ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Basavakalyana News: ಬೀಜ-ರಸಗೊಬ್ಬರ ಖರೀದಿಗೆ ಮುಗಿಬಿದ್ದ ಅನ್ನದಾತರು

ತಾಲೂಕಿನ ವಿವಿಧ ಹೋಬಳಿಗಳಲ್ಲಿ ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ಬೀಜ ವಿತರಣೆ ಕಾರ್ಯ ಭರದಿಂದ ಸಾಗಿದೆ. ಹುಲಸೂರು, ರಾಜೇಶ್ವರ, ಮುಡಬಿ, ಮಂಠಾಳ ಸೇರಿದಂತೆ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ರೈತರು ಸರತಿ ಸಾಲಿನಲ್ಲಿ ನಿಂತು ಸೋಯಾಬಿನ್, ತೊಗರಿ, ಹೆಸರು, ಉದ್ದು ಬೀಜಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯ ವಾಗಿದೆ. ಗುಣಮಟ್ಟದ ಬೀಜ ದೊರೆಯುತ್ತಿರುವುದರಿಂದ ರೈತರಲ್ಲಿ ಉತ್ಸಾಹ ಹೆಚ್ಚಾಗಿದೆ.

ಮಳೆ ಚುರುಕು: ರೈತರ ಮುಖದಲ್ಲಿ ಮಂದಹಾಸ

-

Profile
Ashok Nayak May 31, 2026 7:53 AM

ಬಸವಕಲ್ಯಾಣ: ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ ಭೂಮಿ ಹಸನಾಗಿದ್ದು, ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಯಲ್ಲಿ ಬೀಜ, ರಸಗೊಬ್ಬರ ಖರೀದಿಗಾಗಿ ರೈತಾಪಿ ವರ್ಗ ಕೃಷಿ ಕೇಂದ್ರಗಳತ್ತ ಮುಖ ಮಾಡುತ್ತಿದೆ.

ತಾಲೂಕಿನ ವಿವಿಧ ಹೋಬಳಿಗಳಲ್ಲಿ ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ಬೀಜ ವಿತರಣೆ ಕಾರ್ಯ ಭರದಿಂದ ಸಾಗಿದೆ. ಹುಲಸೂರು, ರಾಜೇಶ್ವರ, ಮುಡಬಿ, ಮಂಠಾಳ ಸೇರಿದಂತೆ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ರೈತರು ಸರತಿ ಸಾಲಿನಲ್ಲಿ ನಿಂತು ಸೋಯಾಬಿನ್, ತೊಗರಿ, ಹೆಸರು, ಉದ್ದು ಬೀಜಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಗುಣಮಟ್ಟದ ಬೀಜ ದೊರೆಯುತ್ತಿರುವುದರಿಂದ ರೈತರಲ್ಲಿ ಉತ್ಸಾಹ ಹೆಚ್ಚಾಗಿದೆ.

ಇದನ್ನೂ ಓದಿ: Belagavi News: ಘಟಪ್ರಭಾ ಎಡದಂಡೆ ಕಾಲುವೆಯ ನೀರು ಸಮರ್ಪಕವಾಗಿ ತಲುಪಲಿ

ಈಗಾಗಲೇ ಸ್ಥಳೀಯ ಶಾಸಕ ಶರಣು ಸಲಗರ್(MLA Sharanu Salagar) ತಾಲೂಕಿನ ಮುಖ್ಯ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಬೀಜ-ರಸಗೊಬ್ಬರ ವಿತರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕಳಪೆ ಬೀಜ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಹೋಬಳಿಗೂ ಸಾಕಷ್ಟು ದಾಸ್ತಾನು ಕಳುಹಿಸಲಾಗಿದೆ ಎಂದು ಭರವಸೆ ನೀಡಿದರು.

ಕೃಷಿ ಇಲಾಖೆಯ ಅಧಿಕಾರಿಗಳ ತಾಲೂಕಿಗೆ ಈ ಬಾರಿ ಸೋಯಾಬಿನ್ ತೊಗರಿ ಬೀಜ ಸೇರಿದಂತೆ ಯಾವುದೇ ಬೀಜ ಗಳಿಗೆ ಕೊರತೆ ಇಲ್ಲ. ಅಧಿಕ ಬಿತ್ತನೆ ಬೀಜ ಪೂರೈಕೆಯಾಗಿದೆ. ಜೊತೆಗೆ ಡಿಎಪಿ, ಯೂರಿಯಾ, ಕಾಂಪ್ಲೆಕ್ಸ್ ಗೊಬ್ಬರಗಳ ದಾಸ್ತಾನು ಸಹ ಸಮರ್ಪಕವಾಗಿದೆ. ರೈತರು ಆಧಾರ್ ಕಾರ್ಡ್, ಪಹಣಿ ತೋರಿಸಿ ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದೆ.

Baila  2

ಕಳೆದ ವರ್ಷ ಮಳೆ ಕೈಕೊಟ್ಟಿತ್ತು. ಈ ಬಾರಿ ಆರಂಭದಲ್ಲೇ ಉತ್ತಮ ಮಳೆಯಾಗಿದೆ. ಸಮಯಕ್ಕೆ ಸರಿಯಾಗಿ ಬೀಜ ಸಿಗುತ್ತಿದೆ. ಇದರಿಂದ ಖುಷಿಯಾಗಿದೆ ಎಂದು ಹುಲಸೂರು ಹೋಬಳಿಯ ರೈತ ಶಿವಕುಮಾರ ಹೇಳಿದರು.

ಒಟ್ಟಾರೆ ಮುಂಗಾರು ಚುರುಕಿನಿಂದ ರೈತರಲ್ಲಿ ಹೊಸ ಹುರುಪು ಮೂಡಿದ್ದು, ಕೃಷಿ ಚಟು ವಟಿಕೆಗಳು ಗರಿಗೆದರಿವೆ. ಕೃಷಿ ಇಲಾಖೆ ಸಹಾಯವಾಣಿ 1800-425-3553 ಗೆ ಕರೆ ಮಾಡಿ ರೈತರು ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

image

ತಾಲೂಕಿನಲ್ಲಿ ಸೋಯಾಬಿನ್ ಬೀಜ ಸೇರಿದಂತೆ ಇತರೆ ಬೀಜಗಳಿಗೆ ಕೊರತೆ ಇಲ್ಲ. ರೈತರು ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ ಭೂಮಿ ಸರಿಯಾಗಿ ಹದ ಆದ ನಂತರ ತೇವಾಂಶ ನೋಡಿಕೊಂಡು ರೈತರು ಬಿತ್ತನೆ ಮಾಡಿದರೆ ಒಳಿತು.

ಗೌತಮ್ ಕೃಷಿ ಸಹಾಯಕ ನಿರ್ದೇಶಕ ತಾಲೂಕ ಅಧಿಕಾರಿ ಬಸವಕಲ್ಯಾಣ
image

ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು ಕೃಷಿ ಇಲಾಖೆಯಿಂದ ಸಿಗಬೇಕು ಅದರ ಜೊತೆಗೆ ಸರಿಯಾದ ಸಮಯಕ್ಕೆ ಬೀಜಗಳು ದೊರೆತರೆ ರೈತರಿಗೆ ಇನ್ನಷ್ಟು ಅನುಕೂಲವಾಗುತ್ತದೆ.

ಸುರೇಶ್ ಮೂಳೆ ರೈತರ ಜಾಫರವಾಡಿ.