ಕೆಳಮನೆಯಲ್ಲಿ ಬರಕ್ಕಿಂತ ಇಂಡಿ ಶಾಸಕರ ರಾಜೀನಾಮೆಯೇ ಚರ್ಚಾವಸ್ತು: ಬರದ ಚರ್ಚೆಗೂ ʼಬರʼ
ರಾಜ್ಯ ಸರಕಾರದ ಆರ್ಥಿಕ ದುಸ್ಥಿತಿ, ಬರದ ಬಗ್ಗೆ ಚರ್ಚೆಯ ನಡುವೆ ವಿಧಾನಸಭೆ ಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಭಾರೀ ಸದ್ದು ಮಾಡಿತು. ಬಿಜೆಪಿ ನಾಯಕರು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿಮ್ಮದೇ ಶಾಸಕರು ನಿಮ್ಮ ಸರಕಾರವನ್ನೇ ವಿರೋಧಿಸಿ ರಾಜೀನಾಮೆ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
-
ಸರಕಾರಕ್ಕೆ ನಾಚಿಕೆಯಾಗಬೇಕು: ಬಿಜೆಪಿ
ಕೇಂದ್ರದ್ದೇ ತಪ್ಪು: ಸರಕಾರ
ಆರೋಪ, ಪ್ರತ್ಯಾರೋಪದಲ್ಲೇ ಮುಕ್ತಾಯ
ಒಂದು ದಿನ ಕಲಾಪ ವಿಸ್ತರಣೆ
ವಿಧಾನಸಭೆ: ರಾಜ್ಯ ಸರಕಾರದ ಆರ್ಥಿಕ ದುಸ್ಥಿತಿ, ಬರದ ಬಗ್ಗೆ ಚರ್ಚೆಯ ನಡುವೆ ವಿಧಾನಸಭೆ ಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಭಾರೀ ಸದ್ದು ಮಾಡಿತು. ಬಿಜೆಪಿ ನಾಯಕರು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿಮ್ಮದೇ ಶಾಸಕರು ನಿಮ್ಮ ಸರಕಾರವನ್ನೇ ವಿರೋಧಿಸಿ ರಾಜೀನಾಮೆ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದರು. ಇದರ ನಡುವೆಯೇ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮತ್ತು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರು ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆಸಿದ್ದು ಕಂಡುಬಂತು. ಈ ನಡುವೆ ಒಂದು ದಿನದ ಮಟ್ಟಿಗೆ ಕಲಾಪದ ಅವಧಿ ವಿಸ್ತರಣೆಯಾಯಿತು.
ಬರ ಪರಿಸ್ಥಿತಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡುತ್ತಿದ್ದ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ ಮಧ್ಯಪ್ರವೇಶಿಸಿ, ರಾಜೀನಾಮೆ ಪತ್ರವನ್ನು ಪ್ರಸ್ತಾಪಿಸಿ ಮತ್ತೊಂದು ಆಘಾತದ ಸುದ್ದಿ, ಹೀಗೂ ಉಂಟೆ..?. ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕೊಟ್ಟಿದ್ದಾರೆ.
ಇದನ್ನೂ ಓದಿ: Karnataka monsoon session 2026: ಆ.13ರಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ನಿಮ್ಮ ಶಾಸಕರು ನಿಮ್ಮ ಸರಕಾರದ ವಿರುದ್ಧ ಕೊಟ್ಟಿರೋದು. ಸರಕಾರದ ಯೋಗ್ಯತೆ ಏನು, ಶಾಸಕರು ರಾಜೀನಾಮೆ ಕೊಡುತ್ತೇನೆ ಅಂತಾರೆ. ಮೊನ್ನೆ ಎಚ್.ಕೆ.ಪಾಟೀಲ್ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು. ಶಾಸಕರು ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಇನ್ನೂ ಕೆಲವರು ಸರಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ. ಸರಕಾರ ನಾಚಿಕೆಪಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್, ಶಾಸಕರು ರಾಜೀನಾಮೆ ನೀಡಿರುವುದನ್ನು ವಿಧಾನ ಸಭಾಧ್ಯಕ್ಷರು ಸದನಕ್ಕೆ ತಿಳಿಸಬೇಕಿತ್ತು ಎಂದು ಹೇಳಿದರು. ಹಾಜರಿರುವ ಶಾಸಕರ ಪಟ್ಟಿಯನ್ನು ಪ್ರಕಟಿಸುವಂತೆ, ರಾಜೀನಾಮೆ ನೀಡಿರುವ ಶಾಸಕರ ಬಗ್ಗೆಯೂ ಸದನಕ್ಕೆ ಮಾಹಿತಿ ನೀಡುವುದು ಸಭಾಧ್ಯಕ್ಷರ ಕರ್ತವ್ಯ ಎಂದು ವಾದಿಸಿದರು.
ಇದಕ್ಕೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ್, ರಾಜೀನಾಮೆ ವಿಚಾರ ತಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸರಕಾರದ ಗಮನ ಸೆಳೆದಿದ್ದು, ಸಚಿವರು ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು. ಈ ವೇಳೆ, ಇದು ಸಭಾಧ್ಯಕ್ಷರ ಜವಾಬ್ದಾರಿಯೇ ಹೊರತು ಸರಕಾರದ ಹೊಣೆಗಾರಿಕೆಯಲ್ಲ ಎಂದು ಸುನೀಲ್ ಕುಮಾರ್ ಪ್ರತಿಪಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಶಾಸಕರ ರಾಜೀನಾಮೆ ಸ್ವೀಕರಿಸು ವುದು ಹಾಗೂ ಅದರ ಬಗ್ಗೆ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆ ಸಭಾಧ್ಯಕ್ಷರ ವ್ಯಾಪ್ತಿಯಲ್ಲಿದೆ. ಅದಕ್ಕೂ ಮುನ್ನ ಪ್ರಕಟಿಸುವುದು ಸರಿಯಲ್ಲ ಎಂದು ಕಾನೂನು ಪ್ರಕ್ರಿಯೆಯನ್ನು ವಿವರಿಸಿದರು. ಇದು ನಮ್ಮ ಪಕ್ಷದ ಆಂತರಿಕ ವಿಚಾರ. ಪ್ರತಿಪಕ್ಷದ ನಾಯಕರು ಇದರಲ್ಲಿ ಮೂಗು ತೂರಿಸುವ ಬದಲು ಬರ ಪರಿಸ್ಥಿತಿಯ ಕುರಿತು ಚರ್ಚೆ ಮುಂದುವರಿಸಲಿ. ನಮ್ಮ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಖಾದರ್ ಹೇಳಿದರು.
ಆಂತರಿಕ ಸಮಸ್ಯೆಯಲ್ಲ: ಇದಕ್ಕೆ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿ, ಇದು ಪಕ್ಷದ ಆಂತರಿಕ ಸಮಸ್ಯೆಯಲ್ಲ, ಬರದ ಸಮಸ್ಯೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಶಾಸಕರ ರಾಜೀನಾಮೆಗೆ ಬಿಜೆಪಿ ಮತ್ತು ಕೇಂದ್ರ ಸರಕಾರವೇ ಕಾರಣ ಎಂದು ಸೇರಿದ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಬರಪೀಡಿತ ತಾಲೂಕುಗಳ ಘೋಷಣೆಗೆ ಕೇಂದ್ರ ರೂಪಿಸಿರುವ ಮಾನದಂಡಗಳು ಕಠಿಣ ವಾಗಿವೆ ಎಂದು ಹೇಳಿದರು. ಆ ನಿಯಮ ಸಡಿಲಗೊಳಿಸುವಂತೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ತಾವು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರೂ, ನಿಯಮಗಳಲ್ಲಿ ಬದಲಾವಣೆ ಆಗಿಲ್ಲ. ಬಿಜೆಪಿಯವರು ಕೇಂದ್ರ ಸರಕಾರಕ್ಕೆ ಸಲಹೆ ನೀಡಿ ನಿಯಮಗಳನ್ನು ಸಡಿಲಗೊಳಿಸಲಿ.
ರಾಜ್ಯದ ಎಲ್ಲಾ 224 ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲು ನಾವು ಸಿದ್ದರಿದ್ದೇವೆ ಎಂದರು. ಸುನೀಲ್ ಕುಮಾರ್, ಸರಕಾರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವಷ್ಟರಲ್ಲಿ ಎಲ್ಲಾ ಶಾಸಕರು ರಾಜೀನಾಮೆ ನೀಡಿ, ಆಡಳಿತ ಪಕ್ಷವೇ ಖಾಲಿಯಾಗುತ್ತದೆ ಎಂದು ವ್ಯಂಗ್ಯವಾಡಿದರು. ಅಲ್ಲದೆ, ಶಾಸಕರನ್ನು ಗೌರವಯುತವಾಗಿ ನಡೆಸಿಕೊಂಡು ಅವರ ಅಸಮಾಧಾನ ಪಡಿಸಲು ಸಚಿವ ಶಿವಲಿಂಗೇಗೌಡ ಅವರನ್ನು ಸಂಪರ್ಕಿಸಿ ಎಂದು ವ್ಯಂಗ್ಯದ ಸಲಹೆ ನೀಡಿದರು.
ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿ, ದೇಶಾದ್ಯಂತ ಶಾಸಕರು ಮತ್ತು ಸಚಿವರನ್ನು ಖರೀದಿ ಮಾಡಿದವರೇ ಈಗ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕೊನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿರುವುದನ್ನು ದೃಢಪಡಿಸಿದರು. ಇದು ಈಶ್ವರಪ್ಪ ಅವರಂತಹ ಪ್ರಕರಣವಲ್ಲ ಅಥವಾ ಇತ್ತೀಚೆಗೆ ನಾವು ರಾಜೀನಾಮೆ ಪಡೆದ ನಾಗೇಂದ್ರ ಅವರ ಪ್ರಕರಣವೂ ಅಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿzರೆ. ಅವರೊಂದಿಗೆ ಚರ್ಚಿಸಿ ಸಮಸ್ಯೆ ಸರಿಪಡಿಸುತ್ತೇವೆ ಎಂದು ತಿಳಿಸಿದರು
ರಾಜೀನಾಮೆ ಪತ್ರದಲ್ಲೇನಿದೆ?
ವಿಜಯಪುರ ಜಿಲ್ಲೆಯ ನಾನು ಪ್ರತಿನಿಧಿಸುವ ಇಂಡಿ ತಾಲೂಕು 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಗಾ ಲಕ್ಕೆ ತುತ್ತಾಗಿದ್ದು, ಆರಂಭದಲ್ಲಿ ಸ್ವಲ್ಪ ಮಳೆ ಬಿದ್ದ ಪ್ರಯುಕ್ತ ರೈತರು ಸಾಲ ಮಾಡಿ ಬೀಜ, ಗೊಬ್ಬರಗಳನ್ನು ಖರೀದಿಸಿ, ಬಿತ್ತನೆ ಮಾಡಿರು ತ್ತಾರೆ. ಆದರೆ, ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳು ಬತ್ತಿ ಹೋಗಿದೆ. ಈ ಬಗ್ಗೆ ನಾನು ಮುಖ್ಯ ಮಂತ್ರಿ ಗಳಿಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೂ ಬೇಡಿಕೆ ಈಡೇರಿಲ್ಲ. ಜನರ ಆಶೋತ್ತರ ಪೂರೈಸಲಾಗದ್ದಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.
![]()
ಯಶವಂತರಾಯ ರಾಜೀನಾಮೆ ಬಗ್ಗೆ ವಿರೋಧ ಪಕ್ಷಗಳು ಗಾಬರಿಯಾಗುವುದು ಬೇಡ. ಪ್ರತಿಪಕ್ಷದವರಾದ ನೀವೇ ಭಾವನಾತ್ಮಕವಾಗಿ ರಾಜೀನಾಮೆ ನೀಡಿದರೂ ನಾವು ಆತುರದಲ್ಲಿ ಅದನ್ನು ಅಂಗೀಕಾರ ಮಾಡು ವುದಿಲ್ಲ. ಈಗಾಗಲೇ ನಮ್ಮ ಶಾಸಕರೊಂದಿಗೆ ಚರ್ಚಿಸಿ, ಸಮಸ್ಯೆ ಆಲಿಸಿದ್ದೇನೆ.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ
![]()
ಆರ್ಥಿಕ ಸಂಕಷ್ಟದಲ್ಲಿರುವ ಸರಕಾರಕ್ಕೆ ಮತ್ತೊಂದು ಆಘಾತದ ಸುದ್ದಿ, ಮೊನ್ನೆ ಎಚ್. ಕೆ.ಪಾಟೀಲ್ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಈಗ ಇನ್ನೊಬ್ಬ ಶಾಸಕ ರಾಜೀನಾಮೆಯನ್ನೇ ನೀಡಿದ್ದಾರೆ. ನಿಮ್ಮದೇ ಶಾಸಕರು ಸರಕಾರದ ವಿರುದ್ಧ ಆರೋಪಿ ಸಿದ್ದಾರೆ. ಸರಕಾರಕ್ಕೆ ನಾಚಿಕೆಯಾಗಬೇಕು.
-ಆರ್.ಅಶೋಕ್, ಪ್ರತಿಪಕ್ಷ ನಾಯಕ
![]()
ಬರ ನಿರ್ವಹಣೆಯಲ್ಲಿ ಸಮಸ್ಯೆ ಯಾಗಲು ಮುಖ್ಯ ಕಾರಣವೇ ಕೇಂದ್ರ ಸರಕಾರದ ಮಾರ್ಗಸೂಚಿ. ಕರ್ನಾಟಕದಲ್ಲಿ ಕೆಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸಾಧ್ಯವಾಗದೇ ಇರಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೊಳಿಸಿರುವ ಬರ ನಿರ್ವಹಣಾ ಮಾರ್ಗಸೂಚಿಯೇ ಕಾರಣ.
-ಡಾ.ಜಿ. ಪರಮೇಶ್ವರ, ಉಪಮುಖ್ಯಮಂತ್ರಿ