ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜು.13ರ ಅಮಾನತು ಆದೇಶ ರದ್ದು ಮಾಡಿದ ʼಹೈʼ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ 2ನೇ ಬಾರಿ ಅಮಾನತು!

ಮೊದಲ ಬಾರಿ ಅಮಾನತಾದಾಗ, ಸಚಿವ ಸಂಪುಟ ಅಮಾನತಿಗೆ ಶಿಫಾರಸು ಮಾಡಿಲ್ಲ. ಹಾಗಾಗಿ ರಾಜ್ಯ ಪಾಲರ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಶಿವಶಂಕರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕಾರಣಕ್ಕೆ ಶಿವಶಂಕರಪ್ಪ ಅವರನ್ನು ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿ ಸಚಿವ ಸಂಪುಟ ಸಭೆಯು ಘಟನೋತ್ತರ ತೀರ್ಮಾನ ಮಾಡಿತ್ತು.

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ 2ನೇ ಬಾರಿ ಅಮಾನತು!

-

Profile
Ashok Nayak Aug 26, 2026 8:29 AM

ಕೆಪಿಎಸ್‌ಸಿ ಅಕ್ರಮ: ಮೆತ್ತೆ ಡಿಕೆ ದೆಹಲಿಗೆ, ಕನಿಷ್ಠ ರಾಜ್ಯಪಾಲರ ಆದೇಶ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಮಾಡಿರುವ ಶಿಫಾರಸು ಪರಿಗಣಿಸಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಮತ್ತೊಮ್ಮೆ ರಾಜ್ಯಪಾಲ ಗೆಹ್ಲೋತ್ ಅಮಾನತು ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ಜು.13ರಂದು ಅವರನ್ನು ರಾಜ್ಯಪಾಲರು ಅಮಾನತು ಮಾಡಿದ್ದರೂ, ಹೈಕೋರ್ಟ್ ಮರುನೇಮಕ ಮಾಡಿತ್ತು. ಪುತ್ರಿಗೆ ಸರಕಾರಿ ಹುದ್ದೆ ಗಿಟ್ಟಿಸಿ ಕೊಳ್ಳಲು ಅಧಿಕಾರ ದುರುಪ ಯೋಗ, ಸ್ವಜನಪಕ್ಷಪಾತ ಆರೋಪ ಎದುರಿಸುತ್ತಿರುವ ಶಿವಶಂಕರಪ್ಪ ರನ್ನು ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಆ.21ರಂದು ಸಚಿವ ಸಂಪುಟ ಶಿಫಾರಸು ಮಾಡಿತು.

ಮೊದಲ ಬಾರಿ ಅಮಾನತಾದಾಗ, ಸಚಿವ ಸಂಪುಟ ಅಮಾನತಿಗೆ ಶಿಫಾರಸು ಮಾಡಿಲ್ಲ. ಹಾಗಾಗಿ ರಾಜ್ಯಪಾಲರ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಶಿವಶಂಕರಪ್ಪ ಹೈಕೋರ್ಟ್ ಮೆಟ್ಟಿ ಲೇರಿದ್ದರು. ಈ ಕಾರಣಕ್ಕೆ ಶಿವಶಂಕರಪ್ಪ ಅವರನ್ನು ಅಮಾನತು ಮಾಡುವಂತೆ ರಾಜ್ಯ ಪಾಲರಿಗೆ ಶಿಫಾರಸು ಮಾಡಿ ಸಚಿವ ಸಂಪುಟ ಸಭೆಯು ಘಟನೋತ್ತರ ತೀರ್ಮಾನ ಮಾಡಿತ್ತು. ಇದನ್ನು ಪುರಸ್ಕರಿಸದ ಹೈಕೋರ್ಟ್, ಸಚಿವ ಸಂಪುಟ ಸಭೆಯ ಶಿಫಾರಸು ಇಲ್ಲದೆ ಅಮಾನತು ಮಾಡಿರು ವುದು ಕಾನೂನುಬದ್ಧವಲ್ಲ ಎಂಬ ಕಾರಣ ನೀಡಿ ಅಮಾನತು ಆದೇಶವನ್ನು ರದ್ದುಪಡಿಸಿತ್ತು.

ಅಮಾನತಿನ ಕುರಿತು ಹೈಕೋರ್ಟ್ ಆ.18ರಂದು ನೀಡಿದ್ದ ಆದೇಶ, ರಾಜ್ಯಸಚಿವ ಸಂಪುಟದ ಸಭೆ ಆ.21ರಂದು ಮಾಡಿದ್ದ ಶಿಫಾರಸುಗಳನ್ನು ಪರಿಗಣಿಸಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಸಂವಿಧಾನದ 317 (2) ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಯವರು ಮುಂದಿನ ಆದೇಶ ನೀಡುವ ತನಕ ರಾಜ್ಯಪಾಲರು ಅಮಾನತು ಮಾಡಿದ್ದಾರೆ.

ಇದನ್ನೂ ಓದಿ: KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ; ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ CID ನೋಟೀಸ್‌!

ಹಿರಿಯ ಸದಸ್ಯರಿಗೆ ಕೆಪಿಎಸ್‌ಸಿ ಅಧ್ಯಕ್ಷ ಗಿರಿ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಮಾಡಿರುವುದರ ಜತೆಗೆ, ಮುಂದಿನ ಆದೇಶದವರೆಗೆ ಕೆಪಿಎಸ್‌ಸಿ ಹಿರಿಯ ಸದಸ್ಯರು ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆಯೂ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ. ಈ ಬೆಳವಣಿಗೆ ಕೆಪಿಎಸ್‌ಸಿಯ ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರಪತಿಗಳ ಆದೇಶದ ಬಳಿಕ ಪ್ರಕರಣ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕೆಪಿಎಸ್‌ಸಿ ಕಚೇರಿಯಲ್ಲಿ ಸಿಐಡಿ 2ನೇ ಬಾರಿ ಶೋಧ: ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆಯ ಭಾಗವಾಗಿ ಅಪರಾಧ ತನಿಖಾ ಇಲಾಖೆ (ಸಿಐಡಿ) ಮಂಗಳ ವಾರ ಬೆಂಗಳೂರಿನಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿಯಲ್ಲಿ ಎರಡನೇ ಬಾರಿ ಶೋಧ ನಡೆಸಿದೆ. ಪೊಲೀಸ್ ವರಿಷ್ಠಾಧಿಕಾರಿ ರಾಘವೇಂದ್ರ ಹೆಗ್ಡೆ ನೇತೃತ್ವದ ಸಿಐಡಿ ತಂಡವು ಪ್ರಕರಣದ ತನಿಖೆ ನಡೆಸುತ್ತಿದ್ದು, ಕೆಪಿಎಸ್‌ಸಿ ಕಚೇರಿಯನ್ನು ಶೋಧಿಸಿ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 329 ಅಭ್ಯರ್ಥಿಗಳಿಗೂ ಸಿಐಡಿ ನೋಟಿಸ್ ಜಾರಿ ಮಾಡಿದ್ದು, ತನಿಖಾ ಅಧಿಕಾರಿ ಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಇಡಿ ನಡೆಸಿದ ಪ್ರತ್ಯೇಕ ವಿಚಾರಣೆ ವೇಳೆ ಲಭ್ಯವಾದ ಮಹತ್ವದ ಮಾಹಿತಿ ಮತ್ತು ತಪ್ಪೊಪ್ಪಿಗೆ ಹೇಳಿಕೆಗಳನ್ನು ಆಧರಿಸಿ ಸಿಐಡಿ ಅಧಿಕಾರಿಗಳು ಈ ಜಲವನ್ನು ಮತ್ತಷ್ಟು ಆಳವಾಗಿ ತನಿಖೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ 329 ಅಭ್ಯರ್ಥಿಗಳಿಂದ ವಶಪಡಿಸಿಕೊಂಡಿರುವ 658 ಓಎಂಆರ್ ಕಾರ್ಬನ್ ಶೀಟ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಓಎಂಆರ್ ಶೀಟ್‌ಗಳೊಂದಿಗೆ ಕಾರ್ಬನ್ ಶೀಟ್‌ಗಳನ್ನು ತಾಳೆ ಹಾಕಿ ಪರಿಶೀಲಿಸುವ ಉದ್ದೇಶದಿಂದ ಅವುಗಳನ್ನು ಎಫ್‌ʼಎಸ್‌ಎಲ್‌ಗೆ ಕಳುಹಿಸಲಾಗಿದೆ. ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಗೋಲ್ಮಾಲ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳು ಅಭ್ಯರ್ಥಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದು, ಮತ್ತಷ್ಟು ಸ್ಫೋಟಕ ಸತ್ಯಗಳು ಹೊರಬೀಳುವ ನಿರೀಕ್ಷೆಯಿದೆ.

ಏನಿದು ಪ್ರಕರಣ?

ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಸಾಹುಕಾರ್ ಶಿವಶಂಕರಪ್ಪ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ್ದಾರೆ, ತಮ್ಮ ಪುತ್ರಿಗೆ ಸರಕಾರಿ ಹುದ್ದೆ ಸಿಗುವಂತೆ ಮಾಡಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸ್ವಜನಪಕ್ಷಪಾತ ಎಸಗಿದ್ದಾರೆ ಎಂಬ ಆರೋಪಗಳಿವೆ. ಈ ನಿಟ್ಟಿನಲ್ಲಿ ಸಿಐಡಿ ಮತ್ತು ಇಡಿ ತನಿಖೆ ಜೊತೆಜೊತೆಗೇ ನಡೆ ಯುತ್ತಿದೆ. ಇದೇ ಕಾರಣಕ್ಕೆ ಜು.13ರಂದು ಅವರನ್ನು ರಾಜ್ಯಪಾಲರು ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಿ ದ್ದರು. ಆದರೆ ಆಗ ಸಚಿವಸಂಪುಟ ಶಿಫಾರಸು ಮಾಡಿಲ್ಲ ಎಂಬ ಕಾರಣಕ್ಕೆ ಕುಣಿಕೆಯಿಂದ ಸಾಹುಕಾರ್ ಪಾರಾಗಿದ್ದರು.

ಇಡಿಯ ವಿಚಾರಣೆಗೆ ಬಾರದ ನಾಪತ್ತೆ ಅಧಿಕಾರಿ ಜ್ಞಾನೇಂದ್ರ

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ವಿಚಾರಣೆಗೆ ಹಾಜರಾಗು ವಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ ಸಮ ಜಾರಿ ಮಾಡಿದ್ದರು. ಆದರೆ, ದಾಳಿಗೂ ಮುನ್ನ ನಾಪತ್ತೆಯಾಗಿರುವ ಜ್ಞಾನೇಂದ್ರ ಕುಮಾರ್ ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕಿದ್ದಾರೆ.

ಪಿಎಸ್‌ಸಿ ಕಚೇರಿಯಲ್ಲಿ ಸಿಐಡಿ 2ನೇ ಬಾರಿ ಶೋಧ

ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆಯ ಭಾಗವಾಗಿ ಸಿಐಡಿ ಮಂಗಳವಾರ ಬೆಂಗಳೂರಿನಲ್ಲಿರುವ ಕೆಪಿಎಸ್‌ಸಿ ಕಚೇರಿ ಯಲ್ಲಿ ಎರಡನೇ ಬಾರಿ ಶೋಧ ನಡೆಸಿದೆ. ಪೊಲೀಸ್ ವರಿಷ್ಠಾಧಿಕಾರಿ ರಾಘವೇಂದ್ರ ಹೆಗ್ಡೆ ನೇತೃತ್ವದ ಸಿಐಡಿ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ.