ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Street Dogs: ಬೀದಿ ನಾಯಿ ದತ್ತು ತಗೊಳ್ತೀರಾ? ಬೆಂಗಳೂರಿನಲ್ಲಿದೆ ಅವಕಾಶ!

ಬೀದಿ ನಾಯಿಗಳ ದತ್ತಕವು ಪ್ರಾಣಿಕಲ್ಯಾಣವನ್ನು ಉತ್ತೇಜಿಸುವುದರ ಜೊತೆಗೆ ನಗರದಲ್ಲಿ ಸಹಬಾಳ್ವೆ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಸಹಕಾರಿಯಾಗುತ್ತದೆ. ಆಸಕ್ತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ಕೇಂದ್ರ ನಗರ ನಿಗಮವನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಬೀದಿ ನಾಯಿ ದತ್ತು ತಗೊಳ್ತೀರಾ? ಬೆಂಗಳೂರಿನಲ್ಲಿದೆ ಅವಕಾಶ!

ಬೀದಿ ನಾಯಿ ದತ್ತು ಅವಕಾಶ -

ಹರೀಶ್‌ ಕೇರ
ಹರೀಶ್‌ ಕೇರ Dec 26, 2025 4:55 PM

ಬೆಂಗಳೂರು, ಡಿ.26: ಬೀದಿ ನಾಯಿಗಳನ್ನು ದತ್ತು (Street Dogs adoptation) ಪಡೆಯಲು ಪ್ರಾಣಿಪ್ರಿಯರಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (greater bengaluru authority) ಅವಕಾಶ ನೀಡಿದೆ. ನಗರ ವ್ಯಾಪ್ತಿಯಲ್ಲಿ ಇರುವ ಬೀದಿ ನಾಯಿಗಳನ್ನು ದತ್ತು ಪಡೆದು ಸಾಕಲು ಮುಂದಾಗುವ ಶ್ವಾನ ಪ್ರಿಯರಿಗೆ ಕೇಂದ್ರ ನಗರ ಪಾಲಿಕೆಯಿಂದ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಜಿಬಿಎಯ ಪಶುಸಂಗೋಪನೆ ಇಲಾಖೆಯಿಂದ ಯೋಜನೆ ಜಾರಿ ಮಾಡಲಾಗಿದ್ದು, ಮಾನವೀಯತೆ ದೃಷ್ಟಿಯಿಂದ ಬೀದಿ ನಾಯಿಗಳನ್ನು ಸಾಕುವುದಕ್ಕೆ ಅವಕಾಶ ನೀಡಲಾಗಿದೆ. ಯೋಜನೆಯಡಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ ನಿವಾಸಿಗಳು, ಸ್ವಯಂಸೇವಾ ಸಂಸ್ಥೆಗಳು ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶ ನೀಡಲಾಗಿದೆ.

ಜಿಬಿಎಯಿಂದ ದತ್ತು ಪಡೆಯುವ ನಾಯಿಗಳಿಗೆ ಉಚಿತವಾಗಿ ಅರೋಗ್ಯ ತಪಾಸಣೆ, ರ್ಯಾಬಿಸ್‌‍ ಲಸಿಕೆ, ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಅಸಕ್ತಿ ವ್ಯಕ್ತಿಗಳು ಜಿಬಿಎ ಪಶುಪಾಲನೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಬೀದಿ ನಾಯಿಗಳ ದತ್ತಕವು ಪ್ರಾಣಿಕಲ್ಯಾಣವನ್ನು ಉತ್ತೇಜಿಸುವುದರ ಜೊತೆಗೆ ನಗರದಲ್ಲಿ ಸಹಬಾಳ್ವೆ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಸಹಕಾರಿಯಾಗುತ್ತದೆ. ಆಸಕ್ತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ಕೇಂದ್ರ ನಗರ ನಿಗಮವನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

New Year celebrations: ಡಿ.31ರಂದು ಬೆಂಗಳೂರಿನ ಉದ್ಯಾನ, ಕೆರೆಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌; ಪ್ರವೇಶಕ್ಕೆ ಜಿಬಿಎ ನಿರ್ಬಂಧ

ಬೆಂಗಳೂರಿನ ಕೇಂದ್ರ ನಗರ ಮಹಾನಗರ ಪಾಲಿಕೆ (BCCC)ಯ ಪಶುವೈದ್ಯರು ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ 30,000 ಬೀದಿ ನಾಯಿಗಳಿದ್ದು, ಸುಪ್ರೀಂ ಕೋರ್ಟ್ ಆದೇಶದ ಆಧಾರದ ಮೇಲೆ, ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಹಾಸ್ಟೆಲ್‌ಗಳು, ಆಟದ ಮೈದಾನಗಳು, ಬಸ್ ನಿಲ್ದಾಣಗಳು, ಡಿಪೋಗಳು, ಉದ್ಯಾನವನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಿಂದ ಸ್ಥಳಾಂತರಿಸಲು 800 ನಾಯಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.