Harassment: ನನಗೆ ಕ್ಯಾನ್ಸರ್ ಇದೆ, ನಗ್ನ ಫೋಟೋ ಕಳಿಸು: ಶಿಕ್ಷಕಿಗೆ ಕಾಮುಕನ ಕಿರುಕುಳ!
ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬಂದು ದೈಹಿಕ ಸಂಬಂಧದ ಆಸೆಗೆ ಬಿದ್ದು ಮಹಿಳೆಗೆ ಮೊಬೈಲ್ ಸಂದೇಶದ ಮೂಲಕ ಕಿರುಕುಳ ನೀಡಿದ ಈ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಯುವಕ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಏ.12: ಕಾಮುಕನೊಬ್ಬ ಇನ್‌ಸ್ಟಾಗ್ರಾಂನಲ್ಲಿ ಶಿಕ್ಷಕಿಯೊಂದಿಗೆ (Teacher) ಸ್ನೇಹ ಬೆಳಸಿ ಆಕೆಗೆ ವಿಲಕ್ಷಣ ರೀತಿಯಲ್ಲಿ ಕಿರುಕುಳ (Harassment) ನೀಡಿದ ಪ್ರಕರಣ ಬೆಂಗಳೂರಿನ (bengaluru) ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಶಿಕ್ಷಕಿಗೆ ಮೆಸೇಜ್ ಮಾಡಿದ್ದ ಯುವಕ, ನಾನು ನಿನ್ನ ಕ್ಲಾಸ್‌ಮೇಟ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನನಗೆ ಕ್ಯಾನ್ಸರ್ ಇದೆ, ನಿನ್ನ ನಗ್ನ ಫೋಟೋ ನೋಡಬೇಕು, ನಿನ್ನ ಜೊತೆ ದೈಹಿಕ ಸಂಬಂಧ ಬೆಳೆಸಬೇಕು. ಇದು ನನ್ನ ಕೊನೆ ಆಸೆ ಎಂದಿದ್ದ.
ಕಾಮುಕನ ಆಸೆಗೆ ಶಿಕ್ಷಕಿ ಒಪ್ಪಿರಲಿಲ್ಲ. ಈ ವೇಳೆ ಯುವಕ ನಾನು ಕೆಲವೇ ದಿನ ಬದುಕಿರುತ್ತೇನೆ. ಬೆತ್ತಲೆ ವಿಡಿಯೋ ಆದ್ರೂ ಕಳಿಸು ಎಂದಿದ್ದ. ಇದಕ್ಕೆ ಒಪ್ಪಿದ್ದ ಶಿಕ್ಷಕಿ ಬೆತ್ತಲೆಯ ವಿಡಿಯೋ ಕಳಿಸಿದ್ದಳು. ಬಳಿಕ ಹಣ ಕೊಡು, ನೇರವಾಗಿ ಸಿಗು, ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಸಿದ್ದ. ಬಳಿಕ ಆತನಿಗೆ ಬರುವಂತೆ ಹೇಳಿ, ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬಂದು ದೈಹಿಕ ಸಂಬಂಧದ ಆಸೆಗೆ ಬಿದ್ದು ಮಹಿಳೆಗೆ ಕಿರುಕುಳ ನೀಡಿದ ಈ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಯುವಕ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಐಪಿಎಲ್ ಬೆಟ್ಟಿಂಗ್‌ನಲ್ಲಿ ನಷ್ಟ, ಹಿನ್ನೀರಿಗೆ ಜಿಗಿದು ಆತ್ಮಹತ್ಯೆ
ಕಲಬುರಗಿ: ಐಪಿಎಲ್ ಬೆಟ್ಟಿಂಗ್‌ನಲ್ಲಿ (IPL Betting) ಹಣ (Money) ಕಳೆದುಕೊಂಡ ವ್ಯಕ್ತಿಯೊಬ್ಬ ನಾಗೂರ ಸೇತುವೆ ಬಳಿ ಬೆಣ್ಣೆತೊರಾ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಕಾಳಗಿ ತಾಲೂಕಿನ ರುಮ್ಮನಗೂಡ್ ನಿವಾಸಿ ಚಂದ್ರಕಾಂತ ದೇಸಾಯಿ (40) ಎಂದು ಗುರುತಿಸಲಾಗಿದೆ.
Landslide: ಹುಲಿಕಲ್ ಘಾಟಿಯಲ್ಲಿ ಗುಡ್ಡ ಕುಸಿತ, ಮೂವರು ಕಾರ್ಮಿಕರು ಸಾವು
ಈತ ದಿನಾಲೂ ಐಪಿಎಲ್ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಅಲ್ಲದೇ ಹಲವರ ಬಳಿ ಸಾಲ ಮಾಡಿದ್ದ. ಸಾಲಗಾರರ ಕಿರುಕುಳ ತಾಳದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾಗೂರ ಸೇತುವೆ ಬಳಿ ಬೈಕ್ ನಿಲ್ಲಿಸಿ, ಮೊಬೈಲ್ ಇಟ್ಟಿರುವುದು ಪತ್ತೆಯಾಗಿದೆ. ಮಹಾಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.