು ಅರೆಸ್ಟ್‌

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಬಸವರಾಜ ಎನ್.ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಪರಿಸರ ಹಸಿರಾಗಿದ್ದರೆ ಮಾತ್ರ ಶುದ್ಧ ಗಾಳಿ, ನೀರು ಹಾಗೂ ಆರೋಗ್ಯಕರ ಜೀವನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿಜ್ಞಾನ ಶಿಕ್ಷಕ ಐ.ಯಂ. ಮುಗುದುಮ್ ಅವರು, ಗಿಡ ನೆಡುವುದು, ಸಾವಯವ ಕೃಷಿ ಅಳವಡಿಸಿಕೊಳ್ಳುವುದು, ಮನೆ ತೋಟ ಬೆಳೆಸುವುದು, ಸಾರ್ವಜನಿಕ ಸಾರಿಗೆ ಬಳಕೆ, ವಾಹನಗಳ ಮಾಲಿನ್ಯ ನಿಯಂತ್ರಣ ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. “ಇಂದು ನಾವು ಪರಿಸರವನ್ನು ರಕ್ಷಿಸಿದರೆ, ನಾಳೆ ಪರಿಸರ ನಮ್ಮನ್ನು ರಕ್ಷಿಸುತ್ತದೆ” ಎಂದು ಹೇಳಿದರು.

Ravi P 2

ಯೋಜನೆಯ ಮೇಲ್ವಿಚಾರಕ ಚಂದ್ರಪ್ಪ ಅವರು ಯೋಜನೆಯ ವಿವಿಧ ಕಾರ್ಯಕ್ರಮಗಳು ಹಾಗೂ ರೂಪುರೇಷೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಗಳಾದ ಕಮಲಾ ಬಾವಣ್ಣವರ, ನಿರ್ಮಲ ಹಿರೇಮಠ, ಮೀನಾಕ್ಷಿ ಚನಶಟ್ಟಿ, ಶಾಲೆಯ ಶಿಕ್ಷಕರಾದ ಎ.ಎಚ್. ಅಲ್ಲಳಿಮಠ, ಎಸ್.ಎಸ್. ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 135 ವಿದ್ಯಾರ್ಥಿಗಳು ಭಾಗವಹಿಸಿ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣ ವಾಗಿ ಆಚರಿಸಿದರು. ಇದೇ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 50 ಗಿಡಗಳನ್ನು ವಿತರಿಸಿ ಶಾಲಾ ಆವರಣದಲ್ಲಿ ನೆಡಿಸಲಾಯಿತು.