ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bangalore News: ಬಿಎಂಎಸ್.ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ದೇಶದಲ್ಲಿ ಇಂಜನಿಯರಿಂಗ್ ಪದವಿ ಪಡೆದವರು ಸಂಖ್ಯೆ ಹೆಚ್ಚಬೇಕು. ದೇಶ ಅಭಿವೃದ್ದಿಯಲ್ಲಿ ಇಂಜನಿಯರ್ ಗಳು ಮಹತ್ವಪೂರ್ಣ ಪಾತ್ರ ವಹಿಸುತ್ತಾರೆ. ದೇಶದಲ್ಲಿ ಇಂಜನಿಯರ್ʼಗಳಿಗೆ ಉತ್ತಮ ಅವಕಾಶವಿದೆ. ಉತ್ತಮ ಮನುಷ್ಯರಾಗಲು ಕಠಿಣ ಪರಿಶ್ರಮ ಪಡಬೇಕು. ಸಾಧನೆ ಮಾಡಲು ಗುರಿ ಇರಬೇಕು ಮತ್ತು ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು.

ಬಿಎಂಎಸ್.ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

-

Ashok Nayak
Ashok Nayak Mar 2, 2026 12:37 AM

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಗೆ ಸಂಯೋಜಿತವಾಗಿರುವ ಸ್ವಾಯತ್ತ ಸಂಸ್ಥೆಯಾದ ಬೆಂಗಳೂರಿನ ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜು, 2025 ರ ಬ್ಯಾಚ್‌ನ ಪದವಿ ದಿನ-II ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಬೆಂಗಳೂರು ಬಿಸಿನೆಸ್ ಕಾರಿ ಡಾರ್ ಲಿಮಿಟೆಡ್‌ನ ಅಧ್ಯಕ್ಷರಾದ ಎಲ್.ಕೆ. ಅತೀಕ್, ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಬಿ.ಎಂ.ಎಸ್. ಎಂಜಿನಿಯ ರಿಂಗ್ ಕಾಲೇಜಿನ ಬಿಒಜಿ, ಬಿಒಜಿ ಸದಸ್ಯ ಕರ್ನಲ್ (ನಿವೃತ್ತ) ಎಚ್.ಎಸ್. ಶಂಕರ್, ಪ್ರಾಂಶುಪಾಲ ಡಾ. ಭೀಮಶಾ ಆರ್ಯರವರು ಮತ್ತು ಟ್ರಸ್ಟಿಗಳು, ಅಧ್ಯಾಪಕರು ದೀಪ ಬೆಳಗಿಸಿ ಪದವಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: Bangalore News: ಐಸಿಎಫ್ಐ ಲಾ ಸ್ಕೂಲ್. ನಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಗೆ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಚಾಲನೆ

ಶ್ರೇಯಾಂಕ ಪಡೆದವರಿಗೆ ಪದವಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಜೊತೆಯಲ್ಲಿ ಪದವಿ ಪ್ರದಾನ ಮಾಡಲಾಯಿತು.

ಎಲ್.ಕೆ.ಅತೀಕ್ ರವರು ಮಾತನಾಡಿ, ದೇಶದಲ್ಲಿ ಇಂಜನಿಯರಿಂಗ್ ಪದವಿ ಪಡೆದವರು ಸಂಖ್ಯೆ ಹೆಚ್ಚಬೇಕು. ದೇಶ ಅಭಿವೃದ್ದಿಯಲ್ಲಿ ಇಂಜನಿಯರ್ ಗಳು ಮಹತ್ವಪೂರ್ಣ ಪಾತ್ರ ವಹಿಸುತ್ತಾರೆ. ದೇಶದಲ್ಲಿ ಇಂಜನಿಯರ್ʼಗಳಿಗೆ ಉತ್ತಮ ಅವಕಾಶವಿದೆ. ಉತ್ತಮ ಮನುಷ್ಯರಾಗಲು ಕಠಿಣ ಪರಿ ಶ್ರಮ ಪಡಬೇಕು. ಸಾಧನೆ ಮಾಡಲು ಗುರಿ ಇರಬೇಕು ಮತ್ತು ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು. ಪದವಿ ಪಡೆದ ವಿದ್ಯಾರ್ಥಿಗಳಿಗೆ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಕೋರುತ್ತೇನೆ ಎಂದು ಹೇಳಿದರು.