ಆನೇಕಲ್ ತಾಲ್ಲೂಕಿನಲ್ಲಿ ಸತತ 4ನೇ ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ
ಪರೀಕ್ಷೆ ಬರೆದ ಒಟ್ಟು 292 ವಿದ್ಯಾರ್ಥಿಗಳಲ್ಲಿ 163 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ. ಮತ್ತು 129 ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿಜ್ಞಾನ ವಿಭಾಗದ ಜೆ. ತನುಶ್ರೀ ಎಂಬ ವಿದ್ಯಾರ್ಥಿನಿ 600 ಕ್ಕೆ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದುಕೊಂಡಿದ್ದಾರೆ.
-
ಆನೇಕಲ್: ನಗರದ ಶ್ರೀ ಸಾಯಿ ರಾಮ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇಕಡ ನೂರರಷ್ಟು ಫಲಿತಾಂಶ ದೊಂದಿಗೆ ಉತ್ತೀರ್ಣರಾಗಿ ಕಾಲೇಜಿಗೆ ಉನ್ನತವಾದ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ.
ಪರೀಕ್ಷೆ ಬರೆದ ಒಟ್ಟು 292 ವಿದ್ಯಾರ್ಥಿಗಳಲ್ಲಿ 163 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮತ್ತು 129 ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿಜ್ಞಾನ ವಿಭಾಗದ ಜೆ. ತನುಶ್ರೀ ಎಂಬ ವಿದ್ಯಾರ್ಥಿನಿ 600 ಕ್ಕೆ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದ ಚೈತ್ರ ಶ್ರೀ ಆರ್. ಎಂಬ ವಿಧ್ಯಾರ್ಥಿನಿ 600 ಕ್ಕೆ 593 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ಸ್ಥಾನವನ್ನು ಪಡೆದಿದ್ದಾರೆ.
ಮೋನಿಷಾ .ಕೆ (587) , ನಿಖಿಲ್ ಬಮ್ಮಿಗಟ್ಟಿ ( 584) , ನಂದಿತಾ. ಯು ( 583), ಪೂಜ ಶ್ರೀ . ಟಿ (583) ಹೇಮಾ ಶ್ರೀ. ಆರ್.ಎಂ (582), ಹುಸೇನ್ ಬಿ (573), ಪ್ರಿಯದರ್ಶಿನಿ . ಎಸ್ (573), ಸೇರಿ 163 ವಿದ್ಯಾರ್ಥಿ ಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.
ಇದನ್ನೂ ಓದಿ: 2nd PUC Results 2026: ಪರೀಕ್ಷಾ ಮಂಡಳಿಯ ಮಹಾ ಎಡವಟ್ಟು; ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗೆ 100ಕ್ಕೆ 111 ಅಂಕ!
ವಿಷಯವಾರು ಒಟ್ಟು 21 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ . ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಡಳಿತ ಮಂಡಳಿ ಅವರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮಕ್ಕೆ ಸಿ ಓ ಓ ಆದಂತಹ ಡಾ. ಅರುಣ್ ಕುಮಾರ್ ರವರು, ಕಾಲೇಜಿನ ಟ್ರಸ್ಟಿ ಕೆ. ಪಟೇಲ್ ರವರು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಆನಂದರಾಜು ಕೆ ಹಾಗೂ ಕಾಲೇಜಿನ ಬೋಧಕ ವರ್ಗದ ಎಲ್ಲಾ ಉಪನ್ಯಾಸಕ, ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತ ರಿದ್ದರು. ಹಾಗೂ ಸಂಜೆಯ ತರಗತಿಗಳು ಕಾಲೇಜಿನಲ್ಲಿ ಉತ್ತಮ ಫಲಿತಾಂಶ ಬರಲು ಸಹಕಾರಿ ಯಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ಜೆ. ತನುಶ್ರೀ ವಿದ್ಯಾರ್ಥಿನಿಗೆ ಶ್ರೀ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಉಚಿತ ವಿದ್ಯಾಭ್ಯಾಸವನ್ನು ನೀಡುವುದಾಗಿ ಆಡಳಿತ ಮಂಡಳಿಯವರು ಘೋಷಣೆ ಮಾಡಿದ್ದಾರೆ.