5 ಮಕ್ಕಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಸ್ಟಿಯಾನೊ ರೊನಾಲ್ಡೊ
10 ವರ್ಷಗಳ ಕಾಲ ಜೊತೆಯಾಗಿ ವಾಸಿಸುತ್ತಿರುವ ಜಾರ್ಜಿನಾ ಮತ್ತು ರೊನಾಲ್ಡೊ ದಂಪತಿಗೆ ಕ್ರಿಸ್ಟಿಯಾನೋ ಜೂನಿಯರ್, ಮಾಟಿಯೊ, ಬೆಲ್ಲಾ, ಅಲಾನಾ, ಇವಾ ಮಕ್ಕಳನ್ನು ಹೊಂದಿದ್ದಾರೆ. 2022ರಲ್ಲಿ, ದಂಪತಿಗೆ ಅವಳಿ ಮಕ್ಕಳು ಜನನವಾಯ್ತು ಆದರೆ ಒಂದು ಮಗು ಮರಣ ಹೊಂದಿತು.
Cristiano Ronaldo marries Georgina Rodriguez -
ದುಬೈ, ಆ.12: ಪೋರ್ಚುಗಲ್‌ನ ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರೊಡ್ರಿಗಸ್ ಅವರನ್ನು ಬುಧವಾರ(ಆ.11) ರಂದು ಪೋರ್ಚುಗಲ್‌ನ ಕಸ್ಕೆಸ್‌ನಲ್ಲಿ ನಡೆದ ಖಾಸಗಿ ನಾಗರಿಕ ಸಮಾರಂಭದಲ್ಲಿ ವಿವಾಹವಾದರು. ಈ ಜೋಡಿಯು ತಮ್ಮ ಐದು ಮಕ್ಕಳ ಸಮ್ಮುಖದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಉಂಗುರದ ಚಿತ್ರದೊಂದಿಗೆ ಈ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
41 ವರ್ಷದ ರೊನಾಲ್ಡೊ, ಪೋರ್ಚುಗಲ್ ಮತ್ತು ಅಲ್ ನಾಸ್ರ್ ಫಾರ್ವರ್ಡ್ ಆಟಗಾರ ಮತ್ತು 32 ವರ್ಷದ ಅರ್ಜೆಂಟೀನಾ-ಸ್ಪ್ಯಾನಿಷ್ ಮಾಡೆಲ್ ರೊಡ್ರಿಗಸ್ ಕಳೆದ 10 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ದಂಪತಿಗಳು ತಮ್ಮ ಕೈಗಳಲ್ಲಿ ಮದುವೆಯ ಬ್ಯಾಂಡ್‌ಗಳನ್ನು ಧರಿಸಿರುವ ಚಿತ್ರವನ್ನು ಹಂಚಿಕೊಂಡು ಅಧಿಕೃತವಾಗಿ ಮದುವೆಯಾದ ವಿಚಾರವನ್ನು ಖಚಿತಪಡಿಸಿದರು.
ಮದುವೆಗೆ ಕೆಲವು ದಿನಗಳ ಮೊದಲು, ರೊನಾಲ್ಡೊ ಮತ್ತು ರೊಡ್ರಿಗಸ್ ರೊನಾಲ್ಡೊ ಅವರ ತವರು ಮಡೈರಾದ ಫಂಚಲ್ಸ್ ಎಸ್ ಕ್ಯಾಥೆಡ್ರಲ್‌ನಲ್ಲಿ ವಿವಾಹವಾಗಲಿದ್ದಾರೆ ಎಂದು ವದಂತಿಗಳು ಹರಡಿದ್ದವು. ದಂಪತಿಗಳನ್ನು ನೋಡಲು ನೂರಾರು ಅಭಿಮಾನಿಗಳು ಕ್ಯಾಥೆಡ್ರಲ್ ಹೊರಗೆ ಜಮಾಯಿಸಿದ್ದರು.
ತಮ್ಮ ಮೊದಲ ವೃತ್ತಿಪರ ಕ್ರಿಕೆಟ್ ಶತಕ ಸಿಡಿಸಿದ ಆಂಡ್ರೊ ಫ್ಲಿಂಟಾಫ್ ಪುತ್ರ ರಾಕಿ!
La locura de las masas ayer y su parada en lugares no designados fuera de la Catedral de Funchal tras rumores de la boda de la leyenda Cristiano 🤯💍 pic.twitter.com/1YEErq7fZr
— Arielipillo (@arielipillo) August 9, 2026
ಈ ಇಬ್ಬರು 2016ರಲ್ಲಿ ಸ್ಪೇನ್‌ನಲ್ಲಿ ಭೇಟಿಯಾದರು. ಆ ಸಮಯದಲ್ಲಿ, ಜಾರ್ಜಿನಾ ಅಂಗಡಿಯಲ್ಲಿ ಸೇಲ್ಸ್‌ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ಅವರಿಬ್ಬರ ನಡುವೆ ಸ್ನೇಹ ಪ್ರಾರಂಭವಾಗಿ ಈ ಸ್ನೇಹ 2017ರಲ್ಲಿ ಪ್ರೀತಿಗೆ ತಿರುಗಿತು. ಅದರ ನಂತರ, ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. 10 ವರ್ಷಗಳ ಕಾಲ ಜೊತೆಯಾಗಿ ವಾಸಿಸುತ್ತಿರುವ ಜಾರ್ಜಿನಾ ಮತ್ತು ರೊನಾಲ್ಡೊ ದಂಪತಿಗೆ ಕ್ರಿಸ್ಟಿಯಾನೋ ಜೂನಿಯರ್, ಮಾಟಿಯೊ, ಬೆಲ್ಲಾ, ಅಲಾನಾ, ಇವಾ ಮಕ್ಕಳನ್ನು ಹೊಂದಿದ್ದಾರೆ. 2022ರಲ್ಲಿ, ದಂಪತಿಗೆ ಅವಳಿ ಮಕ್ಕಳು ಜನನವಾಯ್ತು ಆದರೆ ಒಂದು ಮಗು ಮರಣ ಹೊಂದಿತು.
26 ಕೋಟಿ ಬೆಲೆಯ ರಿಂಗ್
ನಿಶ್ಚಿತಾರ್ಥ ಸಮಯದಲ್ಲಿ ರೊನಾಲ್ಡೊ ಗೆಳತಿ ಜಾರ್ಜಿನಾಗೆ ಧರಿಸಿರುವ ಉಂಗುರವು ಅತ್ಯಂತ ದುಬಾರಿಯದ್ದಾಗಿದೆ. ಈ ಉಂಗುರವು ವಜ್ರಗಳಿಂದ ತಯಾರಿಸಲಾಗಿದೆ. ಪ್ರಸಿದ್ಧ ಆಭರಣ ವ್ಯಾಪಾರಿ ಜೂಲಿಯಾ ಶಾಫ್ ಈ ಉಂಗುರದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಉಂಗುರದಲ್ಲಿ ದುಬಾರಿ ವಜ್ರದ ಹರಳುಗಳಿವೆ ಎಂದು ಜೂಲಿಯಾ ಹೇಳಿದರು. ಈ ಉಂಗುರವು $3 ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ. 26.30 ಕೋಟಿ) ಮೌಲ್ಯದ್ದಾಗಿದೆ ಎಂದು ಜೂಲಿಯಾ ಹೇಳಿದ್ದಾರೆ.