ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಜನರ ನೆಗೆಟಿವ್ ಕಮೆಂಟ್‌ ನಮಗೆ ಎಫೆಕ್ಟ್‌ ಆಗಲ್ಲ, ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರಿಗೆ ಗೌರವ ಕೊಡೋದು ಗೊತ್ತು ; ವಿಜಯಲಕ್ಷ್ಮಿ

The Devil: ದರ್ಶನ್‌ ಅನುಪಸ್ಥಿಯಲ್ಲಿ ಸಿನಿಮಾ ರಿಲೀಸ್‌ ಆಗಿದ್ದರೂ ಅಭಿಮಾನಿಗಳು ಮೂವಿಗೆ ಸಾಥ್‌ ಕೊಟ್ಟಿದ್ದಾರೆ. ಸಿನಿಮಾ ನೋಡಿ ಎಂಜಾಯ್‌ ಮಾಡಿದ್ದಾರೆ. ರಿಲೀಸ್‌ಗೂ ಮುನ್ನ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ತಾವೇ ಮುಂದೆ ನಿಂತು ಪ್ರಚಾರ ಕಾರ್ಯಗಳನ್ನು ಮುಗಿಸಿದ್ದಾರೆ. ಸಿನಿಮಾದ ಕೆಲಸ ಪೂರ್ಣಗೊಳ್ಳುವಲ್ಲಿ ಶ್ರಮಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಷ್ಟಾಗಿ ಸಂದರ್ಶನಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ ಈಗ ಮೊದಲ ಬಾರಿಗೆ ಸಂದರ್ಶನ ನೀಡಿ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ.

ಜನರ ನೆಗೆಟಿವ್ ಕಮೆಂಟ್‌ ನಮಗೆ ಎಫೆಕ್ಟ್‌ ಆಗಲ್ಲ; ವಿಜಯಲಕ್ಷ್ಮಿ

ವಿಜಯಲಕ್ಷ್ಮೀ ದರ್ಶನ್‌ -

Yashaswi Devadiga
Yashaswi Devadiga Dec 14, 2025 8:46 AM

ಡೆವಿಲ್‌ (The Devil Movie) ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ದರ್ಶನ್‌ (Actor Darshan) ಅನುಪಸ್ಥಿಯಲ್ಲಿ ಸಿನಿಮಾ ರಿಲೀಸ್‌ ಆಗಿದ್ದರೂ ಅಭಿಮಾನಿಗಳು ಮೂವಿಗೆ ಸಾಥ್‌ ಕೊಟ್ಟಿದ್ದಾರೆ. ಸಿನಿಮಾ ನೋಡಿ ಎಂಜಾಯ್‌ ಮಾಡಿದ್ದಾರೆ. ರಿಲೀಸ್‌ಗೂ ಮುನ್ನ ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ತಾವೇ ಮುಂದೆ ನಿಂತು ಪ್ರಚಾರ ಕಾರ್ಯಗಳನ್ನು ಮುಗಿಸಿದ್ದಾರೆ. ಸಿನಿಮಾದ ಕೆಲಸ ಪೂರ್ಣಗೊಳ್ಳುವಲ್ಲಿ ಶ್ರಮಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಷ್ಟಾಗಿ ಸಂದರ್ಶನಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ ಈಗ ಮೊದಲ ಬಾರಿಗೆ ಸಂದರ್ಶನ (Interview) ನೀಡಿ ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ.

ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್​​ಗೆ ವಿಜಯಲಕ್ಷ್ಮಿ ದರ್ಶನ್ ಅವರು ಸಂದರ್ಶನ ನೀಡಿದ್ದಾರೆ. ನಟಿ ರಚನಾ ರೈ ಅವರು ಈ ಸಂದರ್ಶನ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ? ಜನ ಮರುಳೋ ಜಾತ್ರೆ ಮರುಳೋ?

ಸಿನಿಮಾ ಬಗ್ಗೆ ದರ್ಶನ್‌ ಏನು ಕೇಳಿದ್ರು?

ದರ್ಶನ್‌ ಬಗ್ಗೆ ಹಲವು ವಿಚಾರ ಶೇರ್‌ ಮಾಡಿದ್ದಾರೆ ವಿಜಯಲಕ್ಷ್ಮೀ. ಡೆವಿಲ್‌ ಸಿನಿಮಾ ಬಗ್ಗೆ ಖುಷಿ ಆಗ್ತಿದೆ. ದರ್ಶನ್‌ ಅವರು ಇಲ್ಲದೇ ಇದ್ದರೂ, ಅವರ ಫ್ಯಾನ್ಸ್‌, ಅವರ ಸಿನಿಮಾವನ್ನ, ಅವರನ್ನ ತಲೆ ಮೇಲೆ ಎತ್ತಿಕೊಂಡು ಮರೆಸುತ್ತಾ ಇದ್ದಾರೆ. ಅದಕ್ಕೆ ಇದೆ ಉದಾಹರಣೆ.

ದರ್ಶನ್‌ ಅವರು ತಮ್ಮ ಪ್ರೊಫೆಶನ್‌ನನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಇದರ ಋಣ ತೀರಿಸಲು ಪದೇ ಪದೇ ಹುಟ್ಟು ಬರಬೇಕಾಗುತ್ತೆ ಅಂತ ಇರ್ತಾರೆ. ಇನ್ನು ಸಿನಿಮಾ ರಿಲೀಸ್‌ ಆದ ಬಳಿಕ ಕಾಲ್‌ ಮಾಡಿ ಕೇಳಿದ್ದು, ಹೇಗಿದೆ ಸಿನಿಮಾ? ಜನ ಚೆನ್ನಾಗಿ ಮಜಾ ಮಾಡ್ತಾ ಇದ್ದಾರಾ? ನಿರ್ಮಾಪಕರು ಖುಷಿ ಆಗಿದ್ದಾರಾ? ಅಂತ ಕೇಳಿದ್ರು ಎಂದಿದ್ದಾರೆ.

ವೈರಲ್‌ ವಿಡಿಯೋ



ಎಫೆಕ್ಟ್‌ ಏನೂ ಆಗಲ್ಲ

ಇನ್ನು ನನ್ನ ಬಗ್ಗೆ, ನನ್ನ ಮಗನ ಬಗ್ಗೆಮಾತಾಡಿದ್ರೆ ನಮಗೆ ಎಫೆಕ್ಟ್‌ ಏನೂ ಆಗಲ್ಲ. ನನಗೆ 90 ಪರ್ಸೆಂಟ್‌ ಜನ ಪ್ರೀತಿ ತೋರಿಸ್ತಾರೆ. ಅದು ನನಗೆ ಮ್ಯಾಟರ್‌ ಆಗತ್ತೆ. ನೆಗೆಟಿವ್‌ ಕಮೆಂಟ್‌ ನಾನು ಓದೋದು ಇಲ್ಲ. ಇನ್ನು ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರಿಗೆ ಗೌರವ ಕೊಡೋದು ಗೊತ್ತು.

ನಮ್ಮ ಸೆಲೆಬ್ರಿಟಿಸ್ ಬಳಿ ಹಣ ಸಂಗ್ರಹ ಮಾಡಿ ಒಂದು ಶಾಲೆ ಶುರು ಮಾಡೋಣ. ಅವರನ್ನು ಈಗ ಅನಕ್ಷರಸ್ಥರು ಅಂತ ಯಾರೆಲ್ಲ ಹೇಳುತ್ತಿದ್ದಾರೋ ಅವರನ್ನೇ ಕರೆದುಕೊಂಡು ಬಂದು ದಯವಿಟ್ಟು ಶಿಕ್ಷಣ ನೀಡಿ ಅಂತ ಹೇಳೋಣ’ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.

ವಿಜಯಲಕ್ಷ್ಮೀ ರಿವ್ಯೂ ಶೇರ್‌

ಈ ಮುಂಚೆಯೇ ಸಿನಿಮಾ ನೋಡಿದ ಬಳಿಕ ವಿಜಯಲಕ್ಷ್ಮೀ ಅವರು ರಿವ್ಯೂ ಶೇರ್‌ ಮಾಡಿಕೊಂಡಿದ್ದರು. ಚಿತ್ರಮಂದಿರದಿಂದ ಹೊರಬಂದ ಕ್ಷಣದಲ್ಲೇ ಹೃದಯ ತುಂಬಿ ಹರಿಯಿತು. ನಿರ್ದೇಶಕ ಪ್ರಕಾಶ್ ಅವರ ದೃಷ್ಟಿ, ಕಥನಶೈಲಿ, ಪ್ರತಿಯೊಂದು ಫ್ರೇಮ್‌ ಮೇಲಿನ ಹಿಡಿತ—ಎಲ್ಲವೂ ವಿಶೇಷ. ಕ್ಯಾಮೆರಾ ಕೆಲಸ ಮತ್ತು ತಾಂತ್ರಿಕ ತಂಡದ ಶ್ರಮದಿಂದ ಚಿತ್ರವು ದೃಶ್ಯಾತ್ಮಕವಾಗಿ ನಿಜವಾದ ಸಿನೆಮಾ ಹಬ್ಬದಂತೆ ಹೊಳೆಯುತ್ತದೆ.

ಮತ್ತು ಈಗ… ದರ್ಶನ್ ಬಗ್ಗೆ ಹೇಳುವುದಾದರೆ…

ಅವರನ್ನು ನೋಡುವಾಗ ನನಗೆ ಏನು ಅನಿಸಿತೋ ಪದಗಳಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಅವರ ಪಾತ್ರಚಿತ್ರಣ, ಅಭಿನಯ, ಹಾಸ್ಯಟೈಮಿಂಗ್, ಪರದೆ ಮೇಲೆ ಅವರ ಅದ್ಭುತ ಹಾಜರಾತಿ—ಎಲ್ಲವೂ ಜಾದುವಿನಂತೆ ಅನಿಸಿತು. ನಾನು ಬೆರಗಾಗಿದ್ದೆ. ಅವರು ಎರಡು ಪಾತ್ರಗಳನ್ನೂ ಅಷ್ಟು ಸೊಗಸಾಗಿ ಹೊತ್ತೊಯ್ದ ರೀತಿ, ಹಾಲ್ನಲ್ಲಿ ಕುಳಿತಿದ್ದ ಪ್ರತಿಯೊಬ್ಬ ಅಭಿಮಾನಿಗೂ ಒಂದು ಅದ್ಭುತ ಅನುಭವ.

ಇದನ್ನೂ ಓದಿ: Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಆದರೆ ಇಂದು ನನ್ನ ಮನಸ್ಸಿಗೆ ಹೆಚ್ಚು ತಾಗಿದ್ದು ನೀವು ಎಲ್ಲರೂ. ನಿಮ್ಮ ಕ್ರೇಜ್, ನಿಮ್ಮ ಕೂಗಾಟ, ದರ್ಶನ್‌ರ ಮೇಲೆ ನೀವು ತೋರಿಸಿದ ಪ್ರೀತಿ… ಅದನ್ನು ನೋಡಿದಾಗ ನಾನು ಭಾವನೆಗಳನ್ನು ಹಿಡಿದುಕೊಳ್ಳಬೇಕಾಯಿತು. ನಿಮ್ಮ ಈ ಪ್ರೀತಿಯ ಪ್ರತಿಯೊಂದು ಹನಿ ಅವರಿಗೆ ತಲುಪುವಂತೆ ಮಾಡುತ್ತೇನೆ. ಇದೇ ಹುಚ್ಚುತನವನ್ನು ಅವರು ಬೇಗನೇ ಸ್ವತಃ ನೋಡಿ ಅನುಭವಿಸಲಿ ಎಂಬುದು ನನ್ನ ಹಾರೈಕೆ ಎಂದು ಬರೆದುಕೊಂಡಿದ್ದರು.