Vishweshwar Bhat : ಆಕ್ರಮಣಕಾರರಿಗೆ ತಕ್ಕ ಉತ್ತರ: ಜಗತ್ತಿಗೆ ಇಸ್ರೇಲ್ ಮಾದರಿ
ಎದುರಿಸುತ್ತಿರುವ ಭದ್ರತಾ ಸವಾಲುಗಳಲ್ಲಿ ಹೆಚ್ಚಿನ ಸಾಮ್ಯತೆ ಇದೆ. ಇಸ್ರೇಲ್ ಪದೇ ಪದೇ ನೆರೆಹೊರೆ ಯವರಿಂದ ಆಕ್ರಮಣಕ್ಕೆ ಒಳಗಾದರೆ, ಭಾರತವು ವರ್ಷವಿಡೀ ಭಯೋತ್ಪಾದನಾ ಕೃತ್ಯಗಳನ್ನು ಎದುರಿಸು ತ್ತಿದೆ. ಆದರೆ ಆಕ್ರಮಣಕಾರರಿಗೆ ತಕ್ಕ ಪ್ರತಿಕ್ರಿಯೆ ನೀಡುವಲ್ಲಿ ಮತ್ತು ದೇಶಪ್ರೇಮದ ವಿಚಾರದಲ್ಲಿ ಇಸ್ರೇಲ್ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ, ಲೇಖಕ ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.
-
ಭಾರತ ಮತ್ತು ಇಸ್ರೇಲ್ ಎದುರಿಸುತ್ತಿರುವ ಸವಾಲುಗಳಲ್ಲಿ ಸಾಮ್ಯತೆ: ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ವಿಶ್ವೇಶ್ವರ ಭಟ್ ವಿಶ್ವೇಷಣೆ
ಎದುರಿಸುತ್ತಿರುವ ಭದ್ರತಾ ಸವಾಲುಗಳಲ್ಲಿ ಹೆಚ್ಚಿನ ಸಾಮ್ಯತೆ ಇದೆ. ಇಸ್ರೇಲ್ ಪದೇ ಪದೇ ನೆರೆಹೊರೆ ಯವರಿಂದ ಆಕ್ರಮಣಕ್ಕೆ ಒಳಗಾದರೆ, ಭಾರತವು ವರ್ಷವಿಡೀ ಭಯೋತ್ಪಾದನಾ ಕೃತ್ಯಗಳನ್ನು ಎದುರಿಸುತ್ತಿದೆ. ಆದರೆ ಆಕ್ರಮಣಕಾರರಿಗೆ ತಕ್ಕ ಪ್ರತಿಕ್ರಿಯೆ ನೀಡುವಲ್ಲಿ ಮತ್ತು ದೇಶಪ್ರೇಮದ ವಿಚಾರದಲ್ಲಿ ಇಸ್ರೇಲ್ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ, ಲೇಖಕ ವಿಶ್ವೇಶ್ವರ ಭಟ್(Vishwavani Editor-in-Chief, Writer Vishweshwar Bhat) ಅಭಿಪ್ರಾಯ ಪಟ್ಟರು.
ಮಂಗಳೂರು ಲಿಟ್ ಫೆಸ್ಟ್ ವೇದಿಕೆಯಲ್ಲಿ ತಾವು ಬರೆದ ‘ಬದುಕುಳಿದವರು ಕಂಡಂತೆ’ ಕೃತಿಯ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಇಸ್ರೇಲ್ ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಆ ದೇಶದ ಅಪ್ರತಿಮ ಸಾಧನೆಗಳ ಮೇಲೆ ಬೆಳಕು ಚೆಲ್ಲಿದರು.
ಪ್ರತಿರೋಧ ಮತ್ತು ದೇಶಪ್ರೇಮದ ಪಾಠ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಂಘರ್ಷವನ್ನು ಯಾವುದೇ ಸಿದ್ಧಾಂತಗಳ ಮಸೂರದಿಂದ ನೋಡದೆ ಇತಿಹಾಸದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳ ಬೇಕು ಎಂದ ಅವರು, ಈ ಹಿಂದೆ ಭಾರತ ಭಯೋತ್ಪಾದಕ ಕೃತ್ಯಗಳಿಗೆ ಸರಿಯಾದ ಪ್ರತೀಕಾರ ನೀಡುತ್ತಿರಲಿಲ್ಲ ಎಂದು ವಿಷಾದಿಸಿದರು.
ಇದನ್ನೂ ಓದಿ: Vishweshwar Bhat conferred with Bhargava Bhushan award: ಬ್ರಾಹ್ಮಣ ಯುವಕರು ರಾಜಕೀಯಕ್ಕೆ ಬರಬೇಕು
ಇಸ್ರೇಲಿಗರನ್ನು ಕೆಣಕಲು ಬಂದವರಿಗೆ ಅವರು ಸರಿಯಾದ ಪಾಠ ಕಲಿಸುತ್ತಾರೆ. ಅವರ ದೇಶಪ್ರೇಮ ಅಭೂತಪೂರ್ವವಾದದ್ದು. ಜಗತ್ತಿನ ಯಾವುದೇ ಮೂಲೆಯಲ್ಲಿ ಒಬ್ಬ ಇಸ್ರೇಲಿ ಸಂಕಷ್ಟಕ್ಕೆ ಸಿಲುಕಿದರೂ ಇಡೀ ರಾಷ್ಟ್ರವೇ ಆತನ ನೆರವಿಗೆ ಧಾವಿಸುತ್ತದೆ ಎಂದು ಶ್ಲಾಘಿಸಿದರು.
ಅಸ್ತಿತ್ವಕ್ಕಾಗಿ ನಿರಂತರ ಹೋರಾಟ: ಸುತ್ತಲೂ ವೈರಿ ರಾಷ್ಟ್ರಗಳಿದ್ದರೂ, ಹಲವು ಬಾರಿ ಸಾಮೂ ಹಿಕ ದಾಳಿಗೆ ಒಳಗಾಗಿದ್ದರೂ, ಇಸ್ರೇಲ್ ಇಂದಿಗೂ ಸುಭದ್ರವಾಗಿ ಉಳಿದಿರುವುದು ಅವರ ಅಚಲ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ನ ಧೋರಣೆಗಳು ಭಾರತ ದಂತಹ ದೇಶಗಳಿಗೆ ಹತ್ತು ಹಲವು ಪಾಠಗಳನ್ನು ಕಲಿಸುತ್ತಿವೆ ಎಂಬುದು ಗೋಷ್ಠಿಯ ಸಾರವಾಗಿತ್ತು. ಶ್ರೀಕಾಂತ್ ಶೆಟ್ಟಿ ಅವರು ಈ ಸಂವಾದವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪುಸ್ತಕ ಪ್ರೇಮಿಗಳು ಮತ್ತು ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು.
ಮರುಭೂಮಿಯಲ್ಲಿ ಅರಳಿದ ನಂದನವನ
ಇಸ್ರೇಲ್‌ನ ಶೇ.65ರಷ್ಟು ಭಾಗ ಮರುಭೂಮಿ ಯಾಗಿದೆ. ಮಂಗಳೂರಿನಲ್ಲಿ ಒಂದು ಗಂಟೆ ಯಲ್ಲಿ ಸುರಿಯುವಷ್ಟು ಮಳೆ ಅಲ್ಲಿ ಇಡೀ ವರ್ಷಕ್ಕೆ ಬೀಳುತ್ತದೆ. ಆದರೂ, ಹನಿ ನೀರಾವರಿ ತಂತ್ರಜ್ಞಾನದ ಮೂಲಕ ಅವರು ಜಗತ್ತಿಗೆ ಕೃಷಿ ಪಾಠ ಮಾಡುತ್ತಿದ್ದಾರೆ. ವಿಶ್ವದ ನೋಬೆಲ್ ಪ್ರಶಸ್ತಿ ವಿಜೇತರಲ್ಲಿ ಯಹೂದಿಗಳ ಪಾಲು ಅತಿ ದೊಡ್ಡದಿದೆ. ಅಮೆರಿಕದ ರಕ್ಷಣಾ ಕೇಂದ್ರವಾದ ‘ಪೆಂಟಗನ್’ನಲ್ಲಿ ಶೇ.40ರಷ್ಟು ಯಹೂದಿ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸುತ್ತಿದ್ದಾರೆ. ನವೋದ್ಯಮಗಳ ಹಬ್ ಆಗಿರುವ ಇಸ್ರೇಲ್, ಇಂದು ಜಗತ್ತಿನಲ್ಲಿ ‘ಸ್ಟಾರ್ಟಪ್ ನೇಷನ್’ ಎಂದೇ ಪ್ರಸಿದ್ಧಿಯಾಗಿದೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಅಭಿಪ್ರಾಯಪಟ್ಟರು.