ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bomb Threat: ವಿಮಾನದಲ್ಲಿ ಬಾಂಬ್‌ ಇದೆ... ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌!

Bomb Threat to plane: ವಿಮಾನದಲ್ಲಿ ಬಾಂಬ್ ಇದೆ ಎಂದು ಬರೆದು ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದಿರುವ ಘಟನೆ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದಿದೆ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ 6E4814 ವಿಮಾನದಲ್ಲಿ 168 ಪ್ರಯಾಣಿಕರಿದ್ದರು.

ಹುಸಿ ಬಾಂಬ್‌ ಕರೆ... ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್‌!

-

Rakshita Karkera Rakshita Karkera Oct 19, 2025 12:55 PM

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹುಸಿ ಬಾಂಬ್‌ ಕರೆಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಇದೀಗ ಅಂತಹದ್ದೇ ಒಂದು ಪ್ರಕರಣ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ವಿಮಾನದಲ್ಲಿ ಬಾಂಬ್(Bomb Threat to plane) ಇದೆ ಎಂದು ಬರೆದು ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದಿರುವ ಘಟನೆ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದಿದೆ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಬಾತ್ ರೂಮ್ ನಲ್ಲಿ ಬಾಂಬ್ ಇದೆ ಎಂದು ಕಿಡಿಗೇಡಿಯೊಬ್ಬ ಬರೆದಿದ್ದ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ 6E4814 ವಿಮಾನದಲ್ಲಿ 168 ಪ್ರಯಾಣಿಕರಿದ್ದರು. ವ್ಯಕ್ತಿಯ ಹುಚ್ಚಾಟದಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

ಬಾಂಬ್ ಎಂಬ ಪದ ನೋಡಿ ಪ್ರಯಾಣಿಕರು ಆತಂಕಗೊಂಡಿದ್ದರು. ಕೂಡಲೇ ಪೈಲಟ್ ಬೆಂಗಳೂರಿಗೆ ವಿಮಾಣವನ್ನು ಡೈವರ್ಟ್ ಮಾಡಿದ್ದಾರೆ. ಮಧ್ಯರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡ್ ಮಾಡಲಾಗಿದೆ. ಬಳಿಕ ಬಾಂಬ್ ನಿಷ್ಕ್ರಿಯ ಸಿಬ್ಬಂದಿ, ಶ್ವಾನದಳ ಸಿಬ್ಬಂದಿ ವಿಮಾವನ್ನು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಯಾವ ಸ್ಪೋಟಕ ವಸ್ತುಗಳೂ ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Karur Stampede Tragedy: ಇನ್ನೂ ಆರಿಲ್ಲ ಕಾಲ್ತುಳಿತದ ಕಿಚ್ಚು; ವಿಜಯ್‌ ಮನೆಗೆ ಮತ್ತೆ ಬಾಂಬ್‌ ಬೆದರಿಕೆ

ಮುಖ್ಯಮಂತ್ರಿ, ಡಿಸಿಎಂ ನಿವಾಸಗಳಿಗೆ ಬಾಂಬ್‌ ಬೆದರಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮನೆ ಸ್ಪೋಟಿಸುವುದಾಗಿ ಈಮೇಲ್ ಬೆದರಿಕೆ ಸಂದೇಶ (Bomb Threat) ಬಂದಿದೆ. ಆರು ಆರ್‌ಡಿಎಕ್ಸ್ ಫಿಕ್ಸ್ ಮಾಡಿದ್ದೇವೆ ಎಂದು dkshivakumar1 ಜಿಮೇಲ್‌ಗೆ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ತಕ್ಷಣ ಬಾಂಬ್ ಸ್ಕ್ವಾಡ್ ಸಿಎಂ ಹಾಗೂ ಡಿಸಿಎಂ ನಿವಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

arnaashinkumar ಎಂಬ ಜಿಮೇಲ್‌ ಐಡಿಯಿಂದ ಈ ಬೆದರಿಕೆ ಸಂದೇಶ ಬಂದಿದೆ. ಇದು ಹುಸಿ ಬಾಂಬ್ ಕರೆ ಎಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಅಶ್ವಥ್ ನಾರಾಯಣಸ್ವಾಮಿ ಎಂಬವರ ದೂರು ಆಧರಿಸಿ ಕೇಸ್ ದಾಖಲಾಗಿದೆ. ಈ ಮೊದಲು ಹೈಕೋರ್ಟ್‌ಗೂ ಇಂಥ ಬಾಂಬ್‌ ಬೆದರಿಕೆ ಕರೆ ಬಂದಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ, ಖಾಸಗಿ ಶಾಲೆಗಳಿಗೆ ಇಂಥ ಬೆದರಿಕೆ ಬರುವುದು ಮಾಮೂಲಾಗಿದೆ. ಇದೀಗ ಸಿಎಂ, ಡಿಸಿಎಂ ಮನೆಗಳನೂ ಕಿಡಿಗೇಡಿಗಳು ಟಾರ್ಗೆಟ್‌ ಮಾಡಿದ್ದಾರೆ.