ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಚಹಾ ಸೇವಿಸಿದ ‌ವಿದೇಶಿ ವ್ಲಾಗರ್‌ನಿಂದ ಭಾರತೀಯ ಆತಿಥ್ಯಕ್ಕೆ ಮೆಚ್ಚುಗೆ: ವಿಡಿಯೊ ಇಲ್ಲಿದೆ

Viral Video: ಇತ್ತೀಚೆಗೆ ಅಮೆರಿಕದ ವ್ಲಾಗರ್ ಒಬ್ಬರು ಬೆಂಗಳೂರಿಗೆ ಭೇಟಿ ನೀಡಿದ್ದು ಭಾರತೀಯ ಜನರ ಔದರ್ಯ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವರು ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಆದ ಒಂದು ವಿಶಿಷ್ಟ ಅನುಭವವನ್ನು ಶೇರ್ ಮಾಡಿದ್ದಾರೆ. ಸಣ್ಣ ಚಹಾ ಅಂಗಡಿಯೊಂದರ ಮಾಲೀಕರೊಬ್ಬರು ತನ್ನ ಬಳಿ ಹಣ ಪಡೆಯಲು ನಿರಾಕರಿಸಿದ ಸರಳ ಸೌಜನ್ಯಕ್ಕೆ ಅವರು ಫಿದಾ ಆಗಿದ್ದು ವಿಡಿಯೊ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರಿನ ಆತಿಥ್ಯಕ್ಕೆ ಮನಸೋತ ವಿದೇಶಿ ಪ್ರವಾಸಿಗ

ಅಮೆರಿಕನ್ ವ್ಲಾಗರ್ ನಿಕ್ ಮೆಕ್‌ ಕಚಿಯನ್ -

Profile
Pushpa Kumari Dec 13, 2025 8:20 PM

ಬೆಂಗಳೂರು, ಡಿ. 13: ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯ, ಭಾರತೀಯ ಜೀವನ ಶೈಲಿ, ಇಲ್ಲಿನ ಆಹಾರ ಇತ್ಯಾದಿ ಅವರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ಅಮೆರಿಕದ ವ್ಲಾಗರ್ ಒಬ್ಬರು ಬೆಂಗಳೂರಿಗೆ ಭೇಟಿ ನೀಡಿದ್ದು ಭಾರತೀಯ ಜನರ ಔದರ್ಯ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವರು ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಆದ ಒಂದು ವಿಶಿಷ್ಟ ಅನುಭವವನ್ನು ಶೇರ್ ಮಾಡಿದ್ದಾರೆ. ಸಣ್ಣ ಚಹಾ ಅಂಗಡಿಯೊಂದರ ಮಾಲೀಕರೊಬ್ಬರು ತನ್ನ ಬಳಿ ಹಣ ಪಡೆಯಲು ನಿರಾಕರಿಸಿದ ಸೌಜನ್ಯಕ್ಕೆ ಅವರು ಫಿದಾ ಆಗಿದ್ದು ವಿಡಿಯೊ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ

ವಿದೇಶಿ ವ್ಲಾಗರ್‌ಗಳು ತಮ್ಮ ಪ್ರಯಾಣವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಭಾರತದಲ್ಲಿನ ಸಣ್ಣ ವಿಚಾರಗಳನ್ನು ಕೂಡ ಹೆಚ್ಚಾಗಿ ಗಮನಿಸುತ್ತಾರೆ. ಡಿ.ಜೆ. ಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೆರಿಕನ್ ವ್ಲಾಗರ್ ನಿಕ್ ಮೆಕ್‌ ಕಚಿಯನ್ ಅಂತಹ ಒಂದು ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿಕ್ ಮೆಕ್‌ಕಚನ್ ಸ್ಥಳೀಯರೊಂದಿಗೆ ಬೆರೆಯುತ್ತಾ ಸಣ್ಣ ಅಂಗಡಿಯೊಂದರಲ್ಲಿ ಚಹಾ ಕುಡಿದಿದ್ದಾರೆ.‌ ಆದರೆ ಚಹಾ ಸೇವನೆ ಮಾಡಿದ ನಂತರ ಅವರು ಹಣ ಪಾವತಿಸಲು ಹೋದಾಗ ಅಂಗಡಿಯ ಮಾಲೀಕರು ಹಣ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಭಾರತದಲ್ಲಿ ಸಣ್ಣ ಅಂಗಡಿ ಮಾಲೀಕರಿಂದಲೂ ಇಂತಹ ಆತಿಥ್ಯವನ್ನು ಕಂಡು ವ್ಲಾಗರ್ ಭಾವುಕರಾಗಿದ್ದಾರೆ.

ವಿಡಿಯೊ ನೋಡಿ:

ನಿಕ್ ಮೆಕ್‌ಕಚನ್ ಈ ಘಟನೆಯನ್ನು ಹಂಚಿಕೊಂಡಿದ್ದು ನೀವು ತುಂಬಾ ದಯೆ ತೋರುತ್ತೀರಿ. ವಾಹ್! ಸ್ನೇಹಿತ ನನ್ನ ಚಹಾಕ್ಕೆ ಹಣ ನೀಡುತ್ತಿದ್ದಾನೆ. ಎಷ್ಟು ಚೆನ್ನಾಗಿದೆ ನಿಮ್ಮ ಆತಿಥ್ಯ. ಭಾರತೀಯ ಆತಿಥ್ಯವು ಪ್ರಪಂಚದ ಬೇರೆಲ್ಲಿಯೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ತಮ್ಮ ಈ ಭೇಟಿಯಿಂದ ಅಲ್ಲಿನ ಜನರು ಖುಷಿಪಟ್ಟಿದ್ದು ನೋಡಿ ತಮಗೂ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ. ದೂರ ಕಾರು ಚಲಾಯಿಸಿದ ತಂದೆ!

ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ. ನೆಟ್ಟಿಗರೊಬ್ಬರು ಇದು ಭಾರತೀಯ ಸಂಸ್ಕೃತಿ. ಇಲ್ಲಿನ ಆತಿಥ್ಯ ಮತ್ತು ದಯೆ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ ಮತ್ತೊಬ್ಬರು ಕೇವಲ ಒಂದು ಕಪ್ ಚಹಾದಿಂದ ವ್ಯಕ್ತವಾಗುವ ದಯೆ ನಿಜಕ್ಕೂ ಮೆಚ್ಚುವಂತದ್ದು ಎಂದು ಕಮೆಂಟ್ ಮಾಡಿದ್ದಾರೆ.