ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA Shashikala Jolle: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನಾಡಿಯ 30ಕ್ಕೂ ಹೆಚ್ಚು ಕಾರ್ಯಕರ್ತರು: ಶಾಸಕಿ ಶಶಿಕಲಾ ಜೊಲ್ಲೆ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ

ಕ್ಷೇತ್ರದ ಬೆನಾಡಿ ಗ್ರಾಮದ ದಲಿತ ಸಮಾಜದ ಪ್ರಮುಖ ಮುಖಂಡರಾದ ಬಾಳಾಸೋ ಮಾಳಗೆ, ಮೋಹನ ಕೋರೆ, ಅಜೀತ ಮಾನೆ ಹಾಗೂ ಮಹಾದೇವ ಬೋರೆ ಅವರ ನೇತೃತ್ವದಲ್ಲಿ, ರಾಷ್ಟ್ರವಾದಿ ಕಾಂಗ್ರೆಸ್ (NCP) ಹಾಗೂ ಕಾಂಗ್ರೆಸ್ ಪಕ್ಷದ 30ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಇತ್ತೀಚೆಗೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ಸೇರ್ಪಡೆಯಾದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನಾಡಿಯ 30ಕ್ಕೂ ಹೆಚ್ಚು ಕಾರ್ಯಕರ್ತರು

-

Profile
Ashok Nayak Jul 23, 2026 9:37 PM

ನಿಪ್ಪಾಣಿ: ಕಾಂಗ್ರೆಸ್ ಕಾರ್ಯಕರ್ತರ ಸೇರ್ಪಡೆಯಿಂದ ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಆನೆ ಬಲ ಬಂದಂತಾಗಿದೆ ಎಂದು ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ (MLA Shashikala Jolle)ಅಭಿಪ್ರಾಯಪಟ್ಟಿದ್ದಾರೆ.

ಕ್ಷೇತ್ರದ ಬೆನಾಡಿ ಗ್ರಾಮದ ದಲಿತ ಸಮಾಜದ ಪ್ರಮುಖ ಮುಖಂಡರಾದ ಬಾಳಾಸೋ ಮಾಳಗೆ, ಮೋಹನ ಕೋರೆ, ಅಜೀತ ಮಾನೆ ಹಾಗೂ ಮಹಾದೇವ ಬೋರೆ ಅವರ ನೇತೃತ್ವದಲ್ಲಿ, ರಾಷ್ಟ್ರವಾದಿ ಕಾಂಗ್ರೆಸ್ (NCP) ಹಾಗೂ ಕಾಂಗ್ರೆಸ್ ಪಕ್ಷದ 30ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಇತ್ತೀಚೆಗೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ಸೇರ್ಪಡೆಯಾದರು.

ಇದನ್ನೂ ಓದಿ: Nippani BJP: ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆ: 50ಕ್ಕೂ ಹೆಚ್ಚು ಕಾರ್ಯಕರ್ತರ ಸೇರ್ಪಡೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಕೈಗೊಂಡಿರುವ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಈ ನಾಯಕರು ಬಿಜೆಪಿ ಪಕ್ಷದ ತತ್ವ-ಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರಿದ್ದಾರೆ.

ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದ ಸಂಜಯ ಗೋರೆ, ದೀಪಕ ಗೋರೆ, ರಮೇಶ ಕೋರೆ, ಪ್ರಭಾಕರ ಮಧಾಳೆ, ಗಣಪತಿ ಗೋರೆ, ಅರ್ಜುನ ಕಾಂಬಳೆ, ಸುರೇಖಾ ವರಾಲೆ, ರಾಜಶ್ರೀ ಮಾಳಗೆ ಸೇರಿದಂತೆ ಹಲವು ಮುಖಂಡರನ್ನು ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಪಕ್ಷದ ಶಾಲ ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಕಾರ್ಯಕ್ರಮದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ರಮೇಶ ಪಾಟೀಲ, ಶ್ರೀಕಾಂತ ಬನ್ನೇ, ಭರತ ನಸಲಾಪುರೆ, ರಾಜು ಚಂದುರೆ, ಪಾಂಡುರಂಗ ಪಾಟೀಲ, ಸತ್ಯಪ್ಪ ಹಜಾರೆ, ಶಿವರಾಜ ಪನ್ನೂರೆ, ಅರುಣ ಜಾವೀರ, ಸದಾಶಿವ ಜನವಾಡೇ, ರಾವಸಾಬ ಜನವಾಡೆ, ಲಕ್ಷ್ಮೀ ಖೋತ, ಬಬನ ಹವಾಲ್ದಾರ, ಕಲ್ಲಪ್ಪ ನಾಯಿಕ, ರಮೇಶ ಖೋತ, ರಾಜು ಖೋತ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

image

ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕನಸು ಮತ್ತು ಕ್ಷೇತ್ರದಲ್ಲಿ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಬೆನಾಡಿ ಗ್ರಾಮದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಕಾರ್ಯ ಕರ್ತರ ಸೇರ್ಪಡೆಯಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ಬಲಗೊಂಡಿದೆ.

— ಶಶಿಕಲಾ ಜೊಲ್ಲೆ, ಶಾಸಕರು (ನಿಪ್ಪಾಣಿ)