ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದ ‘ಗೋಪಾಲನ್ ಕನ್ನಡ ಕಲ್ಚರ್’
ಕರ್ನಾಟಕದ ವೈವಿಧ್ಯಮಯ ಜಾನಪದ ಕಲೆಗಳನ್ನು ಪರಿಚಯಿಸುವ ಹಲವು ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಡೊಳ್ಳು ಕುಣಿತ, ಯಕ್ಷಗಾನ, ಬೊಂಬೆಯಾಟ, ವೀರಗಾಸೆ ಹಾಗೂ ಸೋಮನ ಆಟ ಸೇರಿದಂತೆ ನಾಡಿನ ವಿವಿಧ ಸಾಂಪ್ರದಾಯಿಕ ಕಲಾಪ್ರಕಾರಗಳ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.
-
ಬೆಂಗಳೂರು: ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಗೋಪಾಲನ್ ಮಾಲ್ಸ್ ಆಯೋಜಿಸಿದ್ದ ಎರಡು ದಿನಗಳ ‘ಗೋಪಾಲನ್ ಕನ್ನಡ ಕಲ್ಚರ್’ ಕಾರ್ಯಕ್ರಮವು ಜನಮನ ಸೆಳೆಯಿತು. ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಸಿಗ್ನೇಚರ್ ಮಾಲ್ನಲ್ಲಿ ಹಾಗೂ ಆರ್.ಆರ್. ನಗರದ ಗೋಪಾಲನ್ ಆರ್ಕೇಡ್ ಮಾಲ್ನಲ್ಲಿ ಈ ಕಾರ್ಯಕ್ರಮ ಗಳು ನಡೆದವು.
ಕರ್ನಾಟಕದ ವೈವಿಧ್ಯಮಯ ಜಾನಪದ ಕಲೆಗಳನ್ನು ಪರಿಚಯಿಸುವ ಹಲವು ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಡೊಳ್ಳು ಕುಣಿತ, ಯಕ್ಷಗಾನ, ಬೊಂಬೆಯಾಟ, ವೀರಗಾಸೆ ಹಾಗೂ ಸೋಮನ ಆಟ ಸೇರಿದಂತೆ ನಾಡಿನ ವಿವಿಧ ಸಾಂಪ್ರದಾಯಿಕ ಕಲಾಪ್ರಕಾರಗಳ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.
ಸಂಗೀತ, ನೃತ್ಯ ಹಾಗೂ ಕಥನದ ಮೂಲಕ ಅನಾವರಣಗೊಂಡ ಈ ಪ್ರದರ್ಶನಗಳು ಕರ್ನಾಟಕದ ಸಾಂಪ್ರದಾಯಿಕ ಕಲೆಗಳ ಶ್ರೀಮಂತಿಕೆಯನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಸಂದರ್ಶಕರಿಗೆ ಒದಗಿಸಿದವು. ಈ ಮೂಲಕ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸುವುದರ ಜೊತೆಗೆ, ನಮ್ಮ ಕಲೆ ಮತ್ತು ಪರಂಪರೆಯ ಬಗ್ಗೆ ಜನರಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಅಭಿಮಾನ ಮೂಡಿಸಲು ಕಾರ್ಯಕ್ರಮ ಸಹಕಾರಿಯಾಯಿತು.
ಇದನ್ನೂ ಓದಿ: Bangalore News: ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ
ಈ ಉಪಕ್ರಮದ ಕುರಿತು ಮಾತನಾಡಿದ ಗೋಪಾಲನ್ ಎಂಟರ್ಪ್ರೈಸಸ್ನ ನಿರ್ದೇಶಕರಾದ ಶ್ರೀ ಪ್ರಭಾಕರ್ ಅವರು, “ಗೋಪಾಲನ್ ಎಂಟರ್ಪ್ರೈಸಸ್ನಲ್ಲಿ, ನಮ್ಮ ಮಾಲ್ಗಳು ಕೇವಲ ಶಾಪಿಂಗ್ಗೆ ಸೀಮಿತವಾಗದೆ, ಜನರನ್ನು ಬೆಸೆಯುವ ಮತ್ತು ಸಮುದಾಯದ ಸಂಭ್ರಮಗಳಿಗೆ ವೇದಿಕೆಯಾಗಬೇಕು ಎಂಬ ಆಶಯ ನಮ್ಮದು.
‘ಗೋಪಾಲನ್ ಕನ್ನಡ ಕಲ್ಚರ್’ ಮೂಲಕ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವುದರ ಜೊತೆಗೆ, ನಮ್ಮ ನಾಡಿನ ವೈವಿಧ್ಯಮಯ ಜಾನಪದ ಕಲೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಪ್ರಯತ್ನ ಮಾಡಿದ್ದೇವೆ. ಇಂತಹ ಕಾರ್ಯಕ್ರಮಗಳು ನಮ್ಮ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ನಮ್ಮ ನಂಬಿಕೆ,” ಎಂದು ಹೇಳಿದರು.
‘ಗೋಪಾಲನ್ ಕನ್ನಡ ಕಲ್ಚರ್’ ಮೂಲಕ ಗೋಪಾಲನ್ ಮಾಲ್ಸ್, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ಪ್ರಯತ್ನ ಮಾಡಿತು. ಸಾಂಪ್ರದಾಯಿಕ ಕಲಾಪ್ರಕಾರಗಳಿಗೆ ವೇದಿಕೆ ಕಲ್ಪಿಸುವುದರೊಂದಿಗೆ, ಇಂದಿನ ಪೀಳಿಗೆಯೂ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯಲು ಈ ಕಾರ್ಯಕ್ರಮ ಅವಕಾಶ ಒದಗಿಸಿತು.
ಶಾಪಿಂಗ್ನಾಚೆಗೂ ಜನರಿಗೆ ವಿಭಿನ್ನ ಅನುಭವಗಳನ್ನು ನೀಡುವ ಉದ್ದೇಶದೊಂದಿಗೆ ಗೋಪಾಲನ್ ಮಾಲ್ಸ್ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮುದಾಯದ ಸಂಭ್ರಮಾಚರಣೆಗಳು ಹಾಗೂ ಮನರಂಜನಾ ಚಟುವಟಿಕೆಗಳಿಗೆ ವೇದಿಕೆಯಾಗುತ್ತಿದೆ. ಈ ಮೂಲಕ ಬೆಂಗಳೂರಿನ ಜನಜೀವನ ದೊಂದಿಗೆ ಮತ್ತಷ್ಟು ಆತ್ಮೀಯವಾಗಿ ಬೆಸೆಯುವ ತನ್ನ ಬದ್ಧತೆಯನ್ನು ಮುಂದುವರಿಸುತ್ತಿದೆ.