ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka DG-IGP MA Saleem: ರಾಜ್ಯ ಡಿಜಿ-ಐಜಿಪಿ ಎಂ.ಎ. ಸಲೀಂ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

1993ರ ಬ್ಯಾಚ್ IPS ಅಧಿಕಾರಿಯಾಗಿರುವ ಎಂ.ಎ.ಸಲೀಂ ಅವರು 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾಗಿದ್ದರು. ಈ ವರ್ಷದ ಜೂನ್​ನಲ್ಲಿ ನಿವೃತ್ತಿಯಾಗಬೇಕಿತ್ತು. ಆದರೆ ಸುಪ್ರೀಂಕೋರ್ಟ್​ ತೀರ್ಪಿನ ಅನುಸಾರ ಎಂ.ಎ.ಸಲೀಂ ಅವರ ಸೇವಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ.

ಡಿಜಿ-ಐಜಿಪಿ ಎಂ.ಎ. ಸಲೀಂ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

ಡಿಜಿ-ಐಜಿಪಿ ಎಂ.ಎ.ಸಲೀಂ -

Prabhakara R
Prabhakara R Apr 16, 2026 11:08 PM

ಬೆಂಗಳೂರು: ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಎಂ.ಎ.ಸಲೀಂ (DG-IGP Dr MA saleem) ಅವರ ಸೇವಾವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾಗಿದ್ದ ಎಂ.ಎ.ಸಲೀಂ ಅವರ ಸೇವಾವಧಿಯನ್ನು 2027ರ ಆ.29ರವರೆಗೆ ವಿಸ್ತರಣೆ ಮಾಡಲಾಗಿದೆ.

1993ರ ಬ್ಯಾಚ್ IPS ಅಧಿಕಾರಿಯಾಗಿರುವ ಎಂ.ಎ.ಸಲೀಂ ಅವರು ಈ ವರ್ಷದ ಜೂನ್​ನಲ್ಲಿ ನಿವೃತ್ತಿಯಾಗಬೇಕಿತ್ತು. ಆದರೆ ಸುಪ್ರೀಂಕೋರ್ಟ್​ ತೀರ್ಪಿನ ಅನುಸಾರ ಎಂ.ಎ.ಸಲೀಂ ಅವರ ಸೇವಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಡಿಜಿಪಿಗೆ ಕನಿಷ್ಠ 2 ವರ್ಷಗಳ ಅಧಿಕಾರಾವಧಿ ಇರಬೇಕು. 22.09.2006ರ ಸರ್ವೋಚ್ಚ ನ್ಯಾಯಾಲಯದ ಪ್ರಕಾಶ್ ಸಿಂಗ್ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪಿನ ಅನುಸಾರ ಡಿಜಿ & ಐಜಿಪಿ ಎಂ.ಎ.ಸಲೀಂ‌ ಅವರ ಅವಧಿ ಒಟ್ಟು 2 ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.

Yogesh Gowda Murder Case: ಮೂವರು ಮಕ್ಕಳು ಇದ್ದಾರೆ, ಕಡಿಮೆ ಶಿಕ್ಷೆ ಕೊಡಿ; ಜಡ್ಜ್‌ಗೆ ಶಾಸಕ ವಿನಯ್‌ ಕುಲಕರ್ಣಿ ಮನವಿ

ಡಾ. ಎಂ ಎ ಸಲೀಂ ಅವರು ಈ ಹಿಂದೆ ಕಲಬುರಗಿಯಲ್ಲಿ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿಯಾಗಿ, ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಪೊಲೀಸ್​ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಡಾ. ಎಂ. ಎ ಸಲೀಂ ಅವರು ಸಿಐಡಿ ಡಿಜಿಪಿಯಾಗಿದ್ದರು. ಅಲ್ಲದೇ ಪ್ರಮುಖವಾಗಿ ಬೆಂಗಳೂರು ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ಅನೇಕ ಸಂಚಾರ ಸುಧಾರಣೆ ಜಾರಿಗೆ ತಂದು ಜನಪ್ರಿಯರಾಗಿದ್ದರು.