ಬೆಂಗಳೂರಿನಲ್ಲಿ ಮನೆಯ ಬಾಡಿಗೆ ದರ ಸಿಕ್ಕಾಪಟ್ಟೆ ಏರಿಕೆ; ಅಮೆರಿಕನ್ ಮಹಿಳೆಯಿಂದ ಆಕ್ರೋಶ
Viral Video: ಅಮೆರಿಕ ಮೂಲದ ಮಹಿಳೆಯೊಬ್ಬರು ಬೆಂಗಳೂರಿನ ಬಾಡಿಗೆ ದರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆಯೊಂದು ನಡೆದಿದೆ. ಇಲ್ಲಿನ ಬಾಡಿಗೆ ವ್ಯವಸ್ಥೆ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದು ಮುಂದಿನ ದಿನದಲ್ಲಿಈ ದರ ದುಪ್ಪಟ್ಟು ಆಗಬಹುದು ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಬಾಡಿಗೆ ದರ ಏರಿಕೆ ಬಗ್ಗೆ ಕಿಡಿಕಾರಿದ ಅಮೆರಿಕನ್ ಮಹಿಳೆ -
ಬೆಂಗಳೂರು, ಮೇ 6: ಭಾರತದ ಐತಿಹಾಸಿಕ ಸ್ಥಳ, ಆಹಾರ, ಜೀವನ ಶೈಲಿಗೆ ಫಿದಾ ಆದ ಆನೇಕ ವಿದೇಶಿಯರು ಇದ್ದಾರೆ. ಇಲ್ಲಿನ ಜನರ ಔದರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಹಲವರು ಆಗಾಗ ವಿಡಿಯೊ ಶೇರ್ (Viral News) ಮಾಡುತ್ತಾರೆ. ಈ ನಡುವೆ ಅಮೆರಿಕ ಮೂಲದ ಮಹಿಳೆಯೊಬ್ಬರು ಬೆಂಗಳೂರಿನ ಬಾಡಿಗೆ ದರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಇಲ್ಲಿನ ಬಾಡಿಗೆ ವ್ಯವಸ್ಥೆ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದು, ಮುಂದಿನ ದಿನದಲ್ಲಿ ಈ ದರ ದುಪ್ಪಟ್ಟು ಆಗಬಹುದು ಎಂದು ಕಿಡಿಕಾರಿದ್ದಾರೆ.
ಅಮೆರಿಕ ಮೂಲದ ಮಹಿಳೆಯೊಬ್ಬರು ಬೆಂಗಳೂರಿನ ಬಾಡಿಗೆ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಿಡಿಯೊ ಹಂಚಿಕೊಂಡಿದ್ದಾರೆ. ನಾವು ಇರುವ ಮನೆಯ ಬಾಡಿಗೆಯನ್ನು ಶೇ. 33ರಷ್ಟು ಹೆಚ್ಚು ಮಾಡಿದ್ದಲ್ಲದೆ ಮನೆಯ ಮಾಲೀಕರು ಅಹಂಕಾರದಿಂದ ಮಾತನಾಡಿದ್ದಾರೆ. ನಿಮಗೆ ಇಷ್ಟ ಇಲ್ಲದಿದ್ದರೆ ಮನೆಯನ್ನು ಖಾಲಿ ಮಾಡಿ. ಇಲ್ಲಿ ಬೇರೆಯವರು ಹಣ ಪಾವತಿ ಮಾಡಲು ಸಿದ್ದರಿದ್ದಾರೆ ಎಂದು ದಮ್ಕಿ ಹಾಕಿದ್ದಾರೆ ಎಂಬುದಾಗಿ ವಿಡಿಯೊದಲ್ಲಿ ತಿಳಿಸಿದ್ದಾರೆ.
ವಿಡಿಯೊ ನೋಡಿ:
An American living in Bengaluru complains that her rent has increased by 33% when US sets rent cap at 10% and the 4-6 months advance kept by owners when it should be just 1-2 months pic.twitter.com/u25PQFNPXa
— Lord Immy Kant (@KantInEastt) May 6, 2026
ಅಮೆರಿಕದಲ್ಲಿ ವಾರ್ಷಿಕ ಬಾಡಿಗೆ ದರ ಹೆಚ್ಚಳ ಶೇ. 10ರಷ್ಟು ಇದೆ. ಆದರೆ ಬೆಂಗಳೂರಿನಲ್ಲಿ ಡಬಲ್ ಪಟ್ಟು ವಸೂಲಿ ಮಾಡುತ್ತಿದ್ದಾರೆ. ಬಾಡಿಗೆ ನಿಯಮದ ಪ್ರಕಾರ ಎರಡು ತಿಂಗಳ ಬಾಡಿಗೆ ಮುಂಗಡವಾಗಿ ಪಾವತಿ ಮಾಡಬೇಕು. ಆದರೆ ಇಲ್ಲಿ ಆರು ತಿಂಗಳ ಬಾಡಿಗೆ ಪಾವತಿಸಲು ಹೇಳುತ್ತಿದ್ದಾರೆ. ಮಾಲೀಕರ ವರ್ತನೆ ನಿಜಕ್ಕೂ ಬೇಸರ ತರಿಸಿದೆ ಎಂದು ಅಮೆರಿಕದ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಮಾಡಿದ್ದಾರೆ. ಕರ್ನಾಟಕ ಬಾಡಿಗೆ ಕಾನೂನು ಮತ್ತು ಬಾಡಿಗೆದಾರರ ರಕ್ಷಣೆಯ ಕುರಿತು ಅನೇಕರು ಚರ್ಚೆ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು "ಸ್ಥಳೀಯರಿಗೂ ಇದೇ ಪರಿಸ್ಥಿತಿ ಇದೆ. ಸರ್ಕಾರ ಬಾಡಿಗೆ ನಿಯಮದ ಬಗ್ಗೆ ಕಠಿಣ ಕ್ರಮ ಜಾರಿಗೆ ತರಬೇಕು" ಎಂದು ಕಮೆಂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ದಿನೇ ದಿನೆ ಪಿಜಿ, ರೂಮ್ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದು ಮಾಲೀಕರು ಕೂಡ ಅಳಲು ಹೊರಹಾಕಿದ್ದಾರೆ.