ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿ INR 530 ಕೋಟಿಗೆ 376,000 ಚದರ ಅಡಿಗಳ ಸ್ವಾಧೀನ
ಭಾರತದ ಪ್ರಮುಖ ಪರ್ಯಾಯ ಆಸ್ತಿ ನಿರ್ವಹಣಾ ಸಂಸ್ಥೆಗಳಲ್ಲೊಂದಾದ EAAA Alternatives, ತನ್ನ ವಾಣಿಜ್ಯ ರಿಯಲ್ ಎಸ್ಟೇಟ್ ನಿಧಿ ರೆಂಟಲ್ ಯೀಲ್ಡ್ ಪ್ಲಸ್ (RYP) ಮೂಲಕ ಬೆಂಗಳೂರಿನ ಎಂಬಸಿ ಮಣ್ಯತಾ ಬಿಸಿನೆಸ್ ಪಾರ್ಕ್ನ ಭಾಗವಾಗಿರುವ ಗ್ರೀನ್ ಹಾರ್ಟ್ ಟೆಕ್ ಪಾರ್ಕ್ನಲ್ಲಿ ಸುಮಾರು 3.76 ಲಕ್ಷ ಚದರ ಅಡಿ ವಿಸ್ತೀರ್ಣದ ಆಸ್ತಿಯನ್ನು ₹530 ಕೋಟಿ ಮೊತ್ತಕ್ಕೆ ಖರೀದಿಸಿದೆ
-
ಬೆಂಗಳೂರು: ಭಾರತದ ಪ್ರಮುಖ ಪರ್ಯಾಯ ಆಸ್ತಿ ನಿರ್ವಹಣಾ ಸಂಸ್ಥೆಗಳಲ್ಲೊಂದಾದ EAAA Alternatives, ತನ್ನ ವಾಣಿಜ್ಯ ರಿಯಲ್ ಎಸ್ಟೇಟ್ ನಿಧಿ ರೆಂಟಲ್ ಯೀಲ್ಡ್ ಪ್ಲಸ್ (RYP) ಮೂಲಕ ಬೆಂಗಳೂರಿನ ಎಂಬಸಿ ಮಣ್ಯತಾ ಬಿಸಿನೆಸ್ ಪಾರ್ಕ್ನ ಭಾಗವಾಗಿರುವ ಗ್ರೀನ್ ಹಾರ್ಟ್ ಟೆಕ್ ಪಾರ್ಕ್ನಲ್ಲಿ ಸುಮಾರು 3.76 ಲಕ್ಷ ಚದರ ಅಡಿ ವಿಸ್ತೀರ್ಣದ ಆಸ್ತಿಯನ್ನು ₹530 ಕೋಟಿ ಮೊತ್ತಕ್ಕೆ ಖರೀದಿಸಿದೆ.
ಎಂಬಸಿ ಮಣ್ಯತಾ ಬಿಸಿನೆಸ್ ಪಾರ್ಕ್ ಅನ್ನು ಎಂಬಸಿ REIT ಹೊಂದಿದ್ದು, ಇದು ಭಾರತದ ಮೊದಲ ಪಟ್ಟಿ ಮಾಡಲಾದ REIT ಆಗಿರುವುದರ ಜೊತೆಗೆ, ಏಷ್ಯಾದ ಅತಿದೊಡ್ಡ ಕಚೇರಿ REIT ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹೂಡಿಕೆ ರೆಂಟಲ್ ಯೀಲ್ಡ್ ಪ್ಲಸ್ ನಿಧಿಯ ಮೂರನೇ ಹೂಡಿಕೆ ಆಗಿದ್ದು, ಗ್ರೀನ್‌ಹಾರ್ಟ್ ಟೆಕ್ ಪಾರ್ಕ್‌ನಲ್ಲಿ ನಿಧಿಯ ಮಾಲಿಕತ್ವವನ್ನು ಮತ್ತಷ್ಟು ಬಲಪಡಿಸಿದೆ. ಎಂಬಸಿ ಮಣ್ಯತಾ ಬಿಸಿನೆಸ್ ಪಾರ್ಕ್ ಬೆಂಗಳೂರು ನಗರದ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲೊಂದು ಆಗಿದ್ದು, ಉತ್ಪಾದನಾ ಕ್ಷೇತ್ರ, ಬ್ಯಾಂಕಿಂಗ್–ಹಣಕಾಸು (BFSI), ಲೈಫ್‌ಸ್ಟೈಲ್, ಗ್ರಾಹಕ ವಸ್ತುಗಳು, ವಾಹನೋದ್ಯಮ, ತಂತ್ರಜ್ಞಾನ, ಫ್ಲೆಕ್ಸ್ ಸ್ಪೇಸ್ ಹಾಗೂ ಕನ್ಸಲ್ಟಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಜಾಗತಿಕ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ
ಈ ಹೂಡಿಕೆಯ ಕುರಿತು ಮಾತನಾಡಿದ EAAA Alternativesನ ಸಿಇಒ ಸುಭಾಹು ಚೋರ್ಡಿಯಾ, “ಇದು ನಮ್ಮ ರಿಯಲ್ ಅಸೆಟ್ಸ್ ವ್ಯವಹಾರದಲ್ಲಿ 35ನೇ ಆಸ್ತಿ ಖರೀದಿ. ಉನ್ನತ ಗುಣಮಟ್ಟದ ಆಸ್ತಿಗಳನ್ನು ಗುರುತಿಸಿ ಒಟ್ಟುಗೂಡಿಸುವ ನಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಈ ಹೂಡಿಕೆ ಸ್ಪಷ್ಟಪಡಿಸುತ್ತದೆ” ಎಂದರು.
ಇದೇ ವೇಳೆ, ರೆಂಟಲ್ ಯೀಲ್ಡ್ ಪ್ಲಸ್ ನಿಧಿಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಹೋರಾ ಮಾತನಾಡಿ,
“ಭಾರತದ ಅತ್ಯಂತ ಸ್ಥಿರ ಮಾರುಕಟ್ಟೆಗಳಲ್ಲಿ ಶ್ರೇಷ್ಠ ಆಸ್ತಿಗಳನ್ನು ಪಡೆದುಕೊಳ್ಳುವ ನಮ್ಮ ಬದ್ಧತೆಯನ್ನು ಈ ವ್ಯವಹಾರ ಮತ್ತಷ್ಟು ದೃಢಪಡಿಸುತ್ತದೆ. ಎಂಬಸಿ ಮಣ್ಯತಾ ಬಿಸಿನೆಸ್ ಪಾರ್ಕ್‌ನ ಗ್ರೀನ್‌ಹಾರ್ಟ್ ಟೆಕ್ ಪಾರ್ಕ್ನಲ್ಲಿ (ಸುಮಾರು 15 ಲಕ್ಷ ಚದರ ಅಡಿ) ನಮ್ಮ ಮಾಲಿಕತ್ವ ಬಲವರ್ಧನೆಯಿಂದ ಸಮಗ್ರ ನಿರ್ವಹಣಾ ಕ್ರಮ ಜಾರಿಗೆ ತರಲು ಹಾಗೂ ಹೂಡಿಕೆದಾರರು ಮತ್ತು ಬಾಡಿಗಾರರಿಗೆ ಉತ್ತಮ ಫಲಿತಾಂಶಗಳನ್ನು ಒದಗಿಸಲು ಸಾಧ್ಯ ವಾಗಲಿದೆ” ಎಂದು ಹೇಳಿದರು.
ಎಂಬಸಿ REITನ ಸಿಇಒ ಅಮಿತ್ ಶೆಟ್ಟಿ ಪ್ರತಿಕ್ರಿಯಿಸಿ, “ಈ ವ್ಯವಹಾರದಿಂದ ನಮ್ಮ ಹಿತಾಸಕ್ತಿ ಗಳಿಗೆ ದೀರ್ಘಕಾಲೀನ ಮೌಲ್ಯ ಸೃಷ್ಟಿಯಾಗಿದೆ. ಇದು ನಮ್ಮ ಬಂಡವಾಳ ಪುನರ್‌ಹೂಡಿಕೆ ತಂತ್ರಕ್ಕೆ ಅನುಗುಣವಾಗಿದ್ದು, ಪೋರ್ಟ್‌ಫೋಲಿಯೊ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಹೊಸ ಹೂಡಿಕೆ ಅವಕಾಶಗಳಲ್ಲಿ ಮರುಹೂಡಿಕೆ ಮಾಡಲು ನಮಗೆ ಹೆಚ್ಚಿನ ಲವಚಿಕತೆಯನ್ನು ಒದಗಿಸುತ್ತದೆ” ಎಂದು ತಿಳಿಸಿದರು.
ಈ ಖರೀದಿ, ಬೆಂಗಳೂರಿನ ವಾಣಿಜ್ಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಮತ್ತೊಮ್ಮೆ ಪ್ರತಿಬಿಂಬಿಸಿದೆ.