Bengaluru Power Cut: ಡಿಸೆಂಬರ್ 27, 28 ಮತ್ತು 29ರಂದು ಬೆಂಗಳೂರಿನ ಹಲವಡೆ ವಿದ್ಯುತ್ ವ್ಯತ್ಯಯ
BESCOM News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 220/66/11 ಕೆ.ವಿ ಹೆಬ್ಬಾಳ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಡಿ.27ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಡಿ.26: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 220/66/11 ಕೆ.ವಿ ಹೆಬ್ಬಾಳ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಡಿ.27ರಂದು ಶನಿವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಗಂಗಾನಗರ, ಲಕ್ಷ್ಮಯ್ಯ ಬ್ಲಾಕ್, ವೀವರ್ ಕಾಲೋನಿ, ಸಿ.ಬಿ.ಐ ಕ್ವಾಟ್ರಸ್, ಆರ್.ಬಿ.ಐ ಕಾಲೋನಿ, ಸಿ.ಪಿ.ಯು ಬ್ಲಾಕ್, ಡಿ.ಜಿ.ಕ್ಯೂ ಕ್ವಾಟ್ರಸ್, ಮುನಿರಾಮಯ್ಯ ಬ್ಲಾಕ್, ಯು.ಎ.ಎಸ್ ಕ್ಯಾಂಪಸ್. ದಿನ್ನೂರ್ ಮುಖ್ಯ ರಸ್ತೆ, ಆರ್. ಟಿ ನಗರ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಮುನನಪ್ಪಾ ಕಾಲೋನಿ, ಎಚ್.ಎಂ.ಟಿ ಬ್ಲಾಕ್, ಚಾಮುಂಡಿನಗರ, ಮಾಜಿ ಸೈನಿಕರ ಕಾಲೋನಿ, ಆರ್‌ಟಿ ನಗರ ಪೊಲೀಸ್ ಠಾಣಾ ಪ್ರದೇಶ, ಅಶ್ವಥ್ ನಗರ, ಡಾಲರ್ಸ್ ಕಾಲೋನಿ, ಎಂಎಲ್ಎ ಲೇಔಟ್, ರತನ್ ಅಪಾರ್ಟ್‌ಮೆಂಟ್, ಗಾಯತ್ರಿ ಅಪಾರ್ಟ್‌ಮೆಂಟ್, ಫುಡ್ ವರ್ಲ್ಡ್ ಆರ್‌ಟಿ ನಗರ, ನೃಪತುಂಗ ಬಡಾವಣೆ, ಕೃಷ್ಣಪ್ಪ ಬ್ಲಾಕ್, ಸಿಬಿಐ ಮುಖ್ಯರಸ್ತೆ, ಎಂಎಲ್ಎ ಲೇಔಟ್‌ನ ಭಾಗಗಳು, ಶಾಂತಿಸಾಗರ ಮುಖ್ಯ ರಸ್ತೆ, ಆರ್‌ಟಿ ನಗರ, ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, 80' ರಸ್ತೆ, ವಿಶ್ವೇಶ್ವರ ಬ್ಲಾಕ್, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ರಿಂಗ್ ರೋಡ್, ಕುವೆಂಪು ಲೇಔಟ್, ನೇತಾಜಿ ನಗರ, ವಿನಾಯಕ ಲೇಔಟ್ 1ನೇ ಹಂತ, ಮುನಿಸ್ವಾಮಿ ಗೌಡ ಅಪಾರ್ಟ್‌ಮೆಂಟ್, ಸ್ಟರ್ಲಿಂಗ್ ಗಾರ್ಡನ್ ಲೇಔಟ್, ಐ.ವಿ.ಆರ್.ಐ, ಗಂಗಾನಗರ ಮಾರುಕಟ್ಟೆ, ಆಲ್ಪೈನ್ ಅಪಾರ್ಟ್‌ಮೆಂಟ್, ಜೈನ್ ಅಪಾರ್ಟ್‌ಮೆಂಟ್, ಸಿ 4 ಉಪವಿಭಾಗ ಕಚೇರಿ, ಗಿಡ್ಡಪ್ಪ ಬ್ಲಾಕ್, ಚೋಳನಾಯಕನಹಳ್ಳಿ, ಎಜಿಎಸ್ ಕಾಲೋನಿ, ಎಸ್‌ಬಿಎಂ ಕಾಲೋನಿ, ವೇಣುಗೋಪಾಲರೆಡ್ಡಿ ಲೇಔಟ್, ವಿನಾಯಕ ಲೇಔಟ್, ಆನಂದಗಿರಿ ಎಕ್ಸ್‌ಟೆನ್ಷನ್, ಎಸ್ಎಸ್ಎ ರಸ್ತೆ, ಪೊಲೀಸ್ ಕ್ವಾರ್ಟರ್ಸ್, ನೆಬ್ಬಾಳ ಎಸ್ಎಸ್ ಬ್ಲಾಕ್, ನೆಬ್ಬಾಳ ಎಸ್ಎಸ್ ಬ್ಲಾಕ್ ಕೆಂಪಣ್ಣ ಲೇಔಟ್, ಗುಡ್ಡದಹಳ್ಳಿ ರಸ್ತೆ, ಸುಬ್ರಮಣಿ ಕಾಲೋನಿ, ಕುಂಟಿಗ್ರಾಮ. ಕೆಇಬಿ ಲೇಔಟ್, ಸಂಜಯನಗರ, ಎಇಸಿಎಸ್ ಲೇಔಟ್, ಹೊಯ್ಸಳ ಅಪಾರ್ಟ್‌ಮೆಂಟ್, ಗೆದ್ದಲಹಳ್ಳಿ, ಅಶ್ವಥ್ ನಾಗರಸನ್ ಜಯನಗರ, ಭೂಪಸಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, 60' ರಸ್ತೆ, ಕಲ್ಪನಾ ಚಾವ್ಲಾ ರಸ್ತೆ, ಮೊಹಮ್ಮದ್ ಲೇಔಟ್, ವಿಎಸ್ಎನ್ಎಲ್ ವೈಟ್ ಹೌಸ್, ದಿನ್ನೂರ್ ರಸ್ತೆಯ ಭಾಗಗಳು, ಆರ್‌ಟಿ ಬ್ಲಾಕ್ ನಗರ, ಚೋಳನಗರ, ಎಂ.ಎಸ್.ಎಚ್ ಲೇಔಟ್, ಶ್ರೀಮತಿ ಲೇಔಟ್, ಅಮರಜ್ಯೋತಿ ಲೇಔಟ್, ಗುಂಡಪರೆಡ್ಡಿ ಲೇಔಟ್, ಚಿದಾನಂದರೆಡ್ಡಿ ಲೇಔಟ್ ಜಿ.ಓ ಸಾಯಿ ಸ್ಲಮ್, ಕೆಂಪಣ್ಣ ಲೇಔಟ್, ನೇತಾಜಿ ನಗರ, ಚಿನ್ನಮ್ಮ ಲೇಔಟ್, ಸೀತಪ್ಪ ಲೇಔಟ್, ಸಿಐಎಲ್ ಲೇಔಟ್, ಸನ್‌ರೈಸ್ ಕಾಲೋನಿ, ಮೈತ್ರಿ ಬಜಾರ್, ತಿಮ್ಮಕ್ಕ ಲೇಔಟ್, ಅಕ್ಕಯ್ಯಮ್ಮ ಲೇಔಟ್, ಗುಡ್ಡದಹಳ್ಳಿ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ಸಮಸ್ಯೆಗಳಿಗೆ 1912 ಅಥವಾ ʼವಾಟ್ಸ್ ಆ್ಯಪ್ʼ ಸಹಾಯವಾಣಿಗೆ ದೂರು ದಾಖಲಿಸಿ: ಬೆಸ್ಕಾಂ
ಡಿ.28 ಮತ್ತು 29ರಂದೂ ಕರೆಂಟ್ ಇರಲ್ಲ
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆ.ವಿ ವಿಡಿಯಾ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಡಿ.28 ಮತ್ತು 29ರಂದು ಬೆಳಗ್ಗೆ 9 ಗಂಟೆಯಿಂದ 12ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್‌ಮೆಂಟ್, 8ನೇ ಮೈಲ್ ರಸ್ತೆ, ರಾಮಯ್ಯ ಲೇಔಟ್, ಹಾವನೂರು ಎಕ್ಸ್‌ಟೆನ್. ನಾರಾಯಣ ಲೇಔಟ್, ವಿಡಿಯಾ ಸ್ಕೂಲ್, ಕುವೆಂಪು ನಗರ, ವಿಡಿಯಾ ಬಸ್ ಸ್ಟಾಪ್, ರಿಲಯನ್ಸ್ ಫ್ರೆಶ್, ಮುನಿಕೊಂಡಪ್ಪ ಲೇಔಟ್, ಅಶೋಕ್ ನಗರ, ವಿದ್ಯಾ ನಗರ, ಡಿಫೆನ್ಸ್ ಕಾಲೋನಿ, ಹಾವನೂರು ಎಕ್ಸ್,. ಮಂಜುನಾಥ್ ನಗರ, ಮಹಾಲಕ್ಷ್ಮಿ ನಗರ, ಕಾಟರಾಯ ನಗರ, ಸೋಪ್ ಫ್ಯಾಕ್ಟರಿ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಅಂದಾನಪ್ಪ ಲೇಔಟ್, ಬಿಟಿಎಸ್ ಲೇಔಟ್, ಸಿದ್ದೇಶ್ವರ ಲೇಔಟ್, ಸಾಸುವೆಘಟ್ಟ, ಸೋಲದೇವನಹಳ್ಳಿಯ ಭಾಗಶಃ, ತರಬನಹಳ್ಳಿ ಮುಖ್ಯ ರಸ್ತೆ, ಹಾವನೂರು ಎಕ್ಸ್‌ಟಿಎನ್, ಹೆಸರಘಟ್ಟ ಮುಖ್ಯ ರಸ್ತೆ, ಸಿಡೇದಹಳ್ಳಿ, ಭಾಗಶಃ ವಿಶ್ವೇಶರಯ್ಯ ಲೇಔಟ್, ರಾಯಲ್ ಎನ್‌ಕ್ಲೇವ್, ಬೈರವೇಶ್ವರ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.