ಜಿಡ್ಡುಗಟ್ಟಿದ ಸಮಾಜಕ್ಕೆ ಅಂಬೇಡ್ಕರ್ ಪರಿಹಾರ: ಡಿ.ಎಸ್.ವೀರಯ್ಯ ವಿರಚಿತ ರಾಷ್ಟ್ರಚಿಕಿತ್ಸಕ ಅಂಬೇಡ್ಕರ್ ಕೃತಿ ಲೋಕಾರ್ಪಣೆ ವೇಳೆ ಕೇರಳ ರಾಜ್ಯಪಾಲ ಅರಳೇಕರ್
ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.ಎಸ್.ವಿ.ಫೌಂಡೇಶನ್ ಆಯೋಜಿಸಿದ್ದ ಡಿ.ಎಸ್.ವೀರಯ್ಯ(D S Veerayya) ವಿರಚಿತ ರಾಷ್ಟ್ರಚಿಕಿತ್ಸಕ ಅಂಬೇಡ್ಕರ್ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈದ್ಯ ದೇಹದ ಪ್ರತಿಯೊಂದು ಅಂಗಾಂಗ ಪರೀಕ್ಷಿಸಿ ರೋಗ ನಿರ್ಣಯ ಮಾಡುವಂತೆ ಅಂಬೇಡ್ಕರ್ ಅವರು ಅಂದಿನ ಜಿಡ್ಡುಗಟ್ಟಿದ್ದ ಭಾರತೀಯ ಸಮಾಜದ ಸಮಸ್ಯೆ ಗುರುತಿಸಿ ಪರಿಹಾರದ ಮಾರ್ಗ ತೋರಿಸಿದರು.
-
ಬೆಂಗಳೂರು: ಭಾರತದ ಆರ್ಥಿಕತೆ, ಸಾಮಾಜಿಕ ಸುಧಾರಣೆ, ಶಿಕ್ಷಣ, ರಾಜಕೀಯ ಹಾಗೂ ವಿದೇಶಾಂಗ ನೀತಿಗಳಲ್ಲಿದ್ದ ಸಮಸ್ಯೆ ಆಳವಾಗಿ ಅಧ್ಯಯನ ಮಾಡಿ ಪರಿಹಾರ ಸೂಚಿಸಿದ ನಿಜವಾದ ರಾಷ್ಟ್ರ ಚಿಕಿತ್ಸಕ ಡಾ.ಬಿ.ಆರ್.ಅಂಬೇಡ್ಕರ್(Dr B R Ambedkar) ಅವರು ಕೇವಲ ಭಾರತ ರತ್ನವಲ್ಲ, ನಿಜವಾದ ಅರ್ಥದಲ್ಲಿ ವಿಶ್ವರತ್ನ ಎಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರಳೇಕರ್(Kerala Governor Rajendra Vishwanath Arlekar) ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.ಎಸ್.ವಿ.ಫೌಂಡೇಶನ್ ಆಯೋಜಿಸಿದ್ದ ಡಿ.ಎಸ್.ವೀರಯ್ಯ(D S Veerayya) ವಿರಚಿತ ರಾಷ್ಟ್ರಚಿಕಿತ್ಸಕ ಅಂಬೇಡ್ಕರ್ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈದ್ಯ ದೇಹದ ಪ್ರತಿಯೊಂದು ಅಂಗಾಂಗ ಪರೀಕ್ಷಿಸಿ ರೋಗ ನಿರ್ಣಯ ಮಾಡುವಂತೆ ಅಂಬೇಡ್ಕರ್ ಅವರು ಅಂದಿನ ಜಿಡ್ಡುಗಟ್ಟಿದ್ದ ಭಾರತೀಯ ಸಮಾಜದ ಸಮಸ್ಯೆ ಗುರುತಿಸಿ ಪರಿಹಾರದ ಮಾರ್ಗ ತೋರಿಸಿದರು.
ಸಮಾಜದ ಸಾಮಾನ್ಯ ಜನರಲ್ಲಿ ಸಮಸ್ಯೆ ಗಿಂತಲೂ ನಾಯಕರ ಚಿಂತನೆ ಹಾಗೂ ನಾಯಕತ್ವ ದಲ್ಲಿದ್ದ ಲೋಪ ಅಂಬೇಡ್ಕರ್ ಗುರುತಿಸಿದ್ದರು. ರಾಷ್ಟ್ರವೇ ಮೊದಲು, ರಾಷ್ಟ್ರವೇ ಕೊನೆ ಎಂಬ ರಾಷ್ಟ್ರೀಯತೆಯ ಭಾವನೆ ಅವರಲ್ಲಿ ಪರಮೋಚ್ಚವಾಗಿತ್ತು ಎಂದರು.
ಇದನ್ನೂ ಓದಿ: Vishweshwar Bhat Column: ವಿಮಾನಯಾನ ರಾಜಧಾನಿ ಮಾಂಟ್ರಿಯಲ್
ಸಂಸ್ಕೃತ ರಾಷ್ಟ್ರಭಾಷೆಯಾಗಬೇಕೆಂಬ ಚಿಂತನೆ: ಭಾರತದ ಎಲ್ಲ ಭಾಷೆಗಳಿಗೆ ಆಧಾರ ವಾಗಿರುವ ಸಂಸ್ಕೃತವೇ ರಾಷ್ಟ್ರಭಾಷೆಯಾಗ ಬೇಕು ಎಂಬುದು ಅಂಬೇಡ್ಕರ್ ಅವರ ದೂರ ದೃಷ್ಟಿಯ ಚಿಂತನೆ ಯಾಗಿತ್ತು. ದೇಶದ ಹಿತ ಮತ್ತು ರಾಷ್ಟ್ರೀಯತೆ ಅವರ ಚಿಂತನೆಯ ಕೇಂದ್ರಬಿಂದುವಾಗಿತ್ತು. ವೀರಯ್ಯ ಅವರ ಕೃತಿಯಲ್ಲಿ ಅಂಬೇಡ್ಕರ್ ಅವರ ಬಹುಮುಖ ವ್ಯಕ್ತಿತ್ವ, ದೇಶಕ್ಕೆ ನೀಡಿದ ಕೊಡುಗೆ ಹಾಗೂ ಅವರಿಗೆ ಭಾರತ ರತ್ನ ನೀಡಲು ದಶಕಗಳ ಕಾಲ ಕಾಯಬೇಕಾದ ಸಂದರ್ಭಗಳನ್ನು ದಾಖಲಿಸಲಾಗಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಬಂದಿದ್ದರೂ ಅಂದಿನ ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸೋಲಿಸಲ್ಪಟ್ಟ ಘಟನೆ ಗಳನ್ನೂ ದಾಖಲೆಗಳೊಂದಿಗೆ ವಿವರಿಸಲಾಗಿದೆ ಎಂದರು.
ಸಂವಿಧಾನ ಮನಸ್ಸು-ನಡವಳಿಕೆಯಲ್ಲಿ ಇರಲಿ: ಸಂವಿಧಾನದ ಪ್ರತಿ ಕೈಯಲ್ಲಿ ಹಿಡಿದುಕೊಂಡು ಓಡಾಡುವುದಕ್ಕಿಂತ ಅದರ ಆಶಯಗಳು ಪ್ರತಿಯೊಬ್ಬರ ಮನಸ್ಸು ಮತ್ತು ನಡವಳಿಕೆಯಲ್ಲಿ ಜೀವಂತವಾಗಿರಬೇಕು. ರಾಷ್ಟ್ರಚಿಕಿತ್ಸಕ ಅಂಬೇಡ್ಕರ್ ಕೃತಿ ಕನ್ನಡ ಮಾತ್ರವಲ್ಲದೆ ಇಂಗ್ಲಿಷ್, ಹಿಂದಿ ಸೇರಿದಂತೆ ದೇಶದ ಎಲ್ಲ ಭಾಷೆಗಳಿಗೂ ತಲುಪಬೇಕು. ಪ್ರತಿಯೊಬ್ಬ ನಾಗರಿಕರೂ ಅಂಬೇಡ್ಕರ್ ಅವರ ಚರಿತ್ರೆ ಮತ್ತು ಚಿಂತನೆ ಆಳವಾಗಿ ಅರಿತುಕೊಳ್ಳಬೇಕು ಎಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರಳೇಕರ್ ತಿಳಿಸಿದರು.
ಸಾಮಾಜಿಕ ನ್ಯಾಯಕ್ಕೆ ಅಂಬೇಡ್ಕರ್ ಕೊಡುಗೆ: ವಿಶ್ವೇಶ್ವರ ಭಟ್
ಅಂಬೇಡ್ಕರ್ ಅವರು ಭಾರತದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿದ ಮಹಾನ್ ನಾಯಕ. ಸಮಾನತೆ, ಅಸ್ಪೃಶ್ಯತಾ ನಿವಾರಣೆ, ಸ್ತ್ರೀ ಸಮಾನತೆ ಹಾಗೂ ಹಿಂದೂ ಕೋಡ್ ಬಿಲ್ ಸೇರಿದಂತೆ ಹಲವು ವಿಚಾರಗಳಲ್ಲಿ ಅವರು ಸ್ಪಷ್ಟ ಮತ್ತು ಪ್ರಖರ ನಿಲುವು ಹೊಂದಿದ್ದರು. ಅವರ ಸಾಹಿತ್ಯ ಮತ್ತು ಚಿಂತನೆಗಳಲ್ಲಿ ಸಾಮಾಜಿಕ ಪ್ರಶ್ನೆಗಳಿಗೆ ಉತ್ತರಗಳಿದ್ದವು.
ಮಹಿಳೆಯರಿಗೆ ಹೆರಿಗೆಯ ನಂತರ ಪ್ರಸೂತಿ ರಜೆ, ಕುಟುಂಬ ಯೋಜನೆಯ ಅಗತ್ಯತೆ, ಕಾರ್ಮಿಕರ ಹಿತರಕ್ಷಣೆಗಾಗಿ ಇಎಸ್‌ಐ ಮತ್ತು ಭವಿಷ್ಯನಿಧಿ ಯೋಜನೆಗಳಂತಹ ಹಲವು ವಿಚಾರಗಳ ಬಗ್ಗೆ ಅಂಬೇಡ್ಕರ್ ಅವರು ತಮ್ಮ ಕಾಲಕ್ಕಿಂತ ಮುಂದಿನ ಚಿಂತನೆ ಹೊಂದಿದ್ದರು. ದೇಶದ ಜಲ, ವಿದ್ಯುತ್ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲೂ ಅವರ ದೂರದೃಷ್ಟಿಯ ಪಾತ್ರ ಮಹತ್ವದ್ದಾಗಿದೆ.
ಸೆಂಟ್ರಲ್ ವಾಟರ್ ಕಮಿಷನ್, ಕೇಂದ್ರೀಯ ವಿದ್ಯುತ್ ಮಂಡಳಿ, ದಾಮೋದರ್ ಕಣಿವೆ ಯೋಜನೆ ಸೇರಿದಂತೆ ಹಲವು ಯೋಜನೆಗಳ ಹಿಂದೆ ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆ ಇತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವರ ಆರ್ಥಿಕ ಚಿಂತನೆಗಳು ಪ್ರಮುಖ ಆಧಾರ ವಾಗಿದ್ದವು ಎಂದು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್(Vishweshwar Bhat ) ಅವರು ತಿಳಿಸಿದ್ದಾರೆ.
![]()
ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರದಂತಹ ಬೃಹತ್ ರಾಜ್ಯಗಳನ್ನು ಆಡಳಿತಾತ್ಮಕ ಅನುಕೂಲ ಕ್ಕಾಗಿ ವಿಭಜಿಸಿ ಸಣ್ಣ ರಾಜ್ಯ ರಚಿಸುವ ಅಗತ್ಯ ವನ್ನೂ ಅಂಬೇಡ್ಕರ್ ದಶಕಗಳ ಹಿಂದೆಯೇ ಪ್ರತಿಪಾದಿಸಿದ್ದರು. ನಂತರದ ದಿನಗಳಲ್ಲಿ ದೇಶದಲ್ಲಿ ಈ ಚಿಂತನೆಗಳು ಜಾರಿಯಾದವು.
-ವಿಶ್ವೇಶ್ವರ ಭಟ್, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ