ರೈಲು ಪ್ರಯಾಣಿಕ ಕಾಯ್ದಿರಿಸಿದ ಸೀಟ್ ಆಕ್ರಮಿಸಿಕೊಂಡ ಮಹಿಳೆ: ಮನವಿ ಮಾಡಿದರೂ ಬಿಟ್ಟುಕೊಡದೆ ಉದ್ಧಟತನ
Viral News: ಮುಂಬೈಯ ಬಾಂದ್ರಾದಿಂದ ಗುಜರಾತ್ ಅಹಮದಾಬಾದ್‌ಗೆ ಹೊರತ ರೈಲಿನಲ್ಲಿ ನಡೆದ ಘಟನೆಯೊಂದು ಭಾರಿ ಚರ್ಚಗೆ ಕಾರಣವಾಗಿದೆ. ಪ್ರಯಾಣಿಕರೊಬ್ಬರು ಕಾಯ್ದಿರಿಸಿದ ಲೋವರ್ ಬರ್ತ್ ಸೀಟ್ ಅನ್ನು ಮಹಿಳೆಯೊಬ್ಬಳು ಆಕ್ರಮಿಸಿದ್ದು, ಬಿಟ್ಟು ಕೊಡಲು ನಿರಾಕರಿಸಿದ್ದಾಳೆ. ಈ ಅನುಭವವನ್ನು ಪ್ರಯಾಣಿಕ ಶೇರ್ ಮಾಡಿಕೊಂಡಿದ್ದಾರೆ. ಈ ಘಟನೆಯು ಪ್ರಯಾಣಿಕರ ಹಕ್ಕುಗಳು ಹಾಗೂ ರೈಲ್ವೆ ನಿಯಮದ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಸಾಂದರ್ಭಿಕ ಚಿತ್ರ -
ಗಾಂಧಿನಗರ, ಅ. 11: ರೈಲಿನಲ್ಲಿ ಸೀಟಿನ ವಿಚಾರವಾಗಿ ಜಗಳಗಳು ನಡೆಯುತ್ತಿರುತ್ತವೆ. ಮಹಾರಾಷ್ಟ್ರದ ಬಾಂದ್ರಾದಿಂದ ಗುಜರಾತ್‌ನ ಅಹಮದಾಬಾದ್‌ಗೆ ಹೊರಟ ಅಮ್ರಾಪುರ ಅರವಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಘಟನೆಯೊಂದು ಭಾರಿ ಚರ್ಚಗೆ ಕಾರಣವಾಗಿದೆ. ಪ್ರಯಾಣಿಕರೊಬ್ಬರು ಕಾಯ್ದಿರಿಸಿದ ಲೋವರ್ ಬರ್ತ್ ಅನ್ನು ಮಹಿಳೆ ಆಕ್ರಮಿಸಿ ಬಿಟ್ಟು ಕೊಡಲು ನಿರಾಕರಿಸಿದ್ದಾಳೆ. ಈ ಅನುಭವವನ್ನು ಪ್ರಯಾಣಿಕ ರೆಡ್ಡಿಟ್‌ನಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ. ಈ ಘಟನೆಯು ಪ್ರಯಾಣಿಕರ ಹಕ್ಕು ಹಾಗೂ ರೈಲ್ವೆ ನಿಯಮದ ಬಗ್ಗೆ ಚರ್ಚೆ ಹುಟ್ಟು ಹಾಕಿದೆ.
ಸಹ-ಪ್ರಯಾಣಿಕರ ಜತೆ ವಿವಾದದ ನಂತರವೂ ಕನ್ಫರ್ಮ್ ಟಿಕೆಟ್ ಹೊಂದಿದ್ದರೂ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು ಎಂದು ಪ್ರಯಾಣಿಕ ಬೇಸರ ಹೊರ ಹಾಕಿದ್ದಾರೆ. ತಮ್ಮ ಕನ್ಫರ್ಮ್ ಕೆಳಭಾಗದ ಬರ್ತ್‌ನಲ್ಲಿ ಮಹಿಳೆ ಕುಳಿತಿದ್ದು, ಅಲ್ಲಿಂದ ಏಳಲು ನಿರಾಕರಿಸಿದ್ದಾಳೆ. ಟಿಕೆಟ್ ತೋರಿಸಿದರೂ ಕುಟುಂಬದವರು ಒಟ್ಟಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಆ ವ್ಯಕ್ತಿ ಬೇರೆ ಸೀಟಿಗೆ ಹೋಗಬೇಕೆಂದು ಆ ಮಹಿಳೆ ಪಟ್ಟು ಹಿಡಿದಿದ್ದಾಳೆ.
ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ದಾಳಿ ಮಾಡಿದ ಒಂಟಿ ಸಲಗ
ಈ ಬಗ್ಗೆ ವಿವರಣೆ ನೀಡಿದ ಪ್ರಯಾಣಿಕ, ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಸೀಟಿಗೆ ಹೋದಾಗ, ಸುಮಾರು 45 ವರ್ಷ ವಯಸ್ಸಿನ ಮಹಿಳೆ ಕಾಯ್ದಿರಿಸಿದ ಲೋವರ್ ಬರ್ತ್‌ನಲ್ಲಿ ಕುಳಿತುಕೊಂಡಿರುವುದು ಕಂಡು ಬಂತು. ತಮ್ಮ ಕುಟುಂಬದವರು ಒಟ್ಟಿಗೆ ಪ್ರಯಾಣಿಸುತ್ತಿರುವುದರಿಂದ ಬೇರೆ ಸೀಟಿಗೆ ಹೋಗುವಂತೆ ಮಹಿಳೆ ಹೇಳಿದ್ದಾಳೆ.
ಪ್ರಯಾಣಿಕ ಸೀಟನ್ನು ಬಿಟ್ಟುಕೊಡಲು ನಿರಾಕರಿಸಿದಾಗ, ಮಹಿಳೆ ಮತ್ತು ಆಕೆಯ ಕುಟುಂಬದವರು ವಾಗ್ವಾದ ನಡೆಸಿದ್ದಾರೆ. ಇನ್ನೊಂದು ಸೀಟ್ ಸಿಗುತ್ತಿದೆಯಲ್ಲ, ಸಮಸ್ಯೆಯೇನು? ಎಂದು ಪ್ರಶ್ನಿಸಿ ಜಗಳ ಮಾಡಿದ್ದಾರೆ. ಪ್ರಯಾಣಿಕ ಕೂಡಲೇ ರೈಲ್ವೆ ಸಹಾಯವಾಣಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ರೈಲಿನೊಳಗೆ ನೆಟ್‌ವರ್ಕ್ ಸಂಪರ್ಕ ಸರಿಯಿಲ್ಲದ ಕಾರಣ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಟಿಕೆಟ್ ಪರೀಕ್ಷಕರನ್ನು (TTE) ಹುಡುಕಲು ಪ್ರಯತ್ನಿಸಿದರೂ ಆ ಸಮಯದಲ್ಲಿ ಅವರು ಸಿಗಲಿಲ್ಲ. ಕೊನೆಗೆ ಆ ವ್ಯಕ್ತಿ ಯಾವುದೇ ದೊಡ್ಡ ಜಗಳಕ್ಕೆ ಹೋಗದೆ, ಸೀಟಿನ ಮೂಲೆಯಲ್ಲಿ ಹೊಂದಿಕೊಂಡು ರಾತ್ರಿ ಕಳೆದಿದ್ದಾರೆ.