ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಗುಜರಾತ್‌ ಎದುರು ಧೋನಿ ಈ ಸೀಸನ್‌ನಲ್ಲಿ ಮೊದಲ ಸಲ ಕಣಕ್ಕೆ?

Chennai Super Kings vs Gujarat Titans: ಪ್ರಮುಖ ಆಟಗಾರ ಎಂ.ಎಸ್‌.ಧೋನಿ ಈ ಪಂದ್ಯದಲ್ಲಿ ಆಡುವ ಬಗ್ಗೆ ಕುತೂಹಲವಿದೆ. ಧೋನಿ ಈ ವರ್ಷ ಒಂದೂ ಪಂದ್ಯವಾಡಿಲ್ಲ. ಅವರು ತಂಡದ ಜೊತೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದು, ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆಯಿದೆ.

ಚೆನ್ನೈ vs ಗುಜರಾತ್‌ ಪಂದ್ಯದ ಪಿಚ್​, ಹವಾಮಾನ ವರದಿ ಇಲ್ಲಿದೆ

Chennai Super Kings -

Abhilash BC
Abhilash BC Apr 25, 2026 3:26 PM

ಚೆನ್ನೈ, ಎ.25: ಭಾನುವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)ನ ಡಬಲ್‌ ಹಡರ್‌ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK vs GT) ತಮ್ಮ ತವರು ಸ್ಥಳವಾದ ಎಂಎ ಚಿದಂಬರಂ(MA Chidambaram Stadium) ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಸೆಣಸಲಿದೆ. ಶುಕ್ರವಾರದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋಲು ಕಂಡಿರುವ ಗುಜರಾತ್‌ ಮತ್ತೆ ಗೆಲವಿನ ಹಳಿಗೆ ಮರಳುವ ಪ್ರಯತ್ನದಲ್ಲಿದ್ದರೆ, ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಚೆನ್ನೈ ತನ್ನ ಗೆಲವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಏಳು ಪಂದ್ಯಗಳಿಂದ ಮೂರು ಗೆಲುವುಗಳೊಂದಿಗೆ ಸಿಎಸ್‌ಕೆ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅತ್ತ ಗುಜರಾತ್ ಟೈಟಾನ್ಸ್ ಏಳು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಗುಜರಾತ್‌ ತಂಡ ಸಾಯಿ ಸುದರ್ಶನ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಶಾರೂಖ್ ಖಾನ್‌ಗೆ ಇದು ತವರಿನ ಪಂದ್ಯವಾಗಿದೆ. ಹೀಗಾಗಿ ಇವರು ಇಲ್ಲಿನ ಲಾಭವೆತ್ತಿ ತಂಡಕ್ಕೆ ದೊಡ್ಡ ಕೊಡುಗೆ ನೀಡಬೇಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಮುಖ ಆಟಗಾರ ಎಂ.ಎಸ್‌.ಧೋನಿ ಈ ಪಂದ್ಯದಲ್ಲಿ ಆಡುವ ಬಗ್ಗೆ ಕುತೂಹಲವಿದೆ. ಧೋನಿ ಈ ವರ್ಷ ಒಂದೂ ಪಂದ್ಯವಾಡಿಲ್ಲ. ಅವರು ತಂಡದ ಜೊತೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದು, ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆಯಿದೆ.

ಪಿಚ್‌ ರಿಪೋರ್ಟ್‌

ಎಂ.ಎ.ಚಿದಂಬರಂ ಸ್ಟೇಡಿಯಂನ ಪಿಚ್​ ಆರಂಭದಲ್ಲಿ ಬ್ಯಾಟರ್​​ಗಳಿಗೆ ಹೆಚ್ಚು ರನ್​ ಗಳಿಸಲು ನೆರವಾದರೂ ಪಂದ್ಯ ಸಾಗಿದಂತೆ ನಿಧಾನವಾಗುತ್ತಾ ಹೋಗುತ್ತದೆ. ಬೌಲರ್‌ಗಳು ಹಿಡಿತ ಸಾಧಿಸುತ್ತಾರೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್‌ಗೆ ಪ್ರಾಮುಖ್ಯತೆ ನೀಡುತ್ತದೆ. ಗುಜರಾತ್​ ತಂಡ ಬೌಲಿಂಗ್​ ದಾಳಿಯಲ್ಲಿ ಬಲಿಷ್ಠವಾಗಿರುವ ಕಾರಣ ಟಾಸ್ ಗೆದ್ದರೆ ಮೊದಲು ಬ್ಯಾಟ್​ ಮಾಡಿ ಎದುರಾಳಿ ತಂಡವನ್ನು ನಿಯಂತ್ರಿಸಬಹುದು.

ಹವಾಮಾನ ಹೇಗಿದೆ?

ಚೆನ್ನೈನಲ್ಲಿ ಒಣ ಹವೆಯಿರುತ್ತದೆ. ಅದರಲ್ಲೂ ಹಗಲು ಪಂದ್ಯವಾದ ಕಾರಣ ಆಟಗಾರರು ಸುಡು ಬಿಸಿಲಿಗೆ ದಣಿಯಲಿದ್ದಾರೆ. ಅರಬ್ಬಿ ಸಮುದ್ರದ ತಪ್ಪಲಿನಲ್ಲೇ ಈ ಸ್ಟೇಡಿಯಂ ಇರುವ ಕಾರಣ ಇಲ್ಲಿನ ಬಿಸಿ ಗಾಳಿಯೂ ಇರಲಿದೆ. ಪಂದ್ಯದ ವೇಳೆ ತಾಪಮಾನ 36 ರಿಂದ 37 ಡಿಗ್ರಿಯ ತನಕ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂನೆ ನೀಡಿದೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಸೇರ್ಪಡೆ; ರಾಜಸ್ಥಾನ್‌ ವಿರುದ್ಧ ಕಣಕ್ಕೆ

ಬಲಾಬಲ ಹೇಗಿದೆ?

ಒಟ್ಟು ಪಂದ್ಯಗಳು- 08

ಚೆನ್ನೈ ಸೂಪರ್ ಕಿಂಗ್ಸ್​​- 04

ಗುಜರಾತ್​ ಟೈಟನ್ಸ್​- 04

ಸಂಭಾವ್ಯ ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್ (CSK):

ಋತುರಾಜ್ ಗಾಯಕ್ವಾಡ್ (ನಾಯಕ), ಸಂಜು ಸ್ಯಾಮ್ಸನ್ (ವಿ.ಕೀ.), ಸರ್ಫರಾಜ್ ಖಾನ್, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಜೇಮಿ ಓವರ್ಟನ್, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಗುರ್ಜಪ್ನೀತ್ ಸಿಂಗ್, ಮುಖೇಶ್ ಚೌಧರಿ.

ಇಂಪ್ಯಾಕ್ಟ್ ಪ್ಲೇಯರ್: ಅಕೇಲ್ ಹೋಸೇನ್/ ಎಂ.ಎಸ್‌ ಧೋನಿ.

ಗುಜರಾತ್ ಟೈಟಾನ್ಸ್ (GT)

ಶುಭಮನ್ ಗಿಲ್ (ನಾಯಕ), ಬಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮಾನವ್ ಸುತಾರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್.

ಇಂಪ್ಯಾಕ್ಟ್ ಪ್ಲೇಯರ್: ಪ್ರಸಿದ್ಧ್ ಕೃಷ್ಣ.