ʻಬಿಗ್ ಬಾಸ್ 12ʼ ಫಿನಾಲೆ ರಣರಂಗ; ಕೊನೇ ವಾರದಲ್ಲಿ 6 ಮಂದಿಗೆ ನಾಮಿನೇಷನ್ ಭೀತಿ, ಮಿಡ್ ವೀಕ್‌ನಲ್ಲಿ ಮನೆಯಿಂದ ಎಲಿಮಿನೇಟ್ ಆಗೋದ್ಯಾರು?
Bigg Boss Kannada Season 12: ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಮನೆಯಲ್ಲಿ ಆತಂಕ ಮನೆಮಾಡಿದೆ. ಧನುಷ್ ಹೊರತುಪಡಿಸಿ ಉಳಿದ ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಈ ವಾರ 'ಮಿಡ್ ವೀಕ್ ಎಲಿಮಿನೇಷನ್' ನಡೆಯಲಿದೆ. ಮಂಗಳವಾರದವರೆಗೆ ಮಾತ್ರ ವೋಟಿಂಗ್ ಅವಕಾಶವಿದ್ದು, ಯಾರು ಹೊರಹೋಗುತ್ತಾರೆಂಬ ಕುತೂಹಲ ಹೆಚ್ಚಿದೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇದೇ ಜನವರಿ 18ಕ್ಕೆ ಫಿನಾಲೆ ನಡೆಯಲಿದೆ. ಕೊನೆಯದಾಗಿ ಮನೆಯೊಳಗೆ ಈಗ 7 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಫಿನಾಲೆ ವೇದಿಕೆವರೆಗೂ ಬರುತ್ತಾರೆ? ಯಾರೆಲ್ಲಾ ಕೊನೆ ವಾರದಲ್ಲಿ ಉಳಿದುಕೊಳ್ಳುತ್ತಾರೆ ಎಂಬ ಬಗ್ಗೆ ಕುತೂಹಲ ಇದೆ. ಇದೀಗ ಆ ಪ್ರಕ್ರಿಯೆ ಕಿಚ್ಚ ಸುದೀಪ್ ಒಂದಷ್ಟು ಟ್ವಿಸ್ಟ್‌ಗಳನ್ನು ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲಾ ನಾಮಿನೇಟ್?
ಕಳೆದ ವಾರದ ಎಲಿಮಿನೇಷನ್‌ನಲ್ಲಿ ರಾಶಿಕಾ ಶೆಟ್ಟಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಸದ್ಯ ಧನುಷ್, ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ರಕ್ಷಿತಾ ಶೆಟ್ಟಿ, ಕಾವ್ಯ ಮತ್ತು ಧ್ರುವಂತ್ ಅವರು ಮನೆಯೊಳಗೆ ಉಳಿದುಕೊಂಡಿದ್ದಾರೆ. ಇವರಲ್ಲೀಗ ಧನುಷ್ ಅವರನ್ನು ಹೊರತುಪಡಿಸಿ, ಮಿಕ್ಕ ಎಲ್ಲಾ ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಅಂದಹಾಗೆ, ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರಲಿದೆ. ಬುಧವಾರದೊತ್ತಿಗೆ ಒಬ್ಬ ಸ್ಪರ್ಧಿ ಸದ್ದಿಲ್ಲದೇ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಆ ಎಲಿಮಿನೇಷನ್‌ಗೆಂದು ಈ ಆರು ಮಂದಿಯನ್ನು ನೇರವಾಗಿ ನಾಮಿನೇಟ್ ಮಾಡಲಾಗಿದೆ. ಇವರಲ್ಲೀಗ ಮಿಡ್ ವೀಕ್ ಎಲಿಮೇಷನ್ ಆಗೋದ್ಯಾರು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.
Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ಗಿಲ್ಲಿ, ರಘು ಥರದ ಘಟಾನುಟಿಗಳೇ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ. ಈ ಆರು ಮಂದಿಯಲ್ಲಿ ಯಾರೇ ಎಲಿಮಿನೇಟ್ ಆದರೂ ಅದು ಶಾಕಿಂಗ್ ಆಗಿರಲಿ. ಇಷ್ಟು ದಿನಗಳ ಬಿಗ್ ಬಾಸ್ ಮನೆಯಲ್ಲಿದ್ದರೂ, ಮಂಗಳವಾರದ ಸಂಜೆವರೆಗೂ ನಡೆಯುವ ವೋಟಿಂಗ್‌ನಲ್ಲಿ ಎಲ್ಲವೂ ನಿರ್ಧಾರವಾಗಲಿದೆ.
BBK 12: 'ಬಿಗ್ ಬಾಸ್' ಮನೆಯ ಕೊನೆಯ ಕ್ಯಾಪ್ಟನ್ ಯಾರು? ಕೊನೇ ಕ್ಷಣದಲ್ಲಿ ಧನುಷ್‌ಗೆ ಬಿಗ್ ಶಾಕ್! ಕಾರಣವೇನು?
ಈ ವಾರ ಎರಡು ಬಾರಿ ವೋಟಿಂಗ್
ಹೌದು, ಇದು ಫಿನಾಲೆ ವಾರ ಆಗಿರುವುದರಿಂದ ಎರಡು ಸಲ ವೋಟಿಂಗ್ ಲೈನ್ಸ್ ತೆರೆದುಕೊಳ್ಳಲಿದೆ. ಮೊದಲು ಮಿಡ್ ವೀಕ್ ಎಲಿಮಿನೇಷನ್‌ಗೆಂದು ಒಂದು ವೋಟಿಂಗ್ ಇರಲಿದೆ. ಅದು ಮಂಗಳವಾರ ಸಂಜೆವರೆಗೂ ನಡೆಯಲಿದೆ. ಮಿಡ್ ವೀಕ್ ಎಲಿಮಿನೇಷನ್ ಆದಮೇಲೆ ಉಳಿಯುವ ಆರು ಮಂದಿ ಫಿನಾಲೆಗೆ ಎಂಟ್ರಿ ಆಗಲಿದ್ದು, ಆನಂತರ ವಿನ್ನರ್ ಯಾರಾಗಬೇಕೆಂದು ವೋಟಿಂಗ್ ನಡೆಯಲಿದೆ. ಭಾನುವಾರ (ಜ.18) ರಾತ್ರಿ ವಿನ್ನರ್ ಯಾರು ಎಂಬುದು ಗೊತ್ತಾಗಲಿದೆ.
ಗಿಲ್ಲಿ ಬಗ್ಗೆ ಹೆಚ್ಚುತ್ತಿದೆ ಕ್ರೇಜ್
ಸದ್ಯ ಗಿಲ್ಲಿ ನಟ ಅವರ ಬಗ್ಗೆ ದೊಡ್ಡಮಟ್ಟದ ಕ್ರೇಜ್ ಶುರುವಾಗಿದೆ. ಈಗಾಗಲೇ ಗಿಲ್ಲಿಗೆ ವೋಟ್ ಮಾಡಿ ಎಂದು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಕ್ಯಾಂಪೇನ್ ಮಾಡುತ್ತಿದ್ದಾರೆ.