ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ಗಮನಿಸಿ; ಬೆಂಗಳೂರಿನ ಈ ಪ್ರದೇಶಗಳಲ್ಲಿ ಜ.3ರಿಂದ 10ರವರೆಗೆ ಮಧ್ಯಂತರ ವಿದ್ಯುತ್‌ ವ್ಯತ್ಯಯ

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆ.ವಿ ಹೆಣ್ಣೂರು ರೋಡ್‌ ಉಪ-ಕೇಂದ್ರ ವ್ಯಾಪ್ತಿಯ ಹಲವೆಡೆ ಜ.3 ಶನಿವಾರದಿಂದ ಜ.10ರವರೆಗೆ ಬೆಳಗ್ಗೆ 9ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ಜ.3ರಿಂದ 10ರವರೆಗೆ ವಿದ್ಯುತ್‌ ವ್ಯತ್ಯಯ

ಸಾಂದರ್ಭಿಕ ಚಿತ್ರ. -

Profile
Siddalinga Swamy Jan 2, 2026 5:48 PM

ಬೆಂಗಳೂರು, ಜ.2: ಕೆಪಿಟಿಸಿಎಲ್ ವತಿಯಿಂದ (KPTCL) ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆ.ವಿ ಹೆಣ್ಣೂರು ರೋಡ್‌ ಉಪ-ಕೇಂದ್ರ ವ್ಯಾಪ್ತಿಯ ಹಲವೆಡೆ ಜ.3 ಶನಿವಾರದಿಂದ ಜ.10ರವರೆಗೆ ಬೆಳಗ್ಗೆ 9ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ಟ್ ಜಯಂತಿ ಕಾಲೇಜು, ಕೆ. ನಾರಾಯಣಪುರ, ಬಿಳಿ ಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ.ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್ಐ ಗೇಟ್, ಬೈರತಿ ಕ್ರಾಸ್, ಬೈರತಿ ಗ್ರಾಮ, ಎವರ್‌ಗ್ರೀನ್ ಲೇಔಟ್, ಕನಕಶ್ರೀ ಲೇಔಟ್, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ್ ಲೇಔಟ್, ಟ್ರಿನಿಟಿ ಫಾರ್ಚ್ಯೂನ್, ಮೈಕಲ್ ಸ್ಕೂಲ್, ಬಿಎಚ್ಕೆ ಇಂಡಸ್ಟ್ರೀಸ್, ಜಾನಕಿರಾಮ್ ಲೇಔಟ್, ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಆತ್ಮ ವಿದ್ಯಾನಗರ (ಬೈರತಿ ಗ್ರಾಮ), ಕೆಆರ್‌ಸಿ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್‌ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೋನಿ, ಮಂಜುನಾಥ ನಗರ, ಹೊರಮಾವು ಬಿಬಿಎಂಪಿ, ಅಗರ ಗ್ರಾಮ, ಪಾತಾಳಮ್ಮ ದೇವಸ್ಥಾನ, ಎಕೆಆರ್ ಸ್ಕೂಲ್, ನ್ಯೂ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್, ಕ್ರಿಶ್ಚಿಯನ್ ಕಾಲೇಜು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ವಿವಿಧೆಡೆ ಜ.3ರಿಂದ 19ರವರೆಗೆ ಮಧ್ಯಂತರ ವಿದ್ಯುತ್‌ ವ್ಯತ್ಯಯ

ಬೆಂಗಳೂರು: 220/66/11ಕೆ.ವಿ ಇ.ಪಿ.ಐ.ಪಿ. ಸ್ಟೇಷನ್‌ನಲ್ಲಿ 31.5 ಎಂ.ವಿ.ಎ. ಶಕ್ತಿ ಪರಿವರ್ತಕ -3 ರ ರಿಟ್ರೋಫಿಲ್ಲಿಂಗ್ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜ.3 ರಿಂದ 19ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.

ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆ; ʼವೇದಾಂತ ಮೇಕಥಾನ್' ಎರಡು ತಿಂಗಳ ವಿಶೇಷ ಕಾರ್ಯಕ್ರಮ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಎಲ್ ಅ್ಯಂಡ್‌ ಟಿ (L&T), ಆರ್‌ಎಂಝೆಡ್ ನೆಕ್ಸ್ಟ್ (RMZ Next), ರಾಗಿಹಳ್ಳಿ–ಸಿದ್ದಾಪುರ ಗೇಟ್, ಇಪಿಐಪಿ ಲೇಔಟ್, ಟಿಸಿಎಸ್ ಸಾಫ್ಟ್‌ವೇರ್, ಎಸ್‌ಜೆಆರ್‌ ಟೆಕ್ ಪಾರ್ಕ್ (ಇಪಿಐಪಿ ಲೇಔಟ್), ಎಂ/ಎಸ್ ವಿಎಸ್ಎನ್ಎಲ್ ಫೀಡರ್, ರಿಲಯನ್ಸ್ (ಬಿಗ್ ಬಜಾರ್), ಓರಿಯಂಟಲ್ ಹೋಟೆಲ್, ಏರ್‌ಟೆಲ್, ಬುಷ್ರಾ ಟೆಕ್ ಪಾರ್ಕ್ (ಇಪಿಐಪಿ ಲೇಔಟ್), ಗೋಪಾಲನ್ ಎಂಟರ್, ಸದಾ ಟೆಕ್ ಪಾರ್ಕ್ (ಇಪಿಐಪಿ ಲೇಔಟ್), ಕ್ವಾಲ್ಕಾಮ್, ಕ್ವಾಲ್ಕಾಮ್–2, ಜಿಇ ಬಿಇ ಕಂಪನಿ, ಬ್ಯಾಗ್ಮನೆ ನೀಯಾನ್ ಬ್ಲಾಕ್, ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.