ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಹಸುಗಳಿಂದ ಟ್ರಾಫಿಕ್ ಜಾಮ್‌! ದನಗಳ ಮಾಲೀಕನ ಮೇಲೆ ಎಫ್‌ಐಆರ್‌

ಭಾರತದಲ್ಲೇ ಅತಿ ಹೆಚ್ಚು ಟ್ರಾಫಿಕ್ ಜಾಮ್ ಎದುರಿಸುತ್ತಿರುವ ನಗರ ಎಂದು ಬೆಂಗಳೂರನ್ನು ಹೇಳಲಾಗುತ್ತದೆ. ಇಲ್ಲಿ 10 ಕಿಲೋಮೀಟರ್ ದೂರ ಪ್ರಯಾಣಿಸಲು ಕನಿಷ್ಟ 35 ನಿಮಿಷಗಳು ಬೇಕು. ವಾಹನ ದಟ್ಟಣೆ ಹಾಗೂ ಟ್ರಾಫಿಕ್‌ ಕಿರಿಕಿರಿ ಜನ ಹೈರಾಣಾಗಿದ್ದಾರೆ.

ಬೆಂಗಳೂರಿನಲ್ಲಿ ಹಸುಗಳಿಂದ ಟ್ರಾಫಿಕ್ ಜಾಮ್‌!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 12, 2026 8:02 AM

ಭಾರತದಲ್ಲೇ ಅತಿ ಹೆಚ್ಚು ಟ್ರಾಫಿಕ್ ಜಾಮ್ ಎದುರಿಸುತ್ತಿರುವ ನಗರ ಎಂದು ಬೆಂಗಳೂರನ್ನು ಹೇಳಲಾಗುತ್ತದೆ. ಇಲ್ಲಿ 10 ಕಿಲೋಮೀಟರ್ ದೂರ ಪ್ರಯಾಣಿಸಲು ಕನಿಷ್ಟ 35 ನಿಮಿಷಗಳು ಬೇಕು. ವಾಹನ ದಟ್ಟಣೆ ಹಾಗೂ ಟ್ರಾಫಿಕ್‌ ಕಿರಿಕಿರಿ ಜನ ಹೈರಾಣಾಗಿದ್ದಾರೆ. ಮೊನ್ನೆ ಸಹ ಬೆಂಗಳೂರಿನ ಹೃದಯಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದ್ರೆ, ಈ ಬಾರಿ ಟ್ರಾಫಿಕ್ ಜಾಮ್ ಗೆ ಕಾರಣವಾಗಿದ್ದು ಹಸುಗಳು.

ಆಗಸ್ಟ್​​ 10ರ ಬೆಳಿಗ್ಗೆ ಮಾರತಹಳ್ಳಿ ಮತ್ತು HAL ವಿಮಾನ ನಿಲ್ದಾಣದ ಬಳಿಯ ಕಲಾಮಂದಿರದ ಮುಖ್ಯ ರಸ್ತೆಯಲ್ಲಿ ಮಾಲೀಕರಿಲ್ಲದೆ ಬಿಟ್ಟಿದ್ದ ದನಗಳು ರಸ್ತೆಯ ಮಧ್ಯದಲ್ಲಿ ಬಂದು ನಿಂತಿದ್ದವು. ಇದರಿಂದಾಗಿ ಐಟಿ ಕಾರಿಡಾರ್‌ಗೆ ಸಂಪರ್ಕಿಸುವ ಅತ್ಯಂತ ಬ್ಯುಸಿ ರಸ್ತೆಯಾದ ಹೊರ ವರ್ತುಲ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಅದರಂತೆ, ವಾಹನ ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳಬೇಕಾಯಿತು.



ಈ ವೇಳೆ ಸ್ಥಳಕ್ಕೆ ಬಂದ ಹೆಚ್‌ಎಎಲ್ ಸಂಚಾರ ಠಾಣೆ ಪೊಲೀಸರು ಹರಸಾಹಸ ಪಟ್ಟು, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಮಾರತ್ತಹಳ್ಳಿಯ ಅಶ್ವಥನಗರ ನಿವಾಸಿಯಾಗಿರುವ, ಹಸುಗಳ ಮಾಲೀಕ 40 ವರ್ಷದ ಸಂತೋಷ್ ಇ. ಎಂಬುವವರ ವಿರುದ್ಧ HAL ಏರ್‌ಪೋರ್ಟ್ ಸಂಚಾರಿ ಪೊಲೀಸರು ಸ್ವಯಂಪ್ರೇರಿತ FIR ದಾಖಲಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಅಡಚಣೆ ಮತ್ತು ಅಪಾಯ ಉಂಟುಮಾಡಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 285 ರ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Bengaluru Traffic: ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗೆ ತಾಳ್ಮೆಗೆಟ್ಟ ಉತ್ತರ ಪ್ರದೇಶದ ಎಸ್‌ಪಿ ಸಂಸದ, ಟ್ರಾಫಿಕ್‌ ಪೊಲೀಸರ ಮೇಲೆ ಆಕ್ರೋಶ

ವಿಶ್ವದ ಅತ್ಯಂತ ದಟ್ಟಣೆಯುಳ್ಳ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನವನ್ನು ಪಡೆದುಕೊಂಡಿದೆ. 2023ರಲ್ಲಿ 6ನೇ ಸ್ಥಾನ, 2024ರಲ್ಲಿ 3ನೇ ಸ್ಥಾನ, 2025ರಲ್ಲಿ 2ನೇ ಸ್ಥಾನಕ್ಕೆ ಏರಿದೆ. ಏಷ್ಯಾದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ; ಭಾರತದ ಇತರ ನಗರಗಳು (ಪುಣೆ 5ನೇ, ಮುಂಬೈ, ದೆಹಲಿ, ಕೋಲ್ಕತ್ತಾ ಇತ್ಯಾದಿ) ಕೂಡ ಟಾಪ್ ಪಟ್ಟಿಯಲ್ಲಿವೆ.