ನಿಮ್ಹಾನ್ಸ್, ಎನ್.ಸಿ.ಬಿ.ಎಸ್. ಮತ್ತು ರೋಹಿಣಿ ನಿಕೇಲನಿ ಫಿಲಾಂತ್ರಪೀಸ್ನಿಂದ 'ಮನೋತ್ಸವ'ದ 3ನೇ ಆವೃತ್ತಿ ಘೋಷಣೆ
ಈ ಉತ್ಸವದ ಪ್ರಮುಖ ವಕ್ತಾರರಲ್ಲಿ ನಟ ಅನಿಲ್ ಕಪೂರ್, ನರವಿಜ್ಞಾನಿ ಡಾ. ಸೋಫಿ ಸ್ಕಾಟ್, ಹಾಸ್ಯನಟರಾದ ಪ್ರಶಸ್ತಿ ಸಿಂಗ್ ಮತ್ತು ಸೋನು ವೇಣುಗೋಪಾಲ್, ಡಾ. ಶ್ಯಾಮ್ ಭಟ್, ಡಾ. ದೇವಿ ಪ್ರಸಾದ್ ಶೆಟ್ಟಿ, ಪರೋಮಿತಾ ವೋಹ್ರಾ, ಡಾ. ಪ್ರಭಾ ಚಂದ್ರ ಮತ್ತು ರೋಹಿಣಿ ನಿಕೇಲನಿ ಸೇರಿದ್ದಾರೆ.
-
ಬೆಂಗಳೂರು: ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್, ನಿಮ್ಹಾನ್ಸ್ ಮತ್ತು ಎನ್ಸಿಬಿಎಸ್ ವತಿಯಿಂದ 2026ರ ಡಿಸೆಂಬರ್ 5 ಮತ್ತು 6 ರಂದು 'ಮನೋತ್ಸವ'ದ 3ನೇ ಆವೃತ್ತಿ ಆಯೋಜಿಸಲಾಗುವುದು.
ಮನೋತ್ಸವವು ಮಾನಸಿಕ ಆರೋಗ್ಯದ ಕುರಿತು ಸುಲಭ ಮತ್ತು ಪ್ರಸ್ತುತ ಚರ್ಚೆಗಳನ್ನು ನಡೆಸಲು ವಿಜ್ಞಾನ, ಅನುಭವ ಹಾಗೂ ಸಮುದಾಯವನ್ನು ಒಗ್ಗೂಡಿಸುವುದರ ಜೊತೆಗೆ, ಜನರಿಗೆ ಅಗತ್ಯವಿರುವ ಮಾಹಿತಿ ಮತ್ತು ಬೆಂಬಲವನ್ನು ಒದಗಿಸುತ್ತದೆ. ಈ ಎರಡು ದಿನಗಳ ಉತ್ಸವದಲ್ಲಿ ತಜ್ಞರ ಚರ್ಚೆಗಳು, ಚಲನಚಿತ್ರ ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ಕಲಾ ಪ್ರದರ್ಶನಗಳಿರಲಿವೆ.
ಕನ್ನಡದಲ್ಲೂ ವಿಶೇಷ ಗೋಷ್ಠಿಗಳಿದ್ದು, ಮಕ್ಕಳಿಗಾಗಿ ಪ್ರತ್ಯೇಕ ವಲಯವನ್ನು ರೂಪಿಸ ಲಾಗಿದೆ. ಈ ಕಾರ್ಯಕ್ರಮವು ನಗು, ಸಂಬಂಧಗಳು, ಇಂದಿನ ತಂತ್ರಜ್ಞಾನ ಮತ್ತು ನಿದ್ರೆಯ ಪ್ರಭಾವ, ಹಾಗೂ ಮಾನಸಿಕ ಚೇತರಿಕೆಯಂತಹ ದೈನಂದಿನ ಜೀವನದ ಪ್ರಮುಖ ವಿಷಯಗಳನ್ನು ಒಳಗೊಳ್ಳಲಿದೆ.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 20: ಸೋಮದತ್ತನ ಉಪಕಾರ ಮರೆತ ಅಕ್ಕಸಾಲಿಗ
ಈ ಉತ್ಸವದ ಪ್ರಮುಖ ವಕ್ತಾರರಲ್ಲಿ ನಟ ಅನಿಲ್ ಕಪೂರ್(Bollywood Actor Anil Kapoor), ನರವಿಜ್ಞಾನಿ ಡಾ. ಸೋಫಿ ಸ್ಕಾಟ್, ಹಾಸ್ಯನಟರಾದ ಪ್ರಶಸ್ತಿ ಸಿಂಗ್ ಮತ್ತು ಸೋನು ವೇಣುಗೋಪಾಲ್, ಡಾ. ಶ್ಯಾಮ್ ಭಟ್, ಡಾ. ದೇವಿ ಪ್ರಸಾದ್ ಶೆಟ್ಟಿ, ಪರೋಮಿತಾ ವೋಹ್ರಾ, ಡಾ. ಪ್ರಭಾ ಚಂದ್ರ ಮತ್ತು ರೋಹಿಣಿ ನಿಕೇಲನಿ ಸೇರಿದ್ದಾರೆ.
ಮನೋತ್ಸವವು ಸಮುದಾಯದ ಶಕ್ತಿಗೆ ಒತ್ತು ನೀಡುತ್ತಿದ್ದು, ಇದರ ಪೂರ್ವಭಾವಿಯಾಗಿ ಬೆಂಗಳೂರು ಮತ್ತು ದೆಹಲಿಯಲ್ಲಿ ಸಂಬಂಧಗಳು, ವೃದ್ಧಾಪ್ಯ ಮುಂತಾದ ವಿಷಯಗಳ ಕುರಿತು 20ಕ್ಕೂ ಹೆಚ್ಚು 'ಶೇರಿಂಗ್ ಸರ್ಕಲ್ಸ್'ಗಳನ್ನು ನಡೆಸಲಾಗಿದ್ದು, 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.
ಅಲ್ಲದೆ, ದೃಷ್ಟಿಕೋನಗಳ ಕುರಿತು 'ಫ್ರೇಮ್ಸ್ ಆಫ್ ಫ್ಯಾಮಿಲಿಯಾರಿಟಿ' ಛಾಯಾಗ್ರಹಣ ಸ್ಪರ್ಧೆ ಘೋಷಿಸಲಾಗಿದ್ದು, ಅ.31 ಕೊನೆಯ ದಿನವಾಗಿದೆ.
ವಿದ್ಯಾರ್ಥಿಗಳು, ವೃತ್ತಿಪರರು, ಆರೈಕೆದಾರರು ಮತ್ತು ಮಾನಸಿಕ ಸ್ವಾಸ್ಥ್ಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಈ ಉತ್ಸವವು ಸಂಪೂರ್ಣವಾಗಿ ಮುಕ್ತ ಹಾಗೂ ಉಚಿತವಾಗಿದೆ.