ಉಸಿರಾಟ ತೊಂದರೆ; ಆಕ್ಸಿಜನ್ ಸಿಲಿಂಡರ್ ಸಮೇತ ತೆರಳಿ ಪತ್ನಿಗೆ ಮಾಯಕ್ಕ ದೇವಿ ದರ್ಶನ ಮಾಡಿಸಿದ ಪತಿ
ಪತ್ನಿಗೆ ಉಸಿರಾಟ ತೊಂದರೆ ಇದ್ದರೂ ಆಕ್ಸಿಜನ್ ಸಿಲಿಂಡರ್ ಜತೆಗೆ ಮಹಾರಾಷ್ಟ್ರದ ಪಂಢರಪುರದ ದಂಪತಿ 176 ಕಿ.ಮೀಟರ್ ಸಂಚರಿಸಿ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಘಟನೆ ಬುಧವಾರ ನಡೆದಿದೆ.
ಆಕ್ಸಿಜನ್ ಜತೆಯಲ್ಲೇ ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಮಹಾರಾಷ್ಟ್ರದ ಪಂಢರಪುರದ ದಂಪತಿ -
ರಾಯಬಾಗ, ಫೆ.4: ಪತ್ನಿಗೆ ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಪತಿಯು ಆಕೆಯನ್ನು ಆಕ್ಸಿಜನ್ ಸಿಲಿಂಡರ್ ಸಮೇತ 176 ಕಿ.ಮೀ. ದೂರ ಕರೆತಂದು, ಚಿಂಚಲಿ ಮಾಯಕ್ಕ ದೇವಿಯ ದರ್ಶನ ಮಾಡಿಸಿರುವ ಘಟನೆ ಬುಧವಾರ ನಡೆದಿದೆ. ಮಹಾರಾಷ್ಟ್ರದ ಪಂಢರಪುರದ ದಂಪತಿ, ಕಳೆದ 15 ವರ್ಷಗಳಿಂದ (Belagavi News) ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಪತ್ನಿಗೆ ಶ್ವಾಸಕೋಶ ಸಮಸ್ಯೆ ಉಂಟಾಗಿದೆ. ಹೀಗಾಗಿ ವೈದ್ಯರ ಸೂಚನೆ ಮೇರೆಗೆ ಆಕ್ಸಿಜನ್ ಸಿಲಿಂಡರ್ ಜತೆಯೇ ಅನಾರೋಗ್ಯ ಪೀಡಿತ ಪತ್ನಿಯನ್ನು ಕರೆತಂದು ದೇವಿ ದರ್ಶನ ಮಾಡಿಸಿದ್ದಾರೆ.
ವೈದ್ಯರ ಸೂಚನೆ ಮೇರೆಗೆ ಆಕ್ಸಿಜನ್ ಜತೆಗೆ ಅನಾರೋಗ್ಯ ಪೀಡಿತ ಪತ್ನಿಗೆ ದೇವಿ ದರ್ಶನ ಮಾಡಿಸಿದ್ದಾರೆ. ಎಷ್ಟೇ ತೊಂದರೆ ಇದ್ದರೂ ದೇವಿ ದರ್ಶನ ಮಾಡಿದಾಗ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಈ ಕಾರಣಕ್ಕೆ ಆಗಮಿಸಿದ್ದೇನೆ ಎಂದು ದಂಪತಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಸದ್ಯ ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬ್ಲಿಂಕ್‌ಇಟ್‌ನಲ್ಲಿ ಮೊದಲ ಬಾರಿಗೆ ಆರ್ಡರ್ ಮಾಡಿದ ತಾಯಿ; ಮಗುವಿನಂತೆ ಸಂಭ್ರಮಿಸಿದ ವಿಡಿಯೊ ಸೆರೆ ಹಿಡಿದ ಮಗಳು
ದೂರದ ಜಪಾನ್ ಅಲ್ಲ ನಮ್ಮ ದೇಶದಲ್ಲೇ ಇದೆ ಪಿಂಕ್ ಟ್ರಂಪೆಟ್ ಹೂವಿನ ಹಾದಿ; ನಿಸರ್ಗ ಸೌಂದರ್ಯಗೆ ಮನಸೋತ ನೆಟ್ಟಿಗರು
ಮುಂಬೈ, ಫೆ. 4: ಸಾಮಾನ್ಯವಾಗಿ ನಗರ ಪ್ರದೇಶದ ರಸ್ತೆಗಳಲ್ಲಿ ವಾಹನಗಳೇ ತುಂಬಿ ತುಳುಕುತ್ತವೆ. ಆದರೆ ಈಗ ಮಾಯಾನಗರಿ ಮುಂಬೈ ಜಪಾನ್‌ನ 'ಚೆರ್ರಿ ಬ್ಲಾಸಮ್' ಹಬ್ಬವನ್ನು ನೆನಪಿಸುವಂತೆ ಮಾಡಿದೆ. ನೈಸರ್ಗಿಕ ಸೌಂದರ್ಯದಿಂದ ಈ ಹೆದ್ದಾರಿ ಕಂಗೊಳಿಸುತ್ತಿದ್ದು ಗುಲಾಬಿ ಬಣ್ಣದ ಹೂವುಗಳಿಂದ ತುಂಬಿ ಹೋಗಿದೆ. ಮುಂಬೈ ನಗರದ ವಿಖ್ರೋಲಿ ಮತ್ತು ಘಾಟ್ಕೋಪರ್ ನಡುವಿನ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯು ಇದೀಗ ಸಂಪೂರ್ಣವಾಗಿ ಗುಲಾಬಿ ಬಣ್ಣದ ಹೂವುಗಳಿಂದ ಆವೃತ ವಾಗಿದ್ದು, ಪ್ರಯಾಣಿಕರ ಕಣ್ಣಿಗೆ ತಂಪು ನೀಡುತ್ತಿದೆ. ಈ ಸೊಬಗಿನ ಡ್ರೋನ್ ವಿಡಿಯೊಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿವೆ.
ಇದನ್ನು ಸಾಮಾನ್ಯವಾಗಿ ಪಿಂಕ್ ಟ್ರಂಪೆಟ್ ಮರಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಮುಂಬೈನ ಚೆರ್ರಿ ಬ್ಲಾಸಮ್‌ಗಳೆಂದೇ ಕರೆಯಲಾಗುತ್ತದೆ. ತಂಪಾದ ಹವಾಮಾನ ಚೆರ್ರಿ ಹೂವುಗಳಿಗೆ ಅಗತ್ಯ ಇರುತ್ತದೆ. ಆದರೆ ಈ ಪಿಂಕ್ ಟ್ರಂಪೆಟ್ ಮರಗಳು ಮಬೈನ ಬೆಚ್ಚಗಿನ ಆರ್ದ್ರ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆದಿವೆ. ಸಾಮಾನ್ಯವಾಗಿ ಚಳಿಗಾಲದ ಅಂತ್ಯ ಮತ್ತು ವಸಂತ ಕಾಲದ ಆರಂಭದಲ್ಲಿ ಅರಳುವ ಈ ಮರಗಳು ಮುಂಬೈನ ರಸ್ತೆಯಲ್ಲಿ ಕಣ್ಮನ ಸೆಳೆಯುವಂತೆ ಮಾಡಿವೆ.
ರಸ್ತೆಯ ಇಡೀ ಮಾರ್ಗಗಳು ಹೂವುಗಳ ದಳದಿಂದ ಗುಲಾಬಿ ಬಣ್ಣದ ಹಾಸಿಗೆಯಂತೆ ಕಾಣುತ್ತಿವೆ. ಇತ್ತೀಚೆಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಡ್ರೋನ್ ದೃಶ್ಯ ಹೆದ್ದಾರಿಯ ಉದ್ದಕ್ಕೂ ಇರುವ ಅದ್ಭುತವಾದ ಗುಲಾಬಿ ಬಣ್ಣದ ಹೂವಿನ ದೃಶ್ಯ ಸೆರೆಹಿಡಿದಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಈ ದೃಶ್ಯಗಳನ್ನು ಶ್ಲಾಘಿಸಿದ್ದು, ಇದು ನಗರದ ರಸ್ತೆಗಳಲ್ಲಿ ಉಲ್ಲಾಸದ ಅನುಭವ ನೀಡುತ್ತದೆ ಎಂದಿದ್ದಾರೆ.
ರೆಸ್ಟೋರೆಂಟ್‌ನಲ್ಲಿ ವೈದ್ಯಗೆ ಕಾದಿತ್ತು ಸರ್‌ಪ್ರೈಸ್: ಪತ್ನಿಗೆ ಮರುಜನ್ಮ ನೀಡಿದವರು ನೀವು ಎಂದು ಬಿಲ್ ಪಾವತಿಸಿದ ಪತಿ
ಈ ಬಗ್ಗೆ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದು, ʼʼಗುಲಾಬಿ ಬಣ್ಣದ ಹೂವುಗಳು ಶಾಂತ ಮತ್ತು ಸೌಂದರ್ಯದ ಕ್ಷಣವನ್ನು ಹೆಚ್ಚಿಸಿದೆʼʼ ಎಂದಿದ್ದಾರೆ. ಮತ್ತೊಬ್ಬರು, ʼʼಇಂತಹ ದೃಶ್ಯಗಳು ನಗರ ಪ್ರದೇಶದಲ್ಲಿ ನಿಜವಾಗಿಯೂ ಬೇಕು. ಅದ್ಬುತʼʼ ಎಂದು ಬರೆದುಕೊಂಡಿದ್ದಾರೆ.