Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ
BESCOM News:ಕಂಠೀರವ ಜಿಐಎಸ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.14ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.ಈ ಕುರಿತ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಫೆ.13: ಕಂಠೀರವ ಜಿಐಎಸ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.14ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಮಾವಳ್ಳಿ, ಚಿಕ್ಕಮಾವಳ್ಳಿ, ಎಸ್.ಆರ್.ನಗರ, ಪ್ಯೂರ್‌ಫಾರ್ಮ, ಲಾಲ್‌ಬಾಗ್ ಡಬ್ಬಲ್ ರೋಡ್, ಸುಧಾಮನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಗೋಕುಲ ಉಪಕೇಂದ್ರ ವ್ಯಾಪ್ತಿಯಲ್ಲಿ ಕರೆಂಟ್ ಇರಲ್ಲ
ಜಾಲಹಳ್ಳಿ ವಿಭಾಗದ 66/11 ಕೆವಿಎ ಗೋಕುಲ ಉಪಕೇಂದ್ರ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.14ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಗೋಕುಲ ಎಂಯುಎಸ್‌ಎಸ್, ಡಿ.ಬಿ ಸಂದ್ರಾ 4ನೇ ಬ್ಲಾಕ್, ಜೆ.ಬಿ.ಕಾವಲ್ ಅರಣ್ಯ, ಗಂಗಮ್ಮ ವೃತ್ತ, ಡಿ.ಬಿ.ಸಂದ್ರ 2ನೇ ಬ್ಲಾಕ್, ಕಮ್ಮಗೊಂಡನಹಳ್ಳಿ, ಬಿಇಎಲ್ ಉತ್ತರ ಕಾಲೋನಿ ಮತ್ತು ಬಿಇಎಲ್ ಸೌತ್ ಕಾಲೋನಿ, ಬಾಹುಬಲಿ ನಗರ, ಡಿ.ಬಿ.ಸಂದ್ರ 4ನೇ ಬ್ಲಾಕ್, ಪಟೇಲ್ ಪಿಳ್ಳೇಗೌಡ ಲೇಔಟ್, ಬ್ಲೂಮ್ ಫೀಲ್ಡ್ ಗಾರ್ಡನ್, ರಾಮಚಂದ್ರಾಪುರ, ಜಾಲಹಳ್ಳಿ ಗ್ರಾಮ, ಶಾರದಾಂಬನಗರ, ಬಾಹುಬಲಿನಗರ, ಎಚ್‌ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್ ಮತ್ತು ಪ್ರೆಸ್ಟೀಜ್ ಕೆನ್ಸಿಂಗ್ಟನ್ ಅಪಾರ‍್ಟ್‌ಮೆಂಟ್, ಮುತ್ಯಾಲನಗರ, ಚಾಮುಂಡೇಶ್ವರಿ ಲೇಔಟ್, ನಂಜಪ್ಪ ಲೇಔಟ್, ಸಿ. ರಾಮಯ್ಯ ಲೇಔಟ್, ಗೋಕುಲ ಎಕ್ಸ್‌ಟಿಎನ್, HMR ಲೇಔಟ್ MRTDC, ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಗಮನಿಸಿ; ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.14ರಂದು ವಿದ್ಯುತ್ ವ್ಯತ್ಯಯ
ಇನ್ನು 66/11ಕೆ.ವಿ ಅಮರಜ್ಯೋತಿ’ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಬೆಂಗಳೂರು ನಗರದ ಹಲವೆಡೆ ಫೆ.14ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ದೊಮ್ಮಲೂರು 2ನೇ ಹಂತ, ಕೊಡಿಹಳ್ಳಿ, ದೊಮ್ಮಲೂರು ಗ್ರಾಮ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್ಎಎಲ್ 2ನೇ ಹಂತ (6ನೇ ಮೇನ್‌ವರೆಗೆ), ಇಎಸ್ಐ ಆಸ್ಪತ್ರೆ, 100 ಫೀಟ್ ರಸ್ತೆ, ಸಾಲರ್ಪುರಿಯಾ ಟೆಕ್ ಪಾರ್ಕ್, ಜೆಆರ್‌ಆರ್ ಲೇಔಟ್, ಡೈಮಂಡ್ ಡಿಸ್ಟ್ರಿಕ್ಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
66/11ಕೆ.ವಿ ‘ಎನ್.ಜಿ.ಇ.ಎಫ್’ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಬೆಂಗಳೂರು ನಗರದ ಹಲವೆಡೆ ಫೆ.14ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಜೋಗುಪಾಳ್ಯ (ಇಲ್ಪೆ ತೊಪ್ಪು), ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಜೋಗುಪಾಳ್ಯ ಮುಖ್ಯ ರಸ್ತೆ, ರಾಂಕಾ ಕೋರ್ಟ್, ಆರ್ಟಿಲರಿ ರಸ್ತೆ, ಗೌತಮ್‌ಪುರ, ಕ್ಯಾಂಬ್ರಿಜ್ ರಸ್ತೆ, ಆರ್‌ಎಂಝಡ್ ಮಿಲ್ಲೇನಿಯಾ, ಹಲಸೂರು, ಹಲಸೂರು ರಸ್ತೆ, ಕೆನರಾ ಬ್ಯಾಂಕ್, ಅಜಂತಾ ಟ್ರಿನಿಟಿ ಸರ್ಕಲ್, ಇಂದಿರಾನಗರ 1ನೇ ಹಂತ, ಹೆಚ್ಎಎಲ್ 2ನೇ ಹಂತ, ಓಲ್ಡ್ ಮದ್ರಾಸ್ ರಸ್ತೆ, ಬೆನ್ನಿಗನಹಳ್ಳಿ, ಎ ನಾರಾಯಣಪುರ, ಬಿ ನಾರಾಯಣಪುರ, ಕಗ್ಗದಾಸಪುರ, ಆಕಾಶನಗರ, ಪೈ ಲೇಔಟ್, ಉದಯನಗರ, ಬೈರಸಂದ್ರ, ಸಿ.ವಿ. ರಾಮನ್ ನಗರ, ಎನ್ಜಿಇಎಫ್ ಲೇಔಟ್ ಪೂರ್ವ ಭಾಗ, ಸದಾನಂದನಗರ, ಕಸ್ತೂರಿನಗರ, ಭುವನೇಶ್ವರಿ ನಗರ, ವರ್ತೂರು ರಸ್ತೆ, ನಾಗವಾರಪಾಳ್ಯ, ನಾಗಪ್ಪ ರೆಡ್ಡಿ ಲೇಔಟ್, ಅಬ್ಬಯ್ಯ ರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಧರ್ಮರಾಜಪಾಳ್ಯ, ವಿಜಯನಗರ ಪೈ ಲೇಔಟ್, ಉದಯನಗರ, ಗಂಗಪ್ಪ ಲೇಔಟ್, ಬಿಸಿಐಇ ಎಸ್ಟೇಟ್, ಸದಾನಂದನಗರ, ಕಸ್ತೂರಿ ನಗರ, ಕೃಷ್ಣಪ್ಪನಪಾಳ್ಯ, ಸುದ್ಧಗುಂಟೆಪಾಳ್ಯ, ಆರ್‌ಎಂಝಡ್ (ಓಲ್ಡ್ ಮದ್ರಾಸ್ ರಸ್ತೆ), ನಾಗವಾರಪಾಳ್ಯ ಕುವೆಂಪು ಸ್ಟ್ರೀಟ್, ವಿವೇಕಾನಂದ ಸ್ಟ್ರೀಟ್, ಕೊಂಡಪ್ಪ ರೆಡ್ಡಿ ಲೇಔಟ್, ಅಂಕಪ್ಪ ರೆಡ್ಡಿ ಲೇಔಟ್, ಶಿವ ದೇವಸ್ಥಾನ ರಸ್ತೆ, ಅಯ್ಯಪ್ಪ ದೇವಸ್ಥಾನ ರಸ್ತೆ, ಏರ್ ಫೋರ್ಸ್ ಕ್ವಾರ್ಟರ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
Winter Fashion 2026: ಸೀಸನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಪೊಂಚೊಗಳಿವು
ಈ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ
66/11 ಕೆ.ವಿ ರೆಮಕೊ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಬೆಂಗಳೂರು ನಗರದ ಹಲವೆಡೆ ಫೆ.14ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಮೈಸೂರು ರಸ್ತೆ 7ನೇ ಕ್ರಾಸ್, ಶಾಮಣ್ಣ ಗಾರ್ಡನ್, ಮಂಜುನಾಥ ನಗರ, ಪೈಪ್ಲೈನ್ ರಸ್ತೆ, ಸಂತೋಷ್ ಟೆಂಟ್ ಪ್ರದೇಶ, ಅನಂತ ರಾಮಯ್ಯ ಕಾಂಪೌಂಡ್, ನ್ಯೂ ಗುಡ್ಡದಹಳ್ಳಿ, ಕುವೆಂಪು ನಗರ, ಮೈಸೂರು ರಸ್ತೆ 6ನೇ ಕ್ರಾಸ್, ಮೈಸೂರು ರಸ್ತೆ 4ನೇ ಕ್ರಾಸ್, ಓಲ್ಡ್ ಗುಡ್ಡದಹಳ್ಳಿ, ಮೈಸೂರು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.