Bagepally News: ಧರ್ಮಸ್ಥಳ ಸಂಸ್ಥೆಯಿಂದ ಅನಾಥ ವೃದ್ಧರಿಗೆ ವಾತ್ಸಲ್ಯ ಕಿಟ್ ವಿತರಣೆ
ಪೂಜ್ಯ ವೀರೇಂದ್ರಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ನಿರಾಶ್ರಿತರಿಗೆ ನೆರವಾಗ ಬೇಕು ಅವರ ನೋವಿನೋಂದಿಗೆ ನಾವು ಇರಬೇಕು ಎನ್ನುವ ಸದುದ್ದೇದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕವೆ ಹತ್ತಾರು ಜನಪರ ಯೋಜನೆ ಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಮಾಸಾಶನ ಮತ್ತು ವಾಸ್ತಲ್ಯ ಕಿಟ್ ವಿತರಣೆಗಳು ಸೇರಿವೆ
-
ಬಾಗೇಪಲ್ಲಿ: ಜೀವನ ನಡೆಸಲು ಕಷ್ಠಪಡುತ್ತಿರುವ ಅನಾಥರು, ವೃದ್ದರಿಗೆ ಪ್ರತಿ ತಿಂಗಳು ಹಣ ನೀಡುವ ಜೊತೆಗೆ ಜೀವನೋಪಾಯಕ್ಕೆ ವಸ್ತುಗಳನ್ನು ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ಕೆ ಸರಿಸಮನಾದ ಮತ್ತೊಂದು ಧರ್ಮಕಾರ್ಯ ಇಲ್ಲಾ ಎಂದು ಬಾಗೇಪಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರವೀಣ್ ಕುಮಾರ್ ಹೇಳಿದರು.
ಅವರು ಪಟ್ಟಣದ 10 ವಾರ್ಡಿನ ರಾಘವೇಂದ್ರ ಚಿತ್ರಮಂದಿರ ವ್ಯಾಪ್ತಿಯಲ್ಲಿ ಇರುವ ರಮೀದಾ ಹಾಗೂ ಪ್ಯಾರೀಮಾ ಎಂಬ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಾತ್ಸಲ್ಯ ಕಿಟ್ ಫಲಾನುಭವಿಗಳಿಗೆ ಅಗತ್ಯ ಇರುವ ಶ್ರೀ ಕ್ಷೇತ್ರ ಬಂದಿರುವ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡಿದರು.
ಕಷ್ಠದ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಅನಾಥರು ಅಭಲೆಯರನ್ನು ಗುರುತಿಸಿ ಅವರ ಮನೆಯ ಬಾಗಿಲಿಗೆ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ದಿ ಯೋಜನೆ ವಿಶ್ವದಲ್ಲಿಯೇ ಮಾದರಿ ಯೋಜನೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Bagepally News: ಖಾಸಗಿ ಶಾಲೆಗಳು ವ್ಯಾಮೋಹಕ್ಕೆ ಒಳಗಾಗದೆ ಪಿ.ಎಂ.ಶ್ರೀ ಶಾಲೆಗೆ ಸೇರಿಸಿ: ಆರ್.ಹನುಮಂತ ರೆಡ್ಡಿ ಮನವಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಲಯದ ಮೇಲ್ವಿಚಾರಕಿ ಇಂದಿರಾ ಮಾತನಾಡಿ ಪೂಜ್ಯ ವೀರೇಂದ್ರಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ನಿರಾಶ್ರಿತರಿಗೆ ನೆರವಾಗಬೇಕು ಅವರ ನೋವಿನೋಂದಿಗೆ ನಾವು ಇರಬೇಕು ಎನ್ನುವ ಸದುದ್ದೇದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕವೆ ಹತ್ತಾರು ಜನಪರ ಯೋಜನೆ ಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಮಾಸಾಶನ ಮತ್ತು ವಾಸ್ತಲ್ಯ ಕಿಟ್ ವಿತರಣೆಗಳು ಸೇರಿವೆ. ಪ್ರತಿ ತಿಂಗಳು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿರುವು ದರಿಂದ ಅವರು ತಮ್ಮ ಔಷಧಿ ಸೇರಿದಂತೆ ಅಗತ್ಯೆತೆಯನ್ನು ಪೂರೈಸಿಕೊಳ್ಳಲು ಸಹಕಾರಿಯಾಗುತ್ತಿದ್ದು, ಇದರ ಜೊತೆಗೆ ವಿದ್ಯಾರ್ಥಿವೇತನ, ಶಾಲಾ ಕಾಲೇಜುಗಳಿಗೆ ಅಗತ್ಯ ಪರಿಕರಗಳು ನೀಡುವ ಮೂಲಕ ಎಲ್ಲಾ ಕ್ಷೇತ್ರದಲ್ಲಿಯೂ ಪೂಜ್ಯರ ಸೇವೆ ಹರಡಿಕೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.