ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ವಿಂಗ್‌ ಪ್ರಕರಣ ಮುಚ್ಚಿ ಹಾಕಲು ಕೃಪಾ ಯತ್ನ ?

ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸ್ಟಿಂಗ್ ಆಪರೇಷನ್(Sting Operation) ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿ ರುವ ಕೃಪಾ ಆಳ್ವ(Kripa Alva) ಅವರ ಹಿಂದಿನ ಕಾರ್ಯವೈಖರಿ ಈಗ ಮತ್ತೆ ಮುನ್ನೆಲೆಗೆ ಹಾಗೂ ಚರ್ಚೆಗೆ ಬಂದಿದೆ.

ಸ್ವಿಂಗ್‌ ಪ್ರಕರಣ ಮುಚ್ಚಿ ಹಾಕಲು ಕೃಪಾ ಯತ್ನ ?

-

Profile
Ashok Nayak Nov 4, 2026 8:44 AM

ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಮಹಿಳೆ ನೀಡಿದ ದೂರು ಮುಚ್ಚಿ ಹಾಕಲು ಪ್ರಯತ್ನಿಸಿದ ಸ್ಟಿಂಗ್ ಕ್ವೀನ್ ಕೃಪಾ ಆಳ್ವ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಟಿಂಗ್ ಆಪರೇಷನ್(Sting Operation) ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿ ರುವ ಕೃಪಾ ಆಳ್ವ(Kripa Alva) ಅವರ ಹಿಂದಿನ ಕಾರ್ಯವೈಖರಿ ಈಗ ಮತ್ತೆ ಮುನ್ನೆಲೆಗೆ ಹಾಗೂ ಚರ್ಚೆಗೆ ಬಂದಿದೆ.

ಕೃಪಾ ಆಳ್ವ 2015ರಿಂದ 2018ರವರೆಗೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ಇ-ಮೇಲ್ ಮೂಲಕ ದೂರು ದಾಖಲಿಸಿದ್ದರು. ಮಹಿಳೆ ನೀಡಿದ್ದ ದೂರಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪೊಲೀಸರಿಗೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸ ಬೇಕಿತ್ತು. ಆದರೆ, ಆ ದೂರಿನ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಬದಲು ಪ್ರಕರಣವನ್ನು ಮುಚ್ಚಿಹಾಕಲು ಕೃಪಾ ಆಳ್ವ ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Kripa Alva: ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್‌ ಆಪರೇಷನ್‌ ಷಡ್ಯಂತ್ರ; ಕಾಂಗ್ರೆಸ್‌ ಪಕ್ಷದಿಂದ ಕೃಪಾ ಆಳ್ವಾ ಉಚ್ಚಾಟನೆ

2018ರಿಂದಲೂ ಮಹಿಳೆಯ ಸಂಪರ್ಕದಲ್ಲಿದ್ದರಾ ಕೃಪಾ ಆಳ್ವ?: ಮತ್ತೊಂದು ಬೆಳವಣಿಗೆ ಯೆಂದರೆ, 2018ರಿಂದಲೂ ಕೃಪಾ ಆಳ್ವ ಅವರು ಕೇರಳ ಮೂಲದ ಮಹಿಳೆಯ ಸಂಪರ್ಕದಲ್ಲಿದ್ದರು ಎಂಬುದು. 2023ರಲ್ಲಿ ಮಹಿಳೆಯ ಹೇಳಿಕೆಯನ್ನು ವಿಡಿಯೋ ರೂಪದಲ್ಲಿ ದಾಖಲಿಸಿ ಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯ ವಾಗಿದೆ. ಅಂದರೆ, ಮಹಿಳೆ ಈ ಹಿಂದೆ ನೀಡಿದ್ದ ದೂರಿನ ವಿಚಾರ ಮತ್ತು ನಂತರದ ಸಂಪರ್ಕದ ಹಿನ್ನೆಲೆ ಇದೀಗ ಸ್ಟಿಂಗ್ ಪ್ರಕರಣದ ಚರ್ಚೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ. ಮಹಿಳೆ ಯಾವ ಕಾರಣಕ್ಕೆ ಇ-ಮೇಲ್ ಮೂಲಕ ದೂರು ನೀಡಿದ್ದರು? ಆ ದೂರಿನ ಬಗ್ಗೆ ಆಯೋಗದ ಅಧ್ಯಕ್ಷೆಯಾಗಿದ್ದ ಕೃಪಾ ಆಳ್ವ ಕೈಗೊಂಡ ಕ್ರಮಗಳೇನು? ದೂರು ಬಂದಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರೇ? 2023ರಲ್ಲಿ ಮಹಿಳೆಯ ಹೇಳಿಕೆಯನ್ನು ವಿಡಿಯೋ ರೂಪ ದಲ್ಲಿ ದಾಖಲಿಸಿಕೊಳ್ಳುವ ಅಗತ್ಯ ಏನಿತ್ತು? ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.

ಸಿಸಿಬಿ ವಿಚಾರಣೆಗೆ ಹಾಜರಾದ ಪ್ರಜ್ವಲ್ ಪ್ರಸಾದ್: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆರೋಪ ಕೇಸ್ ಸಂಬಂಧ ಸಿಸಿಬಿ ಪೊಲೀಸರ ವಿಚಾರಣೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ(H D Kumaraswamy) ಅವರ ಪಿಆರ್‌ಒ ಪ್ರಜ್ವಲ್ ಪ್ರಸಾದ್ ಹಾಜರಾಗಿದ್ದಾರೆ. ದೆಹಲಿಯ ಎಚ್‌ಡಿಕೆ ನಿವಾಸದಲ್ಲಿ ಆರೋಪಿ ರಿತೇಶ್ ಪಾಂಡೆಗೆ ಮೊಬೈಲ್ ನೀಡಿದ ಆರೋಪ ಸಂಬಂಧ, ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಜ್ವಲ್ ಪ್ರಸಾದ್ ವಿಚಾರಣೆ ನಡೆದಿದೆ.

ಇತ್ತೀಚೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುರ್ಮಾ ಸಿಂಗ್ ಅವರು ಪ್ರಜ್ವಲ್ ಪ್ರಸಾದ್ ನಾಪತ್ತೆಯಾಗಿzರೆ ಎಂದು ತಿಳಿಸಿದ್ದರು. ಆದರೆ, ಪ್ರಜ್ವಲ್ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಹೇಳಿದರು. ಉಂಟಾಗುತ್ತಿರುವ ವೈಯಕ್ತಿಕ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ(K N Rajanna) ಸ್ಟಿಂಗ್ ಆಪರೇಷನ್‌ನಿಂದ ಪಕ್ಷದ ಮೇಲೆ ಪರಿಣಾಮ, ಚಾರಿತ್ರ್ಯದ ಮೇಲೆ ಆಗುತ್ತಿರುವ ಪ್ರಭಾವ ಸೇರಿದಂತೆ ಎಲ್ಲ ವಿಚಾರಗಳನ್ನು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ(Rahul gandhi) ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿzರೆ. ಸ್ಟಿಂಗ್ ಆಪರೇಷನ್ ಪ್ರಕರಣ ಕರ್ನಾಟಕಕ್ಕೆ ಅಪಕೀರ್ತಿ ತರುವಂತಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಅಭಿವೃದ್ಧಿಗೆ ಗುಜರಾತ್ ಮಾದರಿ ಎಂಬಂತೆ, ಇಂತಹ ಪ್ರಕರಣಗಳಿಗೆ ಕರ್ನಾಟಕ ಮಾದರಿ ಎಂಬ ಅಪಖ್ಯಾತಿ ಬರಬಾರದು. ಕನ್ನಡಿಗರು ಯಾವುದೇ ಜಾಮೀನು ಪಡೆದುಕೊಂಡಿದ್ದು, ಇದೀಗ ಪೊಲೀಸರ ನೋಟಿಸ್ ಬೆನ್ನ ವಿಚಾರಣೆಗೆ ಸಿಸಿಬಿ ಪ್ರಕರಣದಲ್ಲಿ ಈ ವಿಚಾರದಲ್ಲಿ ತಲೆತಗ್ಗಿಸುವಂತಾಗಿದೆ. ತನಿಖೆ ನಡೆದರೂ ನಿರಪರಾಧಿಗಳನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದರೆ ಅವರಿಗೆ ನ್ಯಾಯ ದೊರೆಯಬೇಕು. ಮುಂದೆ ಹಾಜರಾಗಿದ್ದಾರೆ.

ಸ್ಟಿಂಗ್‌ಗೆ ಕರ್ನಾಟಕ, ಅಭಿವೃದ್ಧಿಗೆ ಗುಜರಾತ್ ಮಾಡೆಲ್: ಸ್ಟಿಂಗ್ ಆಪರೇಷನ್ ಪ್ರಕರಣ ಕರ್ನಾಟಕ ರಾಜ್ಯಕ್ಕೆ ದೊಡ್ಡ ಕಳಂಕವಾಗಿದ್ದು, ಈ ಪ್ರಕರಣದ ಕುರಿತು ಉನ್ನತಮಟ್ಟದ ಅಥವಾ ಯಾವುದೇ ಹಂತದ ತನಿಖೆ ಸ್ಟಿಂಗ್ ಆಪರೇಷನ್‌ಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆಯಾಗಬೇಕು. ಭವಿಷ್ಯದಲ್ಲಿ ಇಂತಹ ಕೃತ್ಯಗಳಿಗೆ ಯಾರೂ ಮುಂದಾಗದಂತೆ ಸೂಕ್ತ ತನಿಖೆ ನಡೆಸುವುದು ಆಗ್ರಹಿಸಿದ್ದಾರೆ.

image

ಸ್ಟಿಂಗ್ ಆಪರೇಷನ್ ಪ್ರಕರಣ ಕರ್ನಾಟಕ ರಾಜ್ಯಕ್ಕೆ ದೊಡ್ಡ ಕಳಂಕವಾಗಿದ್ದು, ಈ ಪ್ರಕರಣದ ಕುರಿತು ಉನ್ನತಮಟ್ಟದ ಅಥವಾ ಯಾವುದೇ ಹಂತದ ತನಿಖೆ ನಡೆದರೂ ಸತ್ಯ ಹೊರಬರಬೇಕು.

-ಕೆ.ಎನ್.ರಾಜಣ್ಣ, ಮಾಜಿ ಸಚಿವ