ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ: ಬುಕ್ ಮಾಡೋ ವಿಧಾನ, ಟೈಮ್ ಟೇಬಲ್, ಟಿಕೆಟ್ ಬೆಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ
Bengaluru–Goa Vande Bharat Express: ರೈಲು ಪ್ರಯಾಣಿಕರಿಗೆ ವಿಶಿಷ್ಟ ಅನುಭವ ನೀಡಲು ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ಸಜ್ಜಾಗಿದೆ. ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಈ ಬಹು ನಿರೀಕ್ಷಿತ ಯೋಜನೆಗೆ ಚಾಲನೆ ನೀಡಿದ್ದು, ನವೆಂಬರ್ 15ರಂದು ಸಾರ್ವಜಿಕ ಸೇವೆಗೆ ಮುಕ್ತವಾಗಲಿದೆ. ಕರ್ನಾಟಕದ 12 ಕಡೆ ರೈಲಿಗೆ ನಿಲುಗಡೆ ಇದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ನ. 13: ಗೋವಾ ಪ್ರವಾಸಿ ಪ್ರಿಯರಿಗೆ ಗುಡ್ ನ್ಯೂಸ್. ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Bengaluru–Goa Vande Bharat Express) ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಆ ಮೂಲಕ ಸಿಲಿಕಾನ್ ಸಿಟಿ ಮತ್ತು ದೇಶದ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಮತ್ತೊಂದು ರೈಲು ಸಂಪರ್ಕ ದೊರೆತಂತಾಗಿದೆ. ಈ ರೈಲು ಪಶ್ಚಿಮ ಘಟ್ಟ ಮತ್ತು ಕರಾವಳಿ ಕರ್ನಾಟಕದ ನಯನಮನೋಹರ ತಾಣ, ಬೆಟ್ಟ ಗುಡ್ಡಗಳ ನಡುವೆ ಸಾಗಲಿದ್ದು, ಪ್ರವಾಸಿಗರಿಗೆ ರೋಮಾಂಚನಕಾರಿ ಅನುಭವ ನೀಡಲಿದೆ. ಕರ್ನಾಟಕದ 12 ಕಡೆ ರೈಲಿಗೆ ನಿಲುಗಡೆ ಇದೆ.
ನವೆಂಬರ್ 15ರಂದು ರೈಲು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಬೆಂಗಳೂರಿನ ಯಶವಂತಪುರ ಜಂಕ್ಷನ್‌ನಿಂದ ಗೋವಾದ ಮಡಗಾಂವ್‌ಗೆ ಸುಮಾರು 13 ಗಂಟೆ 20 ನಿಮಿಷದಲ್ಲಿ ಈ ರೈಲು ತಲುಪಲಿದೆ. ವಾರದ 6 ದಿನವೂ ರೈಲು ಸೇವೆ ಇರಲಿದೆ.
ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮೋದಿ ಚಾಲನೆ:
PM @narendramodi will flag off Bengaluru-Mangaluru-Madgaon Vande Bharat Express from Bengaluru. 🔸 New train service starting from Sir M Visvesvaraya Terminal will provide faster rail connectivity between Bengaluru, Coastal Karnataka and Goa. 🔸It will connect key destinations from Hassan and Sakleshpur to Mangaluru, Udupi, Gokarna and Karwar, before reaching Madgaon in Goa, making travel easier and giving tourism a boost. #VandeBharatExpress #IndianRailways #Karnataka #Goa #Bengaluru
— All India Radio News (@airnewsalerts) November 13, 2026
12 ನಿಲುಗಡೆ ಯಾವುದೆಲ್ಲ?
ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಮತ್ತು ಕಾರವಾರದಲ್ಲಿ ರೈಲು ನಿಲುಗಡೆಯಾಗಲಿದೆ.
ಹಳಿಗಳಲ್ಲಿ ಕ್ರಾಂತಿ ವಂದೇ ಭಾರತ್ ಸ್ಲೀಪರ್
ಟೈಮ್ ಟೇಬಲ್
ಯಶವಂತಪುರ-ಮಡಗಾಂವ್ ಮಧ್ಯೆ ಓಡಾಡುವ 26655 ಸಂಖ್ಯೆಯ ರೈಲು ಬೆಂಗಳೂರಿನಿಂದ ಬೆಳಗ್ಗೆ 7:35ಕ್ಕೆ ಹೊರಡಲಿದೆ. ಅದು ಮಡಗಾಂವ್‌ಗೆ ರಾತ್ರಿ 8:55ಕ್ಕೆ ತಲುಪಲಿದೆ. ಪ್ರಯಾಣದ ಅವಧಿ: 13 ಗಂಟೆ 20 ನಿಮಿಷ.
ಇನ್ನು 26656 ಸಂಖ್ಯೆಯ ರೈಲು ಮಡಗಾಂವ್‌ನಿಂದ ಬೆಳಗ್ಗೆ 8:20ಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ. 12 ಗಂಟೆ 55 ನಿಮಿಷದ ಮೂಲಕ ರೈಲು ರಾತ್ರಿ 9:15ಕ್ಕೆ ಯಶವಂತಪುರಕ್ಕೆ ಬರಲಿದೆ. ಎರಡೂ ರೈಲುಗಳು 6 ದಿನ ಕಾರ್ಯ ನಿರ್ವಹಿಸಲಿವೆ. ಯಶವಂತಪುರ-ಮಡಗಾಂವ್ ರೈಲು ಬುಧವಾರ ಮತ್ತು ಮಡಗಾಂವ್-ಯಶವಂತಪುರ ರೈಲು ಗುರುವಾರ ಇರಲ್ಲ. ಈ ರೈಲು ಹಗಲು ಸಂಚರಿಸುವುದರಿಂದ ಪ್ರಯಾಣಿಕರಿಗೆ ಒಂದೊಳ್ಳೆ ಪ್ರವಾಸ ಅನುಭವವಾಗಲಿದೆ.
ಬೆಲೆ ಎಷ್ಟು?
ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಎರಡು ಆಯ್ಕೆ ಲಭ್ಯ. ಏಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್. ಯಶವಂತರಪುರ ಜಂಕ್ಷನ್-ಮಡಗಾಂವ್‌ಗೆ ಟಿಕೆಟ್‌ಗೆ ಏಸಿ ಚೇರ್ ಕಾರ್‌ನಲ್ಲಿ 2,200 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್‌ನಲ್ಲಿ 3,865 ರೂಪಾಯಿ ನಿಗದಿಪಡಿಸಲಾಗಿದೆ.
ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್:
🚨 Bengaluru-Mangaluru-Madgaon Vande Bharat Express Launched; Regular Services to Begin November 15. https://t.co/D8QkuHMqK3
— Bharat Tech & Infra (@BharatTechIND) November 13, 2026
ಬೆಂಗಳೂರಿನಿಂದ ಟಿಕೆಟ್ ಬುಕ್ ಮಾಡೋದು ಹೇಗೆ?
ಬೆಂಗಳೂರಿನಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ತೆರಳುವ ಯೋಜನೆಯಲ್ಲಿದ್ದೀರಾ? ಹಾಗಾದರೆ ಟಿಕೆಟ್ ಬುಕ್ ಮಾಡುವ ವಿಧಾನ ಇಲ್ಲಿದೆ. IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಟಿಕೆಟ್ ಬುಕ್ ಮಾಡಬಹುದು.
- IRCTC ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ ಇಲ್ಲಿ ಕ್ಲಿಕ್ ಮಾಡಿ
- ಎಲ್ಲಿಂದ ಎಲ್ಲಿಗೆ ತೆರಳಬೇಕು, ದಿನಾಂಕ ಎನ್ನುವುದನ್ನು ನಮೂದಿಸಿ
- AC Chair Car ಅಥವಾ Executive Chair Car ಎನ್ನುವುದನ್ನು ಆಯ್ಕೆ ಮಾಡಿ
- ಬಳಿಕ ವಿವರ ನಮೂದಿಸಿ, ಶುಲ್ಕ ಪಾವತಿಸಿ
ವಂದೇ ಭಾರತ್‌ನಲ್ಲಿ ಇನ್ಮುಂದೆ ಸಿಗಲಿದೆ ಸ್ಲೀಪರ್ ಕೋಚ್ ಸೌಲಭ್ಯ; ರೈಲ್ವೆ ಸಚಿವಾಲಯದ ಮಾಹಿತಿಯೇನು?
IRCTC Rail Connect ಮತ್ತು RailOne ಆ್ಯಪ್‌ಗಳ ಮೂಲಕವೂ ಬುಕಿಂಗ್ ಮಾಡಬಹುದು. ಒಂದು ವೇಳೆ ನೀವು ಖುದ್ದಾಗಿ ಹೋಗಿ ಬುಕ್ ಮಾಡಲು ಬಯಸಿದರೆ, ರೈಲು ನಿಲ್ದಾಣದಲ್ಲಿರುವ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ (PRS) ಕೌಂಟರ್‌ಗೆ ಭೇಟಿ ನೀಡಿ.