ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2nd PUC Results 2026: ಪರೀಕ್ಷಾ ಮಂಡಳಿಯ ಮಹಾ ಎಡವಟ್ಟು; ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗೆ 100ಕ್ಕೆ 111 ಅಂಕ!

ದ್ವಿತೀಯ ಪಿಯುಸಿ ಫಲಿತಾಂಶ ನೀಡುವಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಡವಟ್ಟಿನಿಂದ ಹಲವು ವಿದ್ಯಾರ್ಥಿಗಳು ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕ ಪಡೆದಿದ್ದಾರೆ. ಈ ಪೈಕಿ ಒಬ್ಬ ವಿದ್ಯಾರ್ಥಿಗೆ ಹಿಂದಿ ವಿಷಯದಲ್ಲಿ 100 ಅಂಕಗಳಿಗೆ 111 ಅಂಕ ನೀಡಲಾಗಿದೆ.

ಪರೀಕ್ಷಾ ಮಂಡಳಿಯ ಎಡವಟ್ಟು; ಹಿಂದಿಯಲ್ಲಿ ವಿದ್ಯಾರ್ಥಿಗೆ 100ಕ್ಕೆ 111 ಅಂಕ!

ವಿದ್ಯಾರ್ಥಿಯ ಅಂಕಪಟ್ಟಿ. -

Prabhakara R
Prabhakara R Apr 10, 2026 2:53 PM

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ (2nd PUC Results 2026) ಗುರುವಾರ ಪ್ರಕಟವಾಗಿತ್ತು. ಈ ಬಾರಿ ಶೇ. 86.48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ. 13.03 ಫಲಿತಾಂಶ ಹೆಚ್ಚಳವಾಗಿದೆ. ಆದರೆ, ಫಲಿತಾಂಶ ನೀಡುವಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹಾ ಎಡವಟ್ಟು ಮಾಡಿಕೊಂಡಿರುವುದು ಕಂಡುಬಂದಿದ್ದು, ಹಲವು ವಿದ್ಯಾರ್ಥಿಗಳು ಗರಿಷ್ಠ ಅಂಕಗಳಿಗಿಂತ ಹೆಚ್ಚು ಮಾರ್ಕ್ಸ್‌ ಬಂದಿವೆ. ಹೀಗಾಗಿ ಪರೀಕ್ಷಾ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.

ಒಬ್ಬ ವಿದ್ಯಾರ್ಥಿಗೆ ಹಿಂದಿ ವಿಷಯದಲ್ಲಿ 100 ಅಂಕಗಳಿಗೆ 111 ಅಂಕ ನೀಡಲಾಗಿದೆ. ನೋಂದಣಿ ಸಂಖ್ಯೆ ಹಾಕಿ ಫಲಿತಾಂಶ ಪರಿಶೀಲಿಸಿದಾಗ ವೆಬ್‌ಸೈಟ್‌ನಲ್ಲಿ 111 ಅಂಕ ತೋರಿಸಿದೆ. ಹಿಂದಿ ವಿಷಯದಲ್ಲಿ ಥಿಯರಿಯಲ್ಲಿ ವಿದ್ಯಾರ್ಥಿಗೆ 94 ಅಂಕ ಬಂದಿದ್ದರೆ, ಕಾಲೇಜು 17 ಆಂತರಿಕ ಅಂಕಗಳನ್ನು ನೀಡಿದೆ. ಇಲ್ಲಿ 80 ಅಂಕಗಳಿಗೆ 94 ಅಂಕ ನೀಡಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ವಿದ್ಯಾರ್ಥಿಯದ್ದು ಮಾತ್ರ ಅಲ್ಲ ಇನ್ನೂ ಹಲವು ವಿದ್ಯಾರ್ಥಿಗಳ ಫಲಿತಾಂಶವನ್ನು ತಪ್ಪಾಗಿ ಪ್ರಕಟಿಸಲಾಗಿದೆ. 6 ವಿಷಯದಲ್ಲೂ 100 ಕ್ಕಿಂತ ಹೆಚ್ಚು ಅಂಕವನ್ನು ನೀಡಲಾಗಿದೆ. ಮತ್ತೊಬ್ಬ ವಿದ್ಯಾರ್ಥಿಗೆ 600 ಅಂಕಕ್ಕೆ 683 ಅಂಕ ನೀಡಲಾಗಿದೆ. ಅಂಕ ಉತ್ತಮಪಡಿಸಿಕೊಳ್ಳಲು ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ತಪ್ಪಾಗಿದೆ ಎಂಬ ಆರೋಪ ಕೇಳಿಬಂದಿದೆ.

2nd PUC Results 2026: ತಾಯಿ ಸಾವಿನ ನೋವಿನಲ್ಲೂ ಪರೀಕ್ಷೆ ಬರೆದು ರಾಜ್ಯಕ್ಕೆ ಟಾಪರ್‌ ಆದ ದಿಶಾ; 600ಕ್ಕೆ 600 ಅಂಕ!

ಇನ್ನು ಡಿಜಿಲಾಕರ್‌ನಲ್ಲಿ ಕೆಲವರ ಅಂಕಪಟ್ಟಿ ಸರಿಯಾಗಿ ಬಂದಿದ್ದರೆ ವೆಬ್‌ಸೈಟ್‌ನಲ್ಲಿ ತಪ್ಪಾಗಿದೆ. ಜವಾಬ್ದಾರಿಯುತವಾಗಿ ಫಲಿತಾಂಶ ಪ್ರಕಟಿಸಬೇಕಾದ ಬೋರ್ಡ್‌ ಈ ರೀತಿ ತಪ್ಪು ತಪ್ಪಾಗಿ ಫಲಿತಾಂಶ ಪ್ರಕಟಿಸಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸಿದೆ.