ರಾಜ್ಯದಲ್ಲಿ ಬರಗಾಲ, ʼಕಹಿʼಯಾಗಲಿದೆ ಸಕ್ಕರೆ
ಕಳೆದ ವರ್ಷ ರಾಜ್ಯದಲ್ಲಿರುವ 81 ಸಕ್ಕರೆ ಕಾರ್ಖಾನೆ ಗಳಿಂದ 576 ಲಕ್ಷ ಟನ್ ಕಬ್ಬು ಅರೆಯಲಾಗಿತ್ತು. ಕಳೆದ ವರ್ಷ ಕರ್ನಾಟಕ ಹಾಗೂ ಮಹಾ ರಾಷ್ಟ್ರದಲ್ಲಿ ಇಳುವರಿ ಹೆಚ್ಚಾಗಿದ್ದರಿಂದ ದೇಶದ ಒಟ್ಟು ಸಕ್ಕರೆ ಉತ್ಪಾದನೆ ಶೇ.7ರಷ್ಟು ಏರಿಕೆಯಾಗಿತ್ತು. ಆದರೆ ಈ ಬಾರಿ ಕರ್ನಾಟಕದಲ್ಲಿ ಭೀಕರ ಕ್ಷಾಮ ಆವರಿಸಿರುವುದರಿಂದ, ಶೇ.35ರಿಂದ 40ರಷ್ಟು ಕಬ್ಬು ಇಳುವರಿ ಕಡಿಮೆಯಾಗಲಿದೆ ಎನ್ನುವ ಆತಂಕ ಶುರುವಾಗಿದೆ.
-
ಬೆಂಗಳೂರು: ಸಕ್ಕರೆ ಬೆಲೆ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ, ಪ್ರಸಕ್ತ ಸಾಲಿನ ಮುಂಗಾರು ಕೈಕೊಟ್ಟಿರುವುದರಿಂದ ಮುಂದಿನ ಜನವರಿ ವೇಳೆಗೆ ಸಕ್ಕರೆ ಮಾತ್ರವಲ್ಲದೇ ದೈನಂದಿನ ದಿನಸಿ ಬೆಲೆಗಳೂ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುವ ಆತಂಕ ಸೃಷ್ಟಿಯಾಗಿದೆ. ದೇಶದ ಸಕ್ಕರೆ ಉದ್ಯಮದಲ್ಲಿ ಕರ್ನಾಟಕದ ಪಾತ್ರ ಮಹತ್ವವಾಗಿದೆ.
ಕಳೆದ ವರ್ಷ ರಾಜ್ಯದಲ್ಲಿರುವ 81 ಸಕ್ಕರೆ ಕಾರ್ಖಾನೆ ಗಳಿಂದ 576 ಲಕ್ಷ ಟನ್ ಕಬ್ಬು ಅರೆಯ ಲಾಗಿತ್ತು. ಕಳೆದ ವರ್ಷ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಇಳುವರಿ ಹೆಚ್ಚಾಗಿದ್ದರಿಂದ ದೇಶದ ಒಟ್ಟು ಸಕ್ಕರೆ ಉತ್ಪಾದನೆ ಶೇ.7ರಷ್ಟು ಏರಿಕೆಯಾಗಿತ್ತು. ಆದರೆ ಈ ಬಾರಿ ಕರ್ನಾಟಕದಲ್ಲಿ ಭೀಕರ ಕ್ಷಾಮ ಆವರಿಸಿರುವುದರಿಂದ, ಶೇ.35ರಿಂದ 40ರಷ್ಟು ಕಬ್ಬು ಇಳುವರಿ ಕಡಿಮೆಯಾಗಲಿದೆ ಎನ್ನುವ ಆತಂಕ ಶುರುವಾಗಿದೆ. ಈಗಾಗಲೇ ದೇಶದಲ್ಲಿ ಸಕ್ಕರೆ ದರ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಸದ್ಯ ಕೆಜಿ ಸಕ್ಕರೆ ಬೆಲೆ 70 ರು.ಗೇರಿದೆ. ಇಂತಹ ಹೊತ್ತಿನಲ್ಲಿ ಕಬ್ಬಿನ ಇಳುವರಿ ಕರ್ನಾಟಕ ದಲ್ಲಿಯೂ ಇಳಿಕೆಯಾಗಿರು ವುದರಿಂದ ಮುಂದಿನ ದಿನದಲ್ಲಿ ಸಕ್ಕರೆ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಯಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ, 172ರಿಂದ 230 ಲಕ್ಷ ಟನ್ ಕಬ್ಬಿನ ಇಳುವರಿ ಕುಸಿಯುವ ಸಾಧ್ಯತೆ ಯಿದೆ. ಇದರಿಂದಾಗಿ ಒಟ್ಟಾರೆ ಸಕ್ಕರೆ ಉದ್ಯಮಕ್ಕೆ ಸುಮಾರು 7ರಿಂದ 8 ಸಾವಿರ ಕೋಟಿ ರು. ನಷ್ಟ ವಾಗಲಿದೆ. ಈ ಪ್ರಮಾಣದಲ್ಲಿ ನಷ್ಟ ಉಂಟಾದರೆ ಇದರ ನೇರ ಹೊರೆ ರೈತರಿಗೆ ಬೀಳಲಿದೆ ಎನ್ನುವುದು ಸಕ್ಕರೆ ಬೆಳೆಗಾರರ ಆತಂಕ.
ಬಿತ್ತಿರುವ ಬೀಜವೂ ನಷ್ಟ: ಕಳೆದ ವರ್ಷ ಸುಮಾರು 5.60 ಲಕ್ಷ ಟನ್ ಬಿತ್ತನೆ ಬೀಜ ವಿತರಿಸ ಲಾಗಿತ್ತು. ಈ ವರ್ಷ ಸುಮಾರು ಮೂರು ಲಕ್ಷ ಟನ್ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಈ ಬಾರಿ ತೀವ್ರ ಮಳೆ ಕೊರತೆಯಿಂದ ಹಲವು ಭಾಗದಲ್ಲಿ ಬಿತ್ತನೆಯಾಗಿಲ್ಲ. ಆದ್ದರಿಂದ ಬಿತ್ತನೆ ಬೀಜದಲ್ಲಿ ಎಷ್ಟು ಫಲವಾಗಲಿದೆ? ಎನ್ನುವ ಸ್ಪಷ್ಟತೆ ಯಾರಿಗೂ ಇಲ್ಲ. ಇನ್ನು ರಾಜ್ಯದಲ್ಲಿರುವ ಸುಮಾರು 93 ಲಕ್ಷ ಜಾನುವಾರು, 1.90 ಕೋಟಿ ಕುರಿ-ಮೇಕೆಗಳಿಗೆ ಅಗತ್ಯವಿರುವ 2.75 ಕೋಟಿ ಟನ್ ಮೇವನ್ನು ಯಾವ ರೀತಿಯಲ್ಲಿ ಹೊಂದಿಸಲಾಗುತ್ತದೆ ಎನ್ನುವ ಆತಂಕ ರೈತರಲ್ಲಿ ಮೂಡಿದೆ.
ಅಕ್ಟೋಬರ್‌ನಲ್ಲಿಯೇ ಈ ಪ್ರಮಾಣದ ಬರದ ಛಾಯೆಯಿರುವುದರಿಂದ ಮುಂದಿನ ಮೇವರೆಗೆ ಯಾವ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎನ್ನುವ ಆತಂಕ ರೈತರು, ಅಧಿಕಾರಿಗಳಲ್ಲಿ ಮೂಡಿದೆ
ದೇಶದ 18 ರಾಜ್ಯಗಳಲ್ಲಿ ಬರ, ಆಹಾರ ಧಾನ್ಯ ಕೊರತೆ ಖಾತ್ರಿ
ಇನ್ನು 2025ರಲ್ಲಿ ರಾಜ್ಯದ ಸುಮಾರು 84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಾಗಿದ್ದ ಬಿತ್ತನೆಯಿಂದ ಸುಮಾರು 137 ಲಕ್ಷ ಟನ್ ಆಹಾರಧಾನ್ಯ ಉತ್ಪತ್ತಿಯಾಗಿತ್ತು. ಈ ಬಾರಿ ದೇಶದ 18 ರಾಜ್ಯಗಳಲ್ಲಿ ತೀವ್ರ ಬರದ ಕಾರಣಕ್ಕೆ, ಧಾನ್ಯ ಉತ್ಪಾದನೆಯಲ್ಲಿ ತೀವ್ರ ಕೊರತೆಯಾಗಲಿದೆ. ಇನ್ನು 2025ರಲ್ಲಿ ರಾಜ್ಯದ ಸುಮಾರು 84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಾಗಿದ್ದ ಬಿತ್ತನೆಯಿಂದ ಸುಮಾರು 137 ಲಕ್ಷ ಟನ್ ಆಹಾರಧಾನ್ಯ ಉತ್ಪತ್ತಿಯಾಗಿತ್ತು. ಆದರೆ ಈ ಬಾರಿ ತೀವ್ರ ಬರದ ಕಾರಣಕ್ಕೆ, ಸುಮಾರು 58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ತೀವ್ರ ಮಳೆ ಕೊರತೆಯ ಕಾರಣಕ್ಕೆ, ಈ ಪ್ರದೇಶದಲ್ಲಿ ಬಿತ್ತನೆಯಾಗಿರುವ ಬೆಳೆಗಳು ಸಿಗುವುದು ಅನುಮಾನ ಎನ್ನಲಾಗಿದೆ. ಅದರಲ್ಲಿಯೂ ಭತ್ತ, ರಾಗಿ, ಜೋಳ, ಬೇಳೆಕಾಳುಗಳ ಕೊರತೆಯಿಂದಾಗಿ ಜನವರಿ ವೇಳೆಗೆ ರಾಜ್ಯದಲ್ಲಿ ದೈನಂದಿನ ದಿನಸಿ ಸಾಮಗ್ರಿಗಳ ಕೊರತೆಗೆ ಕಾರಣವಾದರೂ ಅಚ್ಚರಿ ಯಿಲ್ಲ ಎನ್ನುವ ಆತಂಕ ಶುರುವಾಗಿದೆ.
ಕೊರತೆಯಾಗುವ ಧಾನ್ಯಗಳನ್ನು ಹೊರ ರಾಜ್ಯದಿಂದ ಪಡೆಯುವ ಆಲೋಚನೆಯಲ್ಲಿ ರಾಜ್ಯ ಸರಕಾರವಿದೆ. ಆದರೆ ದೇಶದ 18 ರಾಜ್ಯಗಳಲ್ಲಿ ಕರ್ನಾಟಕದ ರೀತಿಯಲ್ಲಿಯೇ ಭೀಕರ ಬರ ಎದುರಾ ಗಿರುವುದರಿಂದ ಹೊರರಾಜ್ಯಗಳಿಂದಲೂ ಕರ್ನಾಟಕಕ್ಕೆ ಯಾವ ಪ್ರಮಾಣದಲ್ಲಿ ಸಹಾಯ ಸಿಗಲಿದೆ ಎನ್ನುವ ಪ್ರಶ್ನೆಯಿದೆ. ಆದ್ದರಿಂದ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ರೀತಿ ಆಮದುಮಾಡಿಕೊಂಡರೆ ನಿಶ್ಚಿತವಾಗಿ ದಿನಸಿ ಪದಾರ್ಥದ ಬೆಲೆ ಗಗನಕ್ಕೆ ಏರುವುದು ನಿಶ್ಚಿತ ಎನ್ನುವ ಮಾತುಗಳು ಕೇಳಿ ಬರುತ್ತಿದೆ
ಕಬ್ಬು ಬೆಳೆ, ಬೆಳೆಗಾರರ ದುಸ್ಥಿತಿ
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕಬ್ಬಿನ ಬಿತ್ತನೆ ತೀವ್ರ ಕುಸಿತ
ಕಳೆದ ವರ್ಷ ರಾಜ್ಯದಲ್ಲಿ 576 ಲಕ್ಷ ಟನ್ ಕಬ್ಬು ಅರೆತ, ಈ ಬಾರಿ ಕೊರತೆ
ಈ ವರ್ಷ 230 ಲಕ್ಷ ಟನ್‌ಗಳವರೆಗೆ ಕಬ್ಬಿನ ಇಳುವರಿಯಲ್ಲಿ ಕುಸಿತ
ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.35ರಿಂದ ಶೇ.40 ಇಳುವರಿ ಕೊರತೆ
ಸಕ್ಕರೆ ಉದ್ಯಮಕ್ಕೆ 7ರಿಂದ 8000 ಕೋಟಿ ರು. ನಷ್ಟ ಸಾಧ್ಯತೆ, ರೈತರಿಗೆ ಆತಂಕ
ಪ್ರಾಣಿಗಳ ಮೇವಿಗೂ ತತ್ವಾರ, ವಿದೇಶದಿಂದ ಸಕ್ಕರೆ ಆಮದಿನತ್ತ ಕಣ್ಣು