ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bellary Firing: ಬಳ್ಳಾರಿ ಗುಂಪು ಘರ್ಷಣೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ: ಸಿಎಂ ಸಿದ್ದರಾಮಯ್ಯ

ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪುಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಸಾವು ಸಂಭವಿಸಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ಬಳಸಲಾದ ಗನ್ ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಳ್ಳಾರಿ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ: ಸಿಎಂ

ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. -

Prabhakara R
Prabhakara R Jan 2, 2026 3:55 PM

ಬೆಂಗಳೂರು, ಜ.2: ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪು ಘರ್ಷಣೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಸಿಎಂ ಅವರು ಶುಕ್ರವಾರ ಮಾತನಾಡಿದರು.

ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪುಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಸಾವು ಸಂಭವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಕರಣದ ತನಿಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಘಟನೆಯಲ್ಲಿ ಬಳಸಲಾದ ಗನ್ ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸತೀಶ್ ರೆಡ್ಡಿಯವರು ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ರಾಜಶೇಖರ ಅವರಿಗೆ ತಗುಲಿರಬಹುದು, ಆದ್ದರಿಂದ ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದರು.

ಜನಾರ್ದನ ರೆಡ್ಡಿ ದ್ವೇಷದ ರಾಜಕೀಯಕ್ಕೆ ಓರ್ವ ಬಲಿ: ಶಾಸಕ ಭರತ್ ರೆಡ್ಡಿ

ಬಳ್ಳಾರಿ: ಜನಾರ್ದನ ರೆಡ್ಡಿ (Janardhan Reddy) ನೀಚ ರಾಜಕೀಯ ಮಾಡ್ತಿದ್ದಾನೆ. ಅವನ ಮನೆಯ ಮುಂದೆ ಬ್ಯಾನರ್ ಹಾಕಿಲ್ಲ, ಅದು ಸಾರ್ವಜನಿಕ ಸ್ಥಳ. ಬೇಕಂತಲೇ ಜಗಳ ಮಾಡೋ ಉದ್ದೇಶದಿಂದ ತಮ್ಮ ಮನೆಯ ಮುಂದೆ ಬ್ಯಾನರ್ ಹಾಕಿತ್ತು ಎಂದು ರಂಪ ರಾಮಾಯಣ ಮಾಡ್ತಿದ್ದಾನೆ. ವಾಲ್ಮೀಕಿ ಪುತ್ಥಳಿ ಸ್ಥಾಪಿಸುವ ಕಾರ್ಯಕ್ರಮ ನಿಲ್ಲಿಸುವ ಹುನ್ನಾರವಿದೆ. ಆದರೆ ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಿಲ್ಲುವುದಿಲ್ಲ ಎಂದು ಏಕವಚನದಲ್ಲೇ ಶಾಸಕ ಭರತ್ ರೆಡ್ಡಿ (MLA Bharat Reddy) ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ನಮ್ಮ ಕಾರ್ಯಕರ್ತನ ಸಾವಾಗಿದೆ. ಆ ನೋವಿನಲ್ಲಿದ್ದೇವೆ. ಅದರೂ ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮ ನಿಲ್ಲೋದಿಲ್ಲ. ಅದ್ಧೂರಿಯಾಗಿ ಮಾಡ್ತೇವೆ, ಹೆಚ್ಚು ಹೆಚ್ಚು ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮೃತ ರಾಜಶೇಖರಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಪರಿಹಾರ ಕೊಡ್ತೇವೆ. ಆಂಧ್ರ ತೆಲಂಗಾಣ ಯಾವ ಕಡೆಯಿಂದಾದ್ರೂ ಜನರನ್ನು ಕರೆಸಲಿ ನಮಗೇನು ಆಗಲ್ಲ. ಜನಾರ್ದನ ರೆಡ್ಡಿ ದ್ವೇಷದ ರಾಜಕೀಯಕ್ಕೆ ಓರ್ವ ಬಲಿಯಾಗಿಯಾದ್ದಾನೆ. ಘಟನೆ ಬಗ್ಗೆ ಡಿಸಿಎಂ ನನ್ನ ಜತೆಗೆ ಮಾತನಾಡಿದ್ದಾರೆ. ನಮ್ಮ ಜತೆಗೆ ಇರೋ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿ ಗಲಾಟೆ: ಹತ್ತು ಜನರ ಮೇಲೆ ಪ್ರಕರಣ ದಾಖಲು, ಬುಲೆಟ್‌ ಖಾಸಗಿ ರಿವಾಲ್ವರ್‌ನದ್ದು

ಜನಾರ್ದನ ರೆಡ್ಡಿ ಏನು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈಗಾಗಲೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಇದೀಗ ಗಡಿ ಒತ್ತುವರಿ ಪ್ರಕರಣದಲ್ಲಿಯೂ ಶಿಕ್ಷೆಯಾಗಲಿದೆ. ಈ ವಿಚಾರ ಮರೆಮಾಚಲು ಈ ರೀತಿಯಲ್ಲಿ ಗಲಾಟೆ ಮಾಡ್ತಿದ್ದಾರೆ ಎಂದು ತಿಳಿಸಿದರು.