ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಮ್‌ ಚರಣ್‌ ಮೇಲೆ ಕಣ್ಣಿಟ್ಟ ಬಾಲಿವುಡ್‌ನ ಇಬ್ಬರು ʻಸ್ಟಾರ್‌ʼ ನಿರ್ದೇಶಕರು; ಟಾಲಿವುಡ್‌ನಿಂದ ದೂರವಾಗ್ತಾರಾ ʻಮೆಗಾ ಪವರ್‌ ಸ್ಟಾರ್‌ʼ?

ʻಮೆಗಾ ಪವರ್‌ ಸ್ಟಾರ್‌ʼ ರಾಮ್‌ ಚರಣ್‌ ಅವರು ಈಗ ಭಾರತೀಯ ಚಿತ್ರರಂಗದ ಹಾಟ್ ಟಾಪಿಕ್ ಆಗಿದ್ದಾರೆ. 'ಪೆದ್ದಿ' ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ರಾಮ್ ಚರಣ್ ಅವರು ಬಾಲಿವುಡ್‌ನ ನಿರ್ದೇಶಕರ ಜೊತೆ ಕೈಜೋಡಿಸಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ.

ರಾಮ್ ಚರಣ್ ಬೆನ್ನುಬಿದ್ದ ಬಾಲಿವುಡ್‌ನ ʻಸ್ಟಾರ್ʼ ನಿರ್ದೇಶಕರು

-

Avinash GR
Avinash GR Apr 12, 2026 12:11 PM

ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಅವರು ಈಗ 'ಪೆದ್ದಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರವು ಏಪ್ರಿಲ್ 30 ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಸದ್ಯ ಎಲ್ಲರ ಪ್ರಶ್ನೆ 'ಪೆದ್ದಿ' ನಂತರ ರಾಮ್‌ ಚರಣ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ, ಸುಕುಮಾರ್‌ ಜೊತೆಗೆ ಕೈಜೋಡಿಸಿದ್ದಾರೆ ಎಂಬ ಟಾಕ್‌ ಇದೆ. ಆದರೆ ಅದಕ್ಕೂ ಮುನ್ನ ಒಂದಿಷ್ಟು ಇಂಟರೆಸ್ಟಿಂಗ್‌ ವಿಚಾರಗಳು ಹೊರಬಿದ್ದಿವೆ.

ರಾಮ್‌ ಚರಣ್‌ ಮೇಲೆ ಬಾಲಿವುಡ್‌ ನಿರ್ದೇಶಕರ ಕಣ್ಣು

ಸುಕುಮಾರ್ ನಿರ್ದೇಶನದಲ್ಲಿ ರಾಮ್ ಚರಣ್ ಒಂದು ಸಿನಿಮಾ ಮಾಡಲಿದ್ದಾರೆ ಎಂದು ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದೆ. 'ಪೆದ್ದಿ' ಶೂಟಿಂಗ್ ಮುಗಿಸಿದ ತಕ್ಷಣ, ಸುಕುಮಾರ್ ಸಿನಿಮಾದ ಸೆಟ್‌ಗೆ ಚರಣ್‌ ಎಂಟ್ರಿ ಕೊಡಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಈ ನಡುವೆ ಬಾಲಿವುಡ್‌ನ ಕೆಲ ನಿರ್ದೇಶಕರ ಹೆಸರುಗಳು ಚರ್ಚೆಗೆ ಬಂದಿವೆ.

Peddi Pehelwan Glimpse: ʻಪೆದ್ದಿʼ ಹೊಸ ಗ್ಲಿಂಪ್ಸ್ ಔಟ್‌; ರಾಮ್‌ ಚರಣ್‌ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

ಧುರಂಧರ್‌ ಡೈರೆಕ್ಟರ್‌ ಜೊತೆ ಚರಣ್‌ ಸಿನಿಮಾ

ಬಾಲಿವುಡ್‌ನಲ್ಲಿ ಈಗ 'ಧುರಂಧರ್' ಮತ್ತು 'ಧುರಂಧರ್ 2' ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿರುವ ನಿರ್ದೇಶಕ ಆದಿತ್ಯ ಧರ್, ರಾಮ್ ಚರಣ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಒಂದು ಬಿಗ್‌ ಬಜೆಟ್‌ನ ಮಲ್ಟಿ-ಸ್ಟಾರರ್ ಸಿನಿಮಾವನ್ನು ಮಾಡಲು ಆದಿತ್ಯ ಧರ್‌ ಪ್ಲಾನ್ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಮೂಲಗಳಿಂದ ಮಾಹಿತಿ ಲೀಕ್ ಆಗಿದೆ. ಆದಿತ್ಯ ಧರ್‌ ಈಗ ಸೆನ್ಸೇಷನಲ್‌ ಡೈರೆಕ್ಟರ್.‌ ಅಂತಹವರ ಜೊತೆ ರಾಮ್‌ ಚರಣ್‌ ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆಯೇ, ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

Ram Charan birthday: ರಾಮ್‌ ಚರಣ್‌ ಬರ್ತ್‌ಡೇ; ಚಿರು ಪುತ್ರನ ಕುರಿತ ಅಪರೂಪದ ಸಂಗತಿಗಳು!

ಇದರ ನಡುವೆ ಬಾಲಿವುಡ್‌ನ ಮತ್ತೊಬ್ಬ ಲೆಜೆಂಡರಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕೂಡ ರಾಮ್‌ ಚರಣ್‌ ಜೊತೆಗೆ ಫಾರೆಸ್ಟ್ ಬ್ಯಾಕ್‌ಡ್ರಾಪ್ ಹೊಂದಿರುವ ಒಂದು ಐತಿಹಾಸಿಕ ಆಕ್ಷನ್‌ ಸಿನಿಮಾ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಟಾಕ್‌ ಕೂಡ ಇದೆ. ಈ ಹಿಂದೆಯೇ ‘ದಿ ಲೆಜೆಂಡ್ ಆಫ್ ಸುಹೇಲ್ ದೇವ್’ ಎಂಬ ಪ್ರಾಜೆಕ್ಟ್‌ಗಾಗಿ ರಾಮ್‌ ಚರಣ್‌ ಮತ್ತು ಬನ್ಸಾಲಿ ಕೆಲಸ ಮಾಡಲಿದ್ದಾರೆ ಎಂಬ ಮಾತಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇಷ್ಟು ವರ್ಷಗಳ ನಂತರ ಮತ್ತೆ ಇವರಿಬ್ಬರು ಒಂದಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಒಂದು ಕಡೆ ಆದಿತ್ಯ ಧರ್, ಮತ್ತೊಂದು ಕಡೆ ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ರಾಮ್‌ ಚರಣ್‌ ಸಿನಿಮಾ ಮಾಡಲಿದ್ದಾರೆ ಮಾತು ಕೇಳಿಬಂದಿದ್ದು, ಈಗ ಎಲ್ಲರ ಪ್ರಶ್ನೆ ಸುಕುಮಾರ್ ಜೊತೆಗಿನ ಸಿನಿಮಾ ಏನಾಯಿತು ಎಂಬುದು! ಅಲ್ಲದೆ, ಬಾಲಿವುಡ್‌ ನಿರ್ದೇಶಕರ ಜೊತೆಗೆ ಸಿನಿಮಾ ಮಾಡುತ್ತಾ, ಇತ್ತ ಟಾಲಿವುಡ್‌ನಿಂದ ಚರಣ್‌ ಬ್ರೇಕ್‌ ತೆಗೆದುಕೊಳ್ಳುತ್ತಾರಾ ಎಂಬ ಮಾತುಗಳು ಕೇಳಿಬಂದಿವೆ. ಸದ್ಯಕ್ಕೆ ಇದೆಲ್ಲದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಏನೇ ಆಗಲಿ, ಭಾರತದ ಟಾಪ್‌ ಡೈರೆಕ್ಟರ್‌ಗಳು ರಾಮ್‌ ಚರಣ್‌ ಹಿಂದೆ ಬಿದ್ದಿರುವುದು ಅವರ ಫ್ಯಾನ್ಸ್‌ಗಂತೂ ಸಖತ್‌ ಖುಷಿ ನೀಡಿದೆ.