ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ಬಜೆಟ್ ಟು ಆಕ್ಷನ್ ಪ್ಲಾನ್; ಅನುದಾನದ ಪರಿಣಾಮಕಾರಿ ಬಳಕೆಗೆ ಕಾರ್ಯಾಗಾರ

ಬೆಂಗಳೂರು ಉತ್ತರ ನಗರ ಪಾಲಿಕೆಯ 2026–27ನೇ ಸಾಲಿನ ಬಜೆಟ್ ಗೆ ಮಂಜೂರಾದ 4344 ರೂ. ಕೋಟಿ ಅನುದಾನವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ, ಏ. 24 ರಂದು ಇನ್ಫ್ಯಾನ್ಟ್ರಿ ರಸ್ತೆಯ ಐಎಎಸ್ ಅಧಿಕಾರಿಗಳ ಸಂಘದ ಸಭಾಂಗಣದಲ್ಲಿ ‘ಬಜೆಟ್ ಟು ಆಕ್ಷನ್ ಪ್ಲಾನ್’ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ಬಜೆಟ್ ಟು ಆಕ್ಷನ್ ಪ್ಲಾನ್

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 25, 2026 1:28 PM

ಬೆಂಗಳೂರು ಉತ್ತರ ನಗರ ಪಾಲಿಕೆಯ (Bengaluru North Municipal Corporation) 2026–27ನೇ ಸಾಲಿನ ಬಜೆಟ್ ಗೆ ಮಂಜೂರಾದ 4344 ರೂ. ಕೋಟಿ ಅನುದಾನವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ, ಏ. 24 ರಂದು ಇನ್ಫ್ಯಾನ್ಟ್ರಿ ರಸ್ತೆಯ ಐಎಎಸ್ ಅಧಿಕಾರಿಗಳ ಸಂಘದ ಸಭಾಂಗಣದಲ್ಲಿ ‘ಬಜೆಟ್ ಟು ಆಕ್ಷನ್ ಪ್ಲಾನ್’ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಿಕೆಗೆ ಹಂಚಿಕೆ ಮಾಡಲಾದ ಪ್ರತಿಯೊಂದು ಪೈಸೆಯನ್ನೂ ಜನಹಿತಕ್ಕಾಗಿ ಪರಿಣಾಮಕಾರಿಯಾಗಿ ಬಳಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲಾ ಅಭಿಯಂತರರು ಶ್ರದ್ಧೆಯಿಂದ ಕಾರ್ಯನಿರತರಾಗಿದ್ದು, ಅಪರ ಆಯುಕ್ತರು ಸಹ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಪಾಲಿಕೆಯ ಅಭಿಯಂತರರು, ಅಧಿಕಾರಿಗಳ ಜೊತೆ ನಗರದ ಪಾಲುದಾರರು ಸಕ್ರಿಯವಾಗಿ ಭಾಗಿಯಾಗಿ ಯೋಜನೆಗಳನ್ನು ರೂಪಿಸಿದಾಗ ಉತ್ತಮ ಯೋಜನೆಗಳು ರೂಪುಗೊಂಡು, ಅವುಗಳನ್ನು ವಾಸ್ತವವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ನಗರದ ಹಲವಾರು ಪ್ರತಿಭಾನ್ವಿತರು ಇಂದು ಇಲ್ಲಿ ಸೇರಿ ಹಲವಾರು ಯೋಜನೆಗಳನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಆಯುಕ್ತರು ಅಭಿಪ್ರಾಯಪಟ್ಟರು.

ಕಾರ್ಯಾಗಾರದ ಉದ್ದೇಶ

ಈ ಕಾರ್ಯಾಗಾರದ ಉದ್ದೇಶವು ಬಜೆಟ್ ನಲ್ಲಿರುವ ಅನುದಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹಾಗೂ ಉತ್ತರ ನಗರ ಪಾಲಿಕೆಯ ನಾಗರಿಕರ ಜನ ಜೀವನಮಟ್ಟವನ್ನು ಸುಧಾರಿಸಲು ಪ್ರಮುಖ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತರಲು ಸೂಕ್ತ ಕಾರ್ಯತಂತ್ರಗಳ ಕುರಿತು ಚರ್ಚಿಸುವುದು. ಉತ್ತರ ನಗರ ಪಾಲಿಕೆ ಶೀಘ್ರದಲ್ಲೇ ಗುಲಾಬಿ ಮಾರ್ಗ ಮತ್ತು ನೀಲಿ ಮೆಟ್ರೋ ಮಾರ್ಗಗಳ ಮೂಲಕ ಉತ್ತಮ ಸಂಪರ್ಕ ಪಡೆಯಲಿದ್ದು, ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 18 ಹೊಸ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ. ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗ, ಸೈಕ್ಲಿಂಗ್, ಬಸ್ ಜಾಲ ಹಾಗೂ ಮೆಟ್ರೋ ಸಂಪರ್ಕವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಯಿತು.

ಕ್ರಿಯಾ ಯೋಜನೆಗಳ ಚರ್ಚೆ

ಈ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ತಜ್ಞರು ಹಾಗೂ ಎನ್.ಜಿ.ಓ ಗಳು ಭಾಗವಹಿಸಿ ಬಜೆಟ್ ನಲ್ಲಿರುವ ಯೋಜನೆಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರಲು ಅಗತ್ಯವಾದ ಕ್ರಿಯಾಯೋಜನೆಗಳ ಕುರಿತು ಚರ್ಚಿಸಿದರು. ನಗರದ ಅಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಮುಂದುವರಿಸಲು, ಪ್ರಾಯೋಗಿಕ ಚರ್ಚೆಗಳ ಮೂಲಕ ಪರಿಣಾಮಕಾರಿ ಯೋಜನೆಗಳನ್ನು ಗುರುತಿಸಲಾಯಿತು.

ಕಾರ್ಯಾಗಾರದಲ್ಲಿ ಅಪರ ಆಯುಕ್ತರಾದ ಶ್ರೀಮತಿ ಆರ್. ಲತಾ, ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ, ಶ್ರೀ ಮೊಹಮ್ಮದ್ ನಯೀಮ್ ಮೊಮಿನ್ ಹಾಗೂ ಮುಖ್ಯ ಅಭಿಯಂತರರು ಸೇರಿದಂತೆ ನಗರ ಪಾಲಿಕೆ, ಜಿಬಿಎ, ಮೆಟ್ರೋ, ಬಿಎಂಟಿಸಿ, ಡಲ್ಟ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಡಬ್ಲ್ಯೂಆರ್ಐ ಇಂಡಿಯಾ, ಸಿ40 ಸಿಟೀಸ್, ಹಸಿರು ದಳ ಸೇರಿದಂತೆ ಹಲವು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.