ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru Power Cut: ಫೆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

BESCOM News: ಕೆಪಿಟಿಸಿಎಲ್ ವತಿಯಿಂದ ಜಾಲಹಳ್ಳಿ ವಿಭಾಗದ 66/11 ಕೆವಿ ಎ೦.ಇ.ಐ ಸಬ್‌ಸ್ಟೇಷನ್ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.10ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಫೆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಸಾಂದರ್ಭಿಕ ಚಿತ್ರ. -

Profile
Siddalinga Swamy Feb 9, 2026 4:10 PM

ಬೆಂಗಳೂರು, ಫೆ.9: ಕೆಪಿಟಿಸಿಎಲ್ ವತಿಯಿಂದ (KPTCL) ಜಾಲಹಳ್ಳಿ ವಿಭಾಗದ 66/11 ಕೆವಿ ಎ೦.ಇ.ಐ ಸಬ್‌ಸ್ಟೇಷನ್ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.10ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಎಜಿಬಿಜಿ-ಲೇಔಟ್, ಬೈರವೇಶ್ವರ ಹೋಟೆಲ್, ಶೆಟ್ಟಿಹಳ್ಳಿ ಗ್ರಾಮ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಸನ್‌ಸಾ ಪ್ರದೇಶಗಳು, ಜುಂಜಪ್ಪ ಸರ್ಕಲ್, ಲೇಕ್ ವ್ಯೂ, ನಂದನ ನಗರ, ಕಾವೇರಿ ಲೇಔಟ್, ಬೋನ್‌ವಿಲ್ ಏರಿಯಾ, ಚಿಕ್ಕಸಂದ್ರ ಐರ್‌ಲೇಔಟ್, ಸಪ್ತಗಿರಿ ಕಾಲೇಜು, ಜಗದೇಶ್‌ ಲೇಔಟ್, ನಾಗದೇಶ್‌ ಲೇಔಟ್, ತುಮಕೂರು ಮುಖ್ಯ ರಸ್ತೆ, ಗಣೇಶ ಸಾ ಮಿಲ್, ಮಹೇಶ್ವರಿ ನಗರ, ಈಗಲ್ ಬೇಕರಿ ಸುತ್ತಮುತ್ತಲಿನ ಹತ್ತಿರ, ಕೆಂಪೇಗೌಡ ನಗರ, ಕೆಕೆ ರಸ್ತೆ, ಟಿ-ದಾಸರಹಳ್ಳಿ ಮೆಟ್ರೋ ಹಿಂಭಾಗ, ಪೈಪ್‌ಲೈನ್ ರಸ್ತೆ, ಬೃಂದಾವನ ಲೇಔಟ್, ಕಲ್ಯಾಣನಗರ, ಬಾಗಲಗುಂಟೆ, ಕಿರ್ಲೋಸ್ಕರ್ ಲೇಔಟ್, ಎನ್‌ಎಂಎಚ್ ಲೇಔಟ್, ಶೌರ್ಯ ಲೇಔಟ್, ಮೀನಾಕ್ಷಿ ಲೇಔಟ್, ಸಿದ್ದೇಶ್ವರ ಲೇಔಟ್, ಸಹ್ಯಾದ್ರಿ ಬಳಗ, ಎಜಿಬಿಜಿ ಲೇಔಟ್, ಸಪ್ತಗಿರಿ ವೈದ್ಯಕೀಯ ಕಾಲೇಜು, ಹೆಸರಘಟ್ಟ ಮುಖ್ಯರಸ್ತೆ, ಚಿಕ್ಕಬಾಣಾವರ, ಸೋಮಶೆಟ್ಟಿಹಳ್ಳಿ, ಕೆರೆಗುಡ್ಡದಹಳ್ಳಿ, ಮೇದರಹಳ್ಳಿ, ಗುಣಿ ಅಗ್ರಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಯಲಹಂಕ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ

ಹೆಬ್ಬಾಳ ವಿಭಾಗದ 66/11 ಕೆವಿ ಯಲಹಂಕ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.10ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ಸಮಸ್ಯೆಗಳಿಗೆ 1912 ಅಥವಾ ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿಗೆ ದೂರು ದಾಖಲಿಸಿ: ಬೆಸ್ಕಾಂ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಕೆಎಂಎಫ್, ವೈಎನ್‌ಕೆ ನ್ಯೂ ಟೌನ್ 208, 407, 'ಬಿ' ಸೆಕ್ಟರ್, ಸಿಬಿ ಸಾಂದ್ರ, ಅಲ್ಲಾಳಸಂದ್ರ, ಶಾರದನಗರ, ಜನಪ್ರಿಯ, ಅನ್ರಿಯಾ, ಮಾರುತಿನಗರ, ಕೋಗಿಲು, ಬಿಬಿ ರಸ್ತೆ ಯಲಹಂಕ ಇತ್ಯಾದಿ. ಬಾಗಲೂರು ಕ್ರಾಸ್, ವೆಂಕಟಾಲ್, ನಿಟ್ಟೆ ಕಾಲೇಜು, ಬಿಎಸ್‌ಎಫ್, ಐಎಎಫ್, ದ್ವಾರಕಾ ನಗರ ಇತ್ಯಾದಿ. ಪೂರ್ವಕರ ಆರ್‌ಎಂಝಡ್‌ ಗ್ಯಾಲೇರಿಯಾ, ತಿರುಮಲ ನಗರ, ಅತ್ತೂರು ಬಡಾವಣೆ 1ನೇ ಅಡ್ಡರಸ್ತೆಯಿಂದ 10ನೇ ಅಡ್ಡರಸ್ತೆ, ಎಸ್ಕಾರ್ಟ್ಸ್‌ ಬಡಾವಣೆ, ದೊಡ್ಡಬೆಟ್ಟಹಳ್ಳಿ, ಟಿಪ್ಪು ವೃತ್ತ, ಚಿಕ್ಕಬೆಟ್ಟಹಳ್ಳಿ, ಕಾವೇರಿ ಬಡಾವಣೆ, ಗಿರಿಧಾಮನಗರ, ಎಎಂಎಸ್ ಬಡಾವಣೆ, ಡಿಫೆನ್ಸ್‌ ಲೇಔಟ್‌, ಜೆಲ್ಲಿ ಯಂತ್ರ, ಎಂ.ಎಸ್. ಪಾಳ್ಯ, ಟೀಚರ್ಸ್‌ ಲೇಔಟ್‌, ಬೆಲ್ 6ನೇ ಬ್ಲಾಕ್, ಎಚ್‌ಎಂಟಿ 3ನೇ ಬ್ಲಾಕ್, ಎಚ್‌ಎಂಟಿ 4ನೇ ಬ್ಲಾಕ್, ಎಚ್‌ಎಂಟಿ 6ನೇ ಬ್ಲಾಕ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.