Reservation Policy: ಒಳ ಮೀಸಲಾತಿ ಕುರಿತು ಚರ್ಚೆ: ರಾಜ್ಯ ಎಸ್ಸಿ-ಎಸ್ಟಿ ಆಯೋಗದ ಮಹತ್ವದ ಸಭೆ
ಸುಪ್ರೀಂ ಕೋರ್ಟ್(Supreme Court) ನೀಡಿರುವ ಮೀಸಲಾತಿ ನೀತಿ(Reservation Policy) ಸಂಬಂಧಿತ ನಿರ್ದೇಶನಗಳ ಹಿನ್ನೆಲೆಯಲ್ಲಿ ಅನುಸೂಚಿತ ಜಾತಿಗಳ ಒಳಮೀಸಲಾತಿ ವಿಷಯವನ್ನು ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಈ ಕುರಿತು ರಾಜ್ಯದ ವಿವಿಧ ಜಿಲ್ಲೆಗಳಿಂದ ಎಸ್ಸಿ ಸಮುದಾಯದ ಸದಸ್ಯರಿಂದ ಅನೇಕ ಮನವಿಗಳು ಆಯೋಗಕ್ಕೆ ಬಂದಿರುವುದಾಗಿ ತಿಳಿಸಲಾಗಿದೆ.
-
ಬೆಂಗಳೂರು: ರಾಜ್ಯದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಒಳಮೀಸಲಾತಿ (Reservation for Scheduled Castes and Scheduled Tribes) ಕುರಿತಾಗಿ ಮಹತ್ವದ ಚರ್ಚೆ ನಡೆಸಲು ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು.
ಮಾ.17ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯ ಆಯೋಗದ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಸಂಬಂಧಪಟ್ಟ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ನಿವೃತ್ತ ಕೆ.ಪಿ.ಎಸ್.ಸಿ ಅಧ್ಯಕ್ಷರು,ಸದಸ್ಯರು ಹಾಗೂ ಐ.ಎ.ಎಸ್ ಅಧಿಕಾರಿಗಳು ಭಾಗವಹಿಸಿದರು.
ಸುಪ್ರೀಂ ಕೋರ್ಟ್(Supreme Court) ನೀಡಿರುವ ಮೀಸಲಾತಿ ನೀತಿ(Reservation Policy) ಸಂಬಂಧಿತ ನಿರ್ದೇಶನಗಳ ಹಿನ್ನೆಲೆಯಲ್ಲಿ ಅನುಸೂಚಿತ ಜಾತಿಗಳ ಒಳಮೀಸಲಾತಿ ವಿಷಯವನ್ನು ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಈ ಕುರಿತು ರಾಜ್ಯದ ವಿವಿಧ ಜಿಲ್ಲೆಗಳಿಂದ ಎಸ್ಸಿ ಸಮುದಾಯದ ಸದಸ್ಯರಿಂದ ಅನೇಕ ಮನವಿಗಳು ಆಯೋಗಕ್ಕೆ ಬಂದಿರುವುದಾಗಿ ತಿಳಿಸಲಾಗಿದೆ.
ಸಭೆಯಲ್ಲಿ ವಿವಿಧ ಇಲಾಖೆ, ಮಂಡಳಿ, ನಿಗಮಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಈ ವರ್ಗಕ್ಕೆ ಸಂಬಂಧಿಸಿದ ನೇಮಕಾತಿಗಳ ಪ್ರಸ್ತುತ ಸ್ಥಿತಿಯನ್ನು ವಿವರವಾಗಿ ಪರಿಶೀಲಿಸಲಾಯಿತು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸುತ್ತೋಲೆ ಅನ್ವಯ, ಪರಿಶಿಷ್ಟ ಜಾತಿ ನೌಕರರಿಗೆ 5 ವರ್ಷಗಳ ಸೇವಾನುಭಾವ ಗಳನ್ನು 3 ವರ್ಷಗಳಿಗೆ ಸಡಿಲಿಕೆಗೊಳಿಸಿ, ವಿವಿಧ ಇಲಾಖೆ , ನಿಗಮ ಮತ್ತು ಮಂಡಳಿ, ವಿಶ್ವವಿದ್ಯಾಲಯಗಳು ಹಾಗೂ ಅನುದಾನಿತ ಸಂಸ್ಥೆಗಳು ನೀಡಲಾಗಿರುವ ಪದೋ ನ್ನತಿಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.
ಜೊತೆಗೆ ಬಾಕಿ ಇರುವ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಪರಿಣಾಮಕಾರಿ ಜಾರಿಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ಸರ್ಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಕಾರ್ಯದರ್ಶಿ ಗಳಾದ ಅಶೋಕ್ ಕೆ.ಎಲ್, ಸುನಿಲ್ ಎಂ. ಉಕ್ಕಲಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಣದೀಪ್ ಡಿ., ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಶ್ರೀಮತಿ ಖುಷ್ಬೂ ಗೋಯಲ್ ಚೌಧರಿ, ಡಿಪಿಎಆರ್ ಕಾರ್ಯದರ್ಶಿ ಡಾ. ಕೆ. ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಡಾ. ರಾಕೇಶ್ ಕುಮಾರ್ ಕೆ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ, ಕೆಪಿಎಸ್‌ಸಿ ಮಾಜಿ ಸದಸ್ಯರಾದ ದಾಸಯ್ಯ, ಕನಿರಾಮ್ ಮತ್ತು ಚಂದ್ರಶೇಖರಪ್ಪ, ನಿವೃತ್ತ ಐಎಎಸ್ ಅಧಿಕಾರಿಗಳಾದ ಮಂಜುನಾಥ ಪ್ರಸಾದ್, ಡಾ. ಬಾಬು ರಾವ್ ಮುಡಬಿ, ಗಣಿ ಇಲಾಖೆ ನಿವೃತ್ತ ಮಹಾನಿರ್ದೇಶಕ ಟಿ.ಬಿ. ನಾಯಕ ಉಪಸ್ಥಿತರಿದ್ದರು.