ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾಲಹಳ್ಳಿಯಲ್ಲಿ ಬೆಳಗಾವಿ-ರಾಯಚೂರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಏತ ನೀರಾವರಿ ಕಾಮಗಾರಿಗಳ ವ್ಯಾಪ್ತಿಯ ಗ್ರಾಮಗಳ ರೈತರು, ತಾಲೂಕಿನ ರೈತ ಮುಖಂಡ ರನ್ನು ಒಳಗೊಂಡಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ರೈತ ಸಮೂಹ ನೀರಾವರಿ ಕಾಮಗಾರಿ ಗಳ ವಿಳಂಬ ನೀತಿಯ ವಿರುದ್ಧ ಸ್ಥಳೀಯ ಜನಪ್ರತಿನಿಧಿಗಳು, ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಏತ ನೀರಾವರಿ ಕಾಮಗಾರಿಗಳ ವಿಳಂಬಕ್ಕೆ ರೈತರ ಆಕ್ರೋಶ

-

Profile
Ashok Nayak May 26, 2026 12:20 AM

ರಾಮದುರ್ಗ: ತಾಲೂಕಿನ ವೀರಭದ್ರೇಶ್ವರ ಹಾಗೂ ಸಾಲಾಪೂರ ಬಸವೇಶ್ವರ ಏತ ನೀರಾವರಿ ಕಾಮಗಾರಿ(Lift irrigation work) ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳ ನೇತ್ರತ್ವದಲ್ಲಿ ಸೋಮವಾರ ಸಾಲಹಳ್ಳಿ ಗ್ರಾಮದಲ್ಲಿ ಬೆಳಗಾವಿ-ರಾಯಚೂರ ರಾಜ್ಯ ಹೆದ್ದಾರಿ ಬಂದ್(Belgaum-Raichur state highway close) ಮಾಡಿ, ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಏತ ನೀರಾವರಿ ಕಾಮಗಾರಿಗಳ ವ್ಯಾಪ್ತಿಯ ಗ್ರಾಮಗಳ ರೈತರು, ತಾಲೂಕಿನ ರೈತ ಮುಖಂಡ ರನ್ನು ಒಳಗೊಂಡಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ರೈತ ಸಮೂಹ ನೀರಾವರಿ ಕಾಮಗಾರಿಗಳ ವಿಳಂಬ ನೀತಿಯ ವಿರುದ್ಧ ಸ್ಥಳೀಯ ಜನಪ್ರತಿನಿಧಿಗಳು, ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೂ ಮುನ್ನ ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನದಿಂದ ಪಾದಯಾತ್ರೆಯ ಮುಖಾಂತರ ಸಾಲಹಳ್ಳಿಯಲ್ಲಿ ನಿರ್ಮಿಸಿದ ಪ್ರತಿಭಟನಾ ವೇದಿಕೆಗೆ ಆಗಮಿಸಿ, ಸಮಾವೇಶಗೊಂಡಿತು.

ಇದನ್ನೂ ಓದಿ: Ramadurga News: ವ್ಹಿಬಿ-ಜಿ-ರಾಮ್‌ಜಿ ಯೋಜನೆ ಜಾಗೃತಿ ಅಭಿಯಾನ: ಡಾ.ಕೆ.ವ್ಹಿ.ಪಾಟೀಲ

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಶಿಕಾಂತ ಗೂರೂಜಿ, ಶಾಸಕ ಅಶೋಕ ಪಟ್ಟಣ(MLA Ashok Pattana) ಮುಖ್ಯಮಂತ್ರಿಗಳೊಂದಿಗೆ ಹತ್ತಿರದಲ್ಲಿ ಗುರುತಿಸಿಕೊಂಡವರು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಏತ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಇನ್ನು ಮುಂದೆ ಇದೇ ರೀತಿ ವಿಳಂಬ ವಾದರೆ ನಾವು ಸಹಿಸುವುದಿಲ್ಲ. ರೈತರು ತಮ್ಮ ಕೆಲಸ ಗಳನ್ನು ಮಾಡಿಕೊಂಡು ಬರಲು ಬೆಂಗಳೂರಿಗೆ ಹೋಗಬೇಕಿಲ್ಲ. ಸ್ಥಳೀಯ ಜನತೆಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬೆಂಗಳೂರಿಗೆ ಹೋಗಿ ಬರಲು ಶಾಸಕರನ್ನು 3 ಲಕ್ಷ ಸಂಬಳ ಕೊಟ್ಟು ಇಟ್ಟುಕೊಂಡಿದ್ದೇವೆ. ಜನಪ್ರತಿನಿಧಿಗಳು ರೈತರ ಅನ್ನ ಊಂಡು ಅವರಿಗೆ ಬೆಳೆ ಬೆಳೆಯಲು ನೀರಾವರಿ ಸೌಲಭ್ಯ ಕಲ್ಪಿಸುವ ಕೆಲಸ ಮಾಡದೇ ಇರುವುದು ದುರ್ದೈವದ ಸಂಗತಿಯಾಗಿದೆ.

ನಮ್ಮ ಸೇವೆ ಮಾಡಲು ಹಿಂದೇಟು ಹಾಕುವ ರಾಜಕಾರಣಿಗಳಿಗೆ ರೈತರು ಒಗ್ಗಟ್ಟಿನಿಂದ ಪಾಠ ಕಲಿಸಬೇಕಾಗುತ್ತದೆ. ರೈತರ ವಿಷಯದಲ್ಲಿ ರಾಜಕೀಯ ಮಾಡಿದಲ್ಲಿ ಯಾವುದೇ ಪಕ್ಷದವ ರಿದ್ದರೂ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Ramadurga 2

ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಸರಕಾರಕ್ಕೆ ಬಿಟ್ಟಿ ಭಾಗ್ಯ ಗಳನ್ನು ಕೊಡಲು ಹಣವಿದೆ. ಆದರೆ ರೈತರು ನೀರಿಲ್ಲದೆ ಸಾಯುತ್ತಿದ್ದರೂ ಅವರಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂಬ ಕಿಂಚತ್ತು ಕಾಳಜಿ ಇಲ್ಲ. ಶಾಸಕ ಅಶೋಕ ಪಟ್ಟಣ ಹಿರಿಯರು ಅವರ ಬಗೆಗೆ ನಮಗೆ ಗೌರವಿದೆ. ಅವರ ತಂದೆ-ತಾಯಿಗಳಿಬ್ಬರೂ ಶಾಸಕರಾಗಿ ದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಸದಾ ಸಂಚರಿಸುತ್ತಲೇ ಇರುತ್ತಾರೆ. ಮುಖ್ಯಮಂತ್ರಿಗಳನ್ನು ಮೇಲಿಂದ ಮೇಲೆ ಒತ್ತಾಯಿಸುತ್ತಿದ್ದರೆ ಇಷ್ಟೊತ್ತಿಗೆ ಕಾಮಗಾರಿಗಳು ಮುಗಿಯುತ್ತಿದ್ದವು. ಶಾಸಕರು ಶೀಘ್ರ ನೀರಾವರಿ ಇಲಾಖೆಯ ಎಂಡಿ ಅವರೊಂದಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ ಕೊಡುವ ಲಿಖಿತ ಭರವಸೆ ನೀಡಬೇಕು. ಇಲ್ಲವಾದಲ್ಲಿ, ಹೋರಾಟ ಉಗ್ರ ಸ್ವರೂಪ ಪಡೆದುಕೊಂಡು ರಾಮದುರ್ಗ ತಾಲೂಕು ಸಂಪೂರ್ಣ ಬಂದ್ ಮಾಡಿ, ರೈತರು ಚಿಮಾರಿ ಹಾಕುವ ಪರಸ್ಥಿತಿ ತಂದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.

ಹೋರಾಟದ ಸಾನಿಧ್ಯ ವಹಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಹೋರಾಟ ಯಾರ ವಿರುದ್ಧವೂ ಅಲ್ಲ. ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇಚ್ಛಾಶಕ್ತಿಯ ಕೊರತೆಯಿಂದ ಏತ ನೀರಾವರಿ ಕಾಮಗಾರಿ ಗಳು ವಿಳಂಬವಾಗಿವೆ. ರೈತರು ನ್ಯಾಯ ದೊರೆಯುವವರೆಗೂ ಹೋರಾಟದಿಂದ ಹಿಂದೆ ಸರಿಯಬಾರದು. ತಾಲೂಕಿನ ಸರ್ವ ಮಠಾಧೀಶರ ಬೆಂಬಲ ರೈತ ಹೋರಾಟಕ್ಕಿದೆ ಎಂದರು.

ಪ್ರತಿಭಟನೆಗೆ ವಿವಿಧ ಮಠಾಧೀಶರಾದ ಎಂ. ಚಂದರಗಿಯ ವೀರಭದ್ರೇಶ್ವರ ಸ್ವಾಮೀಜಿ, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ಬನ್ನೂರ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗದ ಶಾಂತವೀರ ಸ್ವಾಮೀಜಿ, ಹೊಸಕೋಟಿಯ ಅಭಿನವ ರೇವಯ್ಯ ಸ್ವಾಮೀಜಿ, ಕುಳ್ಳೂರಿನ ಬಸವಾನಂದ ಭಾರತಿ ಸ್ವಾಮೀಜಿ, ಸಾಲಹಳ್ಳಿಯ ಅಭಿನವ ಸಿದ್ದಲಿಂಗೇಶ್ವರ ಸ್ವಾಮೀಜಿ, ಬೀಡಕಿಯ ಗಂಗಾಧರ ಸ್ವಾಮೀಜಿ, ಕಟಕೋಳದ ಸಿದ್ರಾಯಜ್ಜನವರು, ಬಟಕುರ್ಕಿಯ ರೇವಯ್ಯ ಸ್ವಾಮೀಜಿ, ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ತೊಂಡಿ ಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಹರ್ಲಾಪೂರದ ರೇಣುಕ ಶಿವಯೋಗಿ ಶಿವಾಚಾರ್ಯರು, ನಾಗನೂರಿನ ಬಸವಗೀತಾ ತಾಯಿ ಬೆಂಬಲ ಸೂಚಿಸಿದರು.

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಲ್ಲಣ್ಣ ಯಾದವಾಡ, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಕೆ.ವಿ. ಪಾಟೀಲ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ, ಶಿವಾನಂದ ದೊಡವಾಡ, ವೈ.ಎಚ್. ಪಾಟೀಲ, ಮಾರುತಿ ಕೊಪ್ಪದ, ರೈತ ಸಂಘದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ರೈತ ಸಂಘ ಹಾಗೂ ವಿವಿಧ ರೈತಪರ ಸಂಘಟನೆಗಳ ಪದಾಧಿಕಾರಿ ಗಳು, ರೈತ ಮುಖಂಡರು ಸೇರಿದಂತೆ ಇತರರಿದ್ದರು.