ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಪೋಲೋ ಫಾರ್ಮಸಿಯಿಂದ ಕರ್ನಾಟಕದಲ್ಲಿ 1,000ನೇ ಮಳಿಗೆ ಪ್ರಾರಂಭ, ಬೆಂಗಳೂರಿನಲ್ಲಿ ಈ ಮೈಲಿಗಲ್ಲಿನ ಮಳಿಗೆಗೆ ಚಾಲನೆ

ಕರ್ನಾಟಕದ ಶೇ.10ರಷ್ಟು ಅಪೋಲೋ ಫಾರ್ಮಸಿ ಮಳಿಗೆಗಳು ದಿನಪೂರ್ತಿ ಕಾರ್ಯ ನಿರ್ವಹಿಸುವ ಮೂಲಕ ಹೆಚ್ಚಿನ ಲಭ್ಯತೆ ನೀಡುತ್ತಿವೆ. ಬೆಂಗಳೂರಿನಲ್ಲಿ ಗ್ರಾಹಕರು ಕೇವಲ 19 ನಿಮಿಷಗಳಲ್ಲಿ ಔಷಧ ಪಡೆಯುತ್ತಾರೆ ಅಥವಾ ಅಪೋಲೋ 24/7 ಆಪ್ ಮೂಲಕ ಅದೇ ದಿನದ ಪೂರೈಕೆಯನ್ನು ಆಪ್ ಮೂಲಕ ಆಯ್ಕೆ ಮಾಡಿಕೊಳ್ಳಬಹುದು, ಇದು ವೇಗಕ್ಕೆ ಮತ್ತು ವಿಶ್ವಾಸಾರ್ಹತೆಗೆ ಈ ಜಾಲದ ಆದ್ಯತೆ ತೋರುತ್ತದೆ.

ಅಪೋಲೋ ಫಾರ್ಮಸಿಯಿಂದ ಒಂದು ಸಾವಿರನೇ ಮಳಿಗೆ ಪ್ರಾರಂಭ

-

Ashok Nayak
Ashok Nayak Dec 28, 2025 10:36 AM

ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಮತ್ತು ವಿಶ್ವಾಸಾರ್ಹ ಫಾರ್ಮಸಿ ಜಾಲ ಅಪೋಲೋ ಫಾರ್ಮಸಿ ಕರ್ನಾಟಕದ 1,000ನೇ ಮಳಿಗೆಯ ಪ್ರಾರಂಭದ ಮೈಲಿಗಲ್ಲು ಸಾಧಿಸಿದ್ದು ಇದು ಬೆಂಗಳೂರಿನಲ್ಲಿದೆ.

ಈ ಮಹತ್ತರ ವಿಸ್ತರಣೆಯು ರಾಜ್ಯಾದ್ಯಂತ ಅಪೋಲೋ ಫಾರ್ಮಸಿಯ ಹೆಜ್ಜೆ ಗುರುತನ್ನು ಸದೃಢಗೊಳಿಸಿದ್ದು ಜನರಿಗೆ ವಿಸ್ತಾರ ಶ್ರೇಣಿಯ 50 ಸಾವಿರಕ್ಕೂ ಅಧಿಕ ಅಧಿಕೃತ ಔಷಧಗಳು ಮತ್ತು ಸ್ವಾಸ್ಥ್ಯದ ಅಗತ್ಯ ಉತ್ಪನ್ನಗಳನ್ನು ಅವರ ಮನೆಗಳ ಹತ್ತಿರದಲ್ಲೇ ತಂದಿದೆ. ಈ ಜಾಲವು ರಾಜ್ಯದ 31 ಜಿಲ್ಲೆಗಳಲ್ಲಿ ವಿಸ್ತರಿಸಿದ್ದು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಯಂತಹ ಆಡಳಿತಾತ್ಮಕ ಕೇಂದ್ರಗಳಲ್ಲಿ ಸದೃಢ ವ್ಯಾಪ್ತಿ ಹೊಂದಿದೆ ಮತ್ತು 7 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ.

ಕರ್ನಾಟಕದ ಶೇ.10ರಷ್ಟು ಅಪೋಲೋ ಫಾರ್ಮಸಿ ಮಳಿಗೆಗಳು ದಿನಪೂರ್ತಿ ಕಾರ್ಯ ನಿರ್ವಹಿಸುವ ಮೂಲಕ ಹೆಚ್ಚಿನ ಲಭ್ಯತೆ ನೀಡುತ್ತಿವೆ. ಬೆಂಗಳೂರಿನಲ್ಲಿ ಗ್ರಾಹಕರು ಕೇವಲ 19 ನಿಮಿಷಗಳಲ್ಲಿ ಔಷಧ ಪಡೆಯುತ್ತಾರೆ ಅಥವಾ ಅಪೋಲೋ 24/7 ಆಪ್ ಮೂಲಕ ಅದೇ ದಿನದ ಪೂರೈಕೆಯನ್ನು ಆಪ್ ಮೂಲಕ ಆಯ್ಕೆ ಮಾಡಿಕೊಳ್ಳಬಹುದು, ಇದು ವೇಗಕ್ಕೆ ಮತ್ತು ವಿಶ್ವಾಸಾರ್ಹತೆಗೆ ಈ ಜಾಲದ ಆದ್ಯತೆ ತೋರುತ್ತದೆ.

ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಅಪೋಲೋ ಫಾರ್ಮಸಿಯ ಸದೃಢ ಪ್ರಾದೇಶಿಕ ಉಪಸ್ಥಿತಿಯು ಸದೃಢ ಪೂರೈಕೆ ಸರಣಿಯ ಬೆಂಬಲ ಹೊಂದಿದ್ದು ಪ್ರತಿನಿತ್ಯ 1.5 ಲಕ್ಷ ಆರ್ಡರ್ ಗಳನ್ನು ಪೂರೈಸಲಾಗುತ್ತಿದೆ. ಕಂಪನಿಯು ಕರ್ನಾಟಕ ದಲ್ಲಿ ಮುಂದಿನ ಐದು ವರ್ಷಗಳಲ್ಲಿ 750 ಹೊಸ ಮಳಿಗೆಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದು ಗುಣಮಟ್ಟದ ಔಷಧ ಮತ್ತು ಆರೈಕೆಯ ಲಭ್ಯತೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ.

ಈ ಮೈಲಿಗಲ್ಲಿನ ಕುರಿತು ಅಪೋಲೋ ಫಾರ್ಮಸಿಯ ಸಿಇಒ ಪಿ. ಜಯಕುಮಾರ್, “ಕರ್ನಾಟಕದಲ್ಲಿ ನಮ್ಮ 1000ನೇ ಫಾರ್ಮಸಿ ಪ್ರಾರಂಭಿಸುತ್ತಿರುವುದು ನಮ್ಮ ಪ್ರಯಾಣದಲ್ಲಿ ಪ್ರಮುಖ ಹೆಜ್ಜೆ ಯಾಗಿದೆ. ಭಾರತದ ಅತ್ಯಂತ ದೊಡ್ಡ ನೆರೆಹೊರೆಯ ಔಷಧ ಪೂರೈಕೆ ಜಾಲವಾಗಿ ನಾವು ಈ ಪ್ರದೇಶದಲ್ಲಿ ನಮ್ಮ ವ್ಯಾಪ್ತಿಯನ್ನು ಸದೃಢಗೊಳಿಸುತ್ತಿದ್ದೇವೆ ಮತ್ತು ಜನರು ವಿಶ್ವಾಸಾರ್ಹ ಔಷಧ ಗಳು ಮತ್ತು ಗುಣಮಟ್ಟದ ಆರೈಕೆಯನ್ನು ತ್ವರಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಪಡೆಯುತ್ತಿರುವು ದನ್ನು ದೃಢಪಡಿಸುತ್ತೇವೆ” ಎಂದರು.

ತನ್ನ ಆಮ್ನಿಚಾನೆಲ್ ಪ್ಲಾಟ್ ಫಾರಂ ಅಪೋಲೋ 24/7 ಮೂಲಕ ಗ್ರಾಹಕರು ಅಪೋಲೋದ ವಿಶಿಷ್ಟ ಆರೈಕೆ ಪಡೆಯಬಹುದು, ಅದರಲ್ಲಿ ಅಪೋಲೋ ವೈದ್ಯರಿಂದ ಟೆಲಿ ಕನ್ಸಲ್ಟೇಷನ್ ಗಳು, ರೋಗನಿರ್ಣಯ ಸೇವೆಗಳು ಮತ್ತು ಕಸ್ಟಮೈಸ್ಡ್ ವಿಮಾ ಪರಿಹಾರಗಳನ್ನು ತಮ್ಮ ಮನೆಗಳ ಅನುಕೂಲದಲ್ಲಿ ಪಡೆಯಬಹುದು.