ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical abuse: ಮಹಿಳಾ ಇನ್ಸ್‌ಪೆಕ್ಟರ್‌ಗೆ ಲೈಂಗಿಕ ಕಿರುಕುಳ; ನೆಲಮಂಗಲ ಎಆರ್‌ಟಿಒ ವಿರುದ್ಧ ಎಫ್‌ಐಆರ್‌

Nelamangala News: ನೆಲಮಂಗಲ ಆರ್‌ಟಿಒ ಕಚೇರಿಯಲ್ಲಿ ಮೋಟಾರ್ ವಾಹನ ನಿರೀಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎಆರ್‌ಟಿಒ ರಾಜಕುಮಾರ್‌ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಚೇರಿಗೆ ಹೋದಾಗ ದೇಹದ ಭಾಗಗಳನ್ನು ಅಸಭ್ಯವಾಗಿ ನೋಡುವುದು ಹಾಗೂ ಕಣ್‌ ಸನ್ನೆ ಮಾಡುತ್ತಿದ್ದರು ಎಂದು ಮಹಿಳಾ ಇನ್ಸ್‌ಪೆಕ್ಟರ್‌ ಆರೋಪಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪ; ನೆಲಮಂಗಲ ಎಆರ್‌ಟಿಒ ವಿರುದ್ಧ ಎಫ್‌ಐಆರ್‌

Prabhakara R Prabhakara R Aug 20, 2025 6:34 PM

ನೆಲಂಮಗಲ: ಆರ್‌ಟಿಒ ಮಹಿಳಾ ಇನ್ಸ್‌ಪೆಕ್ಟರ್‌ಗೆ ಲೈಂಗಿಕ ಕಿರುಕುಳ (Physical abuse) ನೀಡಿದ ಆರೋಪದಲ್ಲಿ ನೆಲಮಂಗಲ ಎಆರ್‌ಟಿಒ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಎಆರ್‌ಟಿಒ ರಾಜಕುಮಾರ್‌ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ಆರ್‌ಟಿಒ ಕಚೇರಿಯಲ್ಲಿ ಮೋಟಾರ್ ವಾಹನ ನಿರೀಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎಆರ್‌ಟಿಒ ರಾಜಕುಮಾರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ನಾನು ಕಚೇರಿಗೆ ಹೋದಾಗ ಎಆರ್‌ಟಿಒ, ನನ್ನ ಎದೆ ಭಾಗ ಹಾಗೂ ದೇಹದ ಭಾಗಗಳನ್ನು ಅಸಭ್ಯವಾಗಿ ನೋಡುವುದು ಹಾಗೂ ಕಣ್‌ ಸನ್ನೆ ಮಾಡುತ್ತಿದ್ದರು. ಇವರು ಇಂದಲ್ಲ ನಾಳೆ ಸರಿ ಹೋಗಬಹುದೆಂದು ಸುಮ್ಮನಿದ್ದೆ. ಆದರೆ, ಪ್ರತಿ ಬಾರಿ ಅದೇ ರೀತಿ ಅವರ ವರ್ತನೆ ಇತ್ತು. ನನ್ನ ಜತೆ ಹೊಂದಾಣಿಕೆ ಮಾಡಿಕೊಂಡರೆ ನಿನಗೆ ಬೇಕಾದ ಡ್ಯೂಟಿ ಹಾಕಿ ಕೊಡುತ್ತೇನೆಂದು ಹೇಳುತ್ತಿದ್ದರು ಎಂದು ದೂರುದಾರೆ, ಮೋಟಾರ್‌ ವೆಹಿಕಲ್‌ ಇನ್ಸ್‌ಪೆಕ್ಟರ್‌ ಆರೋಪಿಸಿದ್ದಾರೆ.

ಇನ್ನು ಆ.18ರಂದು ಎಂದಿನಂತೆ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ವೇಳೆ ಚೇಂಬರ್‌ಗೆ ಬರುವಂತೆ ಸೂಚಿಸಿದರು. ಈ ವೇಳೆ ನನ್ನ ಜರ್ಕಿನ್‌ ಅನ್ನು ಬಲವಂತವಾಗಿ ಬಿಚ್ಚಿಸಿದ್ದಾರೆ ನೀಡಿದ್ದಾರೆ ಎಂದು ಮಹಿಳಾ ಇನ್ಸ್‌ಪೆಕ್ಟರ್‌ ಆರೋಪಿದ್ದಾರೆ.