ಸೌಜನ್ಯ ಹತ್ಯೆಯ ನೈಜ ಹಂತಕ ಸಿಗಲು ಸಾಧ್ಯವೇ..?
ಪ್ರಮುಖ ಶಂಕಿತನನ್ನೇ ಕಾನೂನು ಬದ್ಧವಾಗಿ ತನಿಖೆಯ ಪರಿಧಿಯಿಂದ ಹೊರಗಿಟ್ಟ ಮೇಲೆ, ಈ ಹೊಸ ವಿಚಾರಣೆಯು ಯಾರ ಸುತ್ತ ನಡೆಯಬೇಕು ಮತ್ತು ಅಸಲಿ ಆರೋಪಿಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದು ಹೇಗೆ ಎಂಬುದು ಈ ವಿಷಯದಲ್ಲಿರುವ ನಿಷ್ಠುರ ಸತ್ಯ. ಮತ್ತೊಂದೆಡೆ, ಸಾರ್ವಜನಿಕ ವಾಗಿ ಮತ್ತು ಸಂತ್ರಸ್ತೆಯ ಕುಟುಂಬದಿಂದ ಗುರಿಯಾಗಿಸಲ್ಪಟ್ಟಿದ್ದ ಇತರ ವ್ಯಕ್ತಿಗಳ ಮೇಲೆ ಯಾವುದೇ ಸಾಕ್ಷ್ಯಾಧಾರಗ ಳಿಲ್ಲವೆಂದು ನ್ಯಾಯಾಲಯಗಳು ಈ ಹಿಂದೆಯೇ ತೀರ್ಮಾನಿಸಿವೆ.
-
ಜಿತೇಂದ್ರ ಕುಂದೇಶ್ವರ ಮಂಗಳೂರು
ಮರು ತನಿಖೆಗೆ ಸುಪ್ರೀಂ ಆದೇಶದ ಬೆನ್ನಲ್ಲೇ ವಾಸ್ತವದ ಪ್ರಶ್ನೆ: ಯಾರ ವಿರುದ್ಧ ತನಿಖೆ ?
ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮರು ತನಿಖೆಯ ಆದೇಶ ಸಾರ್ವಜನಿ ಕವಾಗಿ ಸಂಚಲನ ಮೂಡಿಸಿ ದ್ದರೂ, ಕಡತಗಳ ವಾಸ್ತವ ದಲ್ಲಿ ಇದು ಅಕ್ಷರಶಃ ಮದುಮಗನೇ ಇಲ್ಲದ ಮದುವೆಯಂತಾದ ವಿಚಾರಣೆಯಾಗಿದೆ.
ಹದಿನಾಲ್ಕು ವರ್ಷಗಳ ಕಾಲ ಮೂರು ಪ್ರಮುಖ ತನಿಖಾ ಸಂಸ್ಥೆಗಳು ಕೃತ್ಯದ ಆರೋಪ ಹೊರಿಸಿದ್ದ ಏಕೈಕ ವ್ಯಕ್ತಿ ಸಂತೋಷ್ ರಾವ್ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದು, ಆತನಿಗೆ ಸಂವಿಧಾನದ ಇಪ್ಪತ್ತನೇ ವಿಽ, ಕ್ರಿಮಿ ನಲ್ ಪ್ರಕ್ರಿಯಾ ಸಂಹಿತೆಯ ಅನ್ವಯ ಡಬಲ್ ಜಿಯೋಪರ್ಡಿ ರಕ್ಷಣೆ (ವ್ಯಕ್ತಿಯೊಬ್ಬನ ಮೇಲೆ ಒಮ್ಮೆ ಕಾನೂನು ಪ್ರಕಾರ ವಿಚಾರಣೆ ನಡೆದು ಆತ ಖುಲಾಸೆ ಗೊಂಡರೆ (ದೋಷಮುಕ್ತ ನಾದರೆ) ಅಥವಾ ಶಿಕ್ಷೆ ಅನುಭವಿಸಿದರೆ, ಅದೇ ಅಪರಾಧಕ್ಕಾಗಿ ಆತನನ್ನು ಮತ್ತೊಮ್ಮೆ ನ್ಯಾಯಾಲ ಯದಲ್ಲಿ ವಿಚಾರಣೆಗೆ ಗುರಿಪಡಿಸುವಂತಿಲ್ಲ) ಇರುವುದರಿಂದ ಆತನನ್ನು ಮತ್ತೆ ತನಿಖೆ ಅಥವಾ ವಿಚಾರಣೆಗೆ ಒಳಪಡಿಸುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಮುಖ ಶಂಕಿತನನ್ನೇ ಕಾನೂನು ಬದ್ಧವಾಗಿ ತನಿಖೆಯ ಪರಿಧಿಯಿಂದ ಹೊರಗಿಟ್ಟ ಮೇಲೆ, ಈ ಹೊಸ ವಿಚಾರಣೆಯು ಯಾರ ಸುತ್ತ ನಡೆಯಬೇಕು ಮತ್ತು ಅಸಲಿ ಆರೋಪಿಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದು ಹೇಗೆ ಎಂಬುದು ಈ ವಿಷಯದಲ್ಲಿರುವ ನಿಷ್ಠುರ ಸತ್ಯ. ಮತ್ತೊಂದೆಡೆ, ಸಾರ್ವಜನಿಕ ವಾಗಿ ಮತ್ತು ಸಂತ್ರಸ್ತೆಯ ಕುಟುಂಬದಿಂದ ಗುರಿಯಾಗಿಸಲ್ಪಟ್ಟಿದ್ದ ಇತರ ವ್ಯಕ್ತಿಗಳ ಮೇಲೆ ಯಾವುದೇ ಸಾಕ್ಷ್ಯಾಧಾರಗಳಿಲ್ಲವೆಂದು ನ್ಯಾಯಾಲಯಗಳು ಈ ಹಿಂದೆಯೇ ತೀರ್ಮಾನಿಸಿವೆ.
ಇದನ್ನೂ ಓದಿ: Sowjanya case: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ಸ್ವತಃ ಸುಪ್ರೀಂ ಕೋರ್ಟ್ ಸಹ ತನ್ನ ಆದೇಶದಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಪೂರ್ವಗ್ರಹ ಹೊಂದಿಲ್ಲವೆಂದು ಸ್ಪಷ್ಟಪಡಿಸಿದೆ. ಇತ್ತ ಅಪರಾಧ ಸಾಬೀತುಪಡಿಸಲು ಬೇಕಾದ ಬಹುತೇಕ ವಿಧಿವಿಜ್ಞಾನ ಸಾಕ್ಷ್ಯಗಳು ಆರಂಭಿಕ ಹಂತದಲ್ಲೇ ನಾಶವಾಗಿರುವಾಗ, ಕೇವಲ ಅಲೆಮಾರಿಯೊಬ್ಬನ ಪಂಚೆಯಲ್ಲಿದ್ದ ಅಪರಿಚಿತ ಕೂದಲನ್ನು ನಂಬಿಕೊಂಡು ನೈಜ ಹಂತಕರನ್ನು ಪತ್ತೆಹಚ್ಚು ವುದು ಹೇಗೆ ಎಂಬುದು ಜಟಿಲ ಪ್ರಶ್ನೆ.
ಸೌಜನ್ಯ ಪ್ರಕರಣ: 2012ರ ಅಕ್ಟೋಬರ್ 9ರಂದು ಸಂಜೆ 4.15ಕ್ಕೆ ಕಾಲೇಜು ಮುಗಿಸಿ ಬಸ್ ಇಳಿದು ಮನೆ ಕಡೆಗೆ ಹೊರಟಿದ್ದ 17 ವರ್ಷದ ಬಾಲಕಿ ನಿಗೂಢವಾಗಿ ಕಣ್ಮರೆಯಾಗಿದ್ದಳು. ಅಕ್ಟೋಬರ್ 10ರಂದು ಮಣ್ಣಸಂಕದ ಪೊದೆಯಲ್ಲಿ ಆಕೆಯ ಮೃತದೇಹ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಯಿತು. ಅಕ್ಟೋಬರ್ 11ರಂದು ಬಾಹುಬಲಿ ಬೆಟ್ಟದ ಮೆಟ್ಟಿಲುಗಳ ಬಳಿ ಕುಳಿತಿದ್ದ ಸಂತೋಷ್ ರಾವ್ ಎಂಬಾತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಸರ್ಕಾರ 2012ರ ಡಿಸೆಂಬರ್ 12ರಂದು ತನಿಖೆಯನ್ನು ಸಿಐಡಿಗೆ ವಹಿಸಿತು. ಸಿಐಡಿ ಡಿವೈಎಸ್‌ಪಿ ರುದ್ರಮುನಿ ತನಿಖೆ ನಡೆಸಿ, ಸಂತೋಷ್ ರಾವ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದರು. ಜನಾಗ್ರಹ ಮುಂದುವರಿದಾಗ 2013ರ ನವೆಂಬರ್ 6ರಂದು ಪ್ರಕರಣ ಸಿಬಿಐ ಪಾಲಾಯಿತು. ಚೆನ್ನೈ ಸಿಬಿಐ ಅಧಿಕಾರಿಗಳು 2014ರ ಮಾರ್ಚ್ 7ರಂದು ಮರು ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿ ಕೊಂಡು, ಅಂತಿಮವಾಗಿ ಸಂತೋಷ್ ರಾವ್ ವಿರುದ್ಧವೇ ದೋಷಾರೋಪ ಪಟ್ಟಿ ಸಲ್ಲಿಸಿದರು.
ಗೊಂದಲ- ಖುಲಾಸೆ: ಬೆಂಗಳೂರಿನ ಸಿಬಿಐ ವಿಶೇಷ ಸೆಷನ್ಸ್ ನ್ಯಾಯಾಲಯದಲ್ಲಿ 35 ಸಾಕ್ಷಿಗಳ ವಿಚಾರಣೆ ನಡೆದು, 2023ರ ಜೂನ್ 16ರಂದು ಸಂತೋಷ್ ರಾವ್‌ನನ್ನು ಖುಲಾಸೆ ಮಾಡಲಾಯಿತು. ಆರಂಭಿಕ ಹಂತದಲ್ಲಿ ಅತ್ಯಾಚಾರ ನಡೆದಿಲ್ಲ, ಇದು ಸಾವು ಎಂಬಂತೆ ವೈದ್ಯಕೀಯ ವಿಶ್ಲೇಷಣೆಗಳು ಗೊಂದಲ ಮೂಡಿಸಿದ್ದವು. ಬಾಲಕಿ ತೀವ್ರ ಪ್ರತಿರೋಧ ಒಡ್ಡಿದ್ದರಿಂದ ಲೈಂಗಿಕ ದೌರ್ಜನ್ಯ ನಡೆಸಲು ಅಸಾಧ್ಯವಾಗಿ, ಸಿಟ್ಟಿನಿಂದ ಆಕೆಯ ಗುಪ್ತಾಂಗದೊಳಗೆ ಮಣ್ಣು ತುಂಬಿಸಿ ಕೊಲೆ ಮಾಡಿರಬಹುದು ಎಂಬ ಆಯಾಮವೂ ಚರ್ಚೆಗೆ ಬಂದಿತ್ತು. ಹಾಗೇ ಅದೇ ಹತಾಶೆಯ ಸಿಟ್ಟಿನಿಂದ ಕೊಲೆ ನಡೆದಿರುವ ಸಾಧ್ಯತೆಯೂ ಇತ್ತಲ್ಲವೇ ಎಂಬ ತನಿಖಾ ಚಿಂತನೆಗಳಿದ್ದವು.
ವಿಧಿವಿಜ್ಞಾನ ತಜ್ಞ ಡಾ.ಮಹಾಬಲ ಶೆಟ್ಟಿ ಅವರು ಸ್ಪಷ್ಟಪಡಿಸಿದಂತೆ, ಆರೋಪಿಗೆ ಫಿಮೊಸಿಸ್ ಕಾಯಿಲೆಯಿದ್ದ ಕಾರಣ ಬಲವಂತದ ಲೈಂಗಿಕ ದೌರ್ಜನ್ಯ ಎಸಗುವುದು ವೈದ್ಯಕೀಯವಾಗಿ ಕಷ್ಟಸಾಧ್ಯವಾಗಿತ್ತು. ಆತನ ಗುಪ್ತಾಂಗದ ಮೇಲೆ ಯಾವುದೇ ಗಾಯಗಳಿರಲಿಲ್ಲ. ಮೃತದೇಹದ ಪಕ್ಕದಲ್ಲಿದ್ದ ಶಾಲಾ ಬ್ಯಾಗ್ ಮತ್ತು ಪುಸ್ತಕಗಳು ಅಂದು ಸುರಿದ ಮಳೆಯಲ್ಲೂ ಒದ್ದೆಯಾಗದೆ ಒಣಗಿದ ಸ್ಥಿತಿಯಲ್ಲಿದ್ದವು. ಇನ್ನು ನಿರ್ಣಾಯಕ ಸಾಕ್ಷ್ಯವಾಗಬೇಕಿದ್ದ ಯೋನಿಸ್ರಾವದ ಮಾದರಿ ಯನ್ನು ಸಿಬ್ಬಂದಿ ಸರಿಯಾಗಿ ಸಂರಕ್ಷಿಸದೆ ಕಳುಹಿಸಿದ್ದರಿಂದ ಅದರಲ್ಲಿ ಫಂಗಸ್ ಬೆಳೆದು ಡಿಎನ್‌ಎ ಫಲಿತಾಂಶವೇ ಶೂನ್ಯವಾಯಿತು.
ತನಿಖೆ -ನ್ಯಾಯಾಂಗ ಪ್ರಕ್ರಿಯೆ ಸಾಗಿದ ಹಾದಿ
ಮತ್ತೊಂದೆಡೆ, ಸಾರ್ವಜನಿಕವಾಗಿ ಧೀರಜ್ ಜೈನ್, ಉದಯ್ ಜೈನ್ ಹಾಗೂ ಮಲ್ಲಿಕ್ ಜೈನ್ ಅವರ ಹೆಸರನ್ನು ಸೌಜನ್ಯ ತಾಯಿ ಕುಸುಮಾವತಿ ಅವರು ಪದೇ ಪದೇಪದೆ ಪ್ರಸ್ತಾಪಿಸಿದ್ದರು. ಆದರೆ ಘಟನೆಯ ದಿನ ಮಲ್ಲಿಕ್ ಜೈನ್ ತಮ್ಮ ಪತ್ನಿಯ ಸೀಮಂತದ ಆಹ್ವಾನ ಪತ್ರಿಕೆ ಹಂಚಲು ತೆರಳಿದ್ದರು, ಉದಯ್ ಜೈನ್ ಕುಟುಂಬದೊಡನೆ ಯಕ್ಷಗಾನ ನೋಡಲು ಹೋಗಿದ್ದರು. ಧೀರಜ್ ಜೈನ್ ವ್ಯವಹಾರದ ನಿಮಿತ್ತ ದೂರದ ಊರಲ್ಲಿದ್ದರು. ಇವರ ಮೊಬೈಲ್ ಟವರ್ ಲೊಕೇಶನ್ ಗಳನ್ನು ಸಿಐಡಿ ತನಿಖಾಧಿಕಾರಿ ಪರಿಶೀಲಿಸಿ ಇವರ ಉಪಸ್ಥಿತಿ ಘಟನಾ ಸ್ಥಳದಲ್ಲಿ ಇರಲಿಲ್ಲವೆಂದು ಪರಿಗಣಿಸಿದ್ದರು. ನಂತರ ಸಿಬಿಐ ಕೂಡ ಇವರನ್ನು ಸುಳ್ಳು ಪತ್ತೆ ಹಾಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳ ನಂತರ ಕೈಬಿಟ್ಟಿತ್ತು. 2021ರ ಅಕ್ಟೋಬರ್ 4ರಂದು ಸೆಷನ್ಸ್ ನ್ಯಾಯಾಲಯ ಇವರನ್ನು ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸಲು ಯಾವುದೇ ಸಾಕ್ಷ್ಯಗಳಿಲ್ಲವೆಂದು ಅರ್ಜಿ ವಜಾಗೊಳಿಸಿತ್ತು
ಅಲೆಮಾರಿ ವ್ಯಕ್ತಿಯ ಕೂದಲಿನ ಸಾಕ್ಷ್ಯ..!
ಸುಪ್ರೀಂ ಕೋರ್ಟ್ ಮರುತನಿಖೆಗೆ ನೀಡಿದ ಪ್ರಮುಖ ಆಧಾರವೆಂದರೆ ಬಟ್ಟೆಯಲ್ಲಿದ್ದ ಕೂದಲಿನ ಮಾದರಿ. ಆದರೆ ವಿಧಿವಿಜ್ಞಾನ ವರದಿ ಪ್ರಕಾರ ಈ ಕೂದಲು ದೊರೆತದ್ದು ಮೃತಳ ಮೈಮೇಲಲ್ಲ; ಬದಲಿಗೆ ಆರೋಪಮುಕ್ತ ಸಂತೋಷ್ ರಾವ್ ಬಳಿಯಿದ್ದ ಪಂಚೆಯಲ್ಲಿ! ಅದರಲ್ಲಿ ಐದು ಕೂದಲು ಸಂತೋಷನದ್ದು, ಒಂದು ಕೂದಲು ಅಪರಿಚಿತ ಪುರುಷನದ್ದಾಗಿತ್ತು.
ಸಂತೋಷ್ ರಾವ್ ಘಟನಾ ಸ್ಥಳದಲ್ಲೇ ಇರಲಿಲ್ಲವೆಂದು ಸಾಬೀತಾದ ಮೇಲೆ, ಆತನ ಪಂಚೆಯ ಕೂದಲು ಹಂತಕನದ್ದೇ ಎಂದು ತೀರ್ಮಾನಿಸುವುದು ಹೇಗೆ? ಆತ ಅಲೆಮಾರಿಯಂತೆ ತಿರುಗುತ್ತಿದ್ದ ವನು, ನೇತ್ರಾವತಿ ನದಿ ತೀರದಲ್ಲಿ ಭಕ್ತರು ಬಿಟ್ಟುಹೋದ ಬಟ್ಟೆಗಳನ್ನು ತಂದು ಧರಿಸುತ್ತಿದ್ದ ಸಾಧ್ಯತೆ ಗಳು ದಾಖಲಾಗಿವೆ. ಕೃತ್ಯಕ್ಕೂ ಆ ಬಟ್ಟೆಗೂ ನೇರ ಸಂಬಂಧವೇ ಇಲ್ಲದಿರುವಾಗ, ಆ ಕೂದಲನ್ನು ಹಿಡಿದು ಆರೋಪಿಯನ್ನು ಪತ್ತೆ ಹಚ್ಚುವುದು ಹೇಗೆ ಎನ್ನುವ ಕುರಿತು ತಲೆಬಿಸಿ ತನಿಖಾಧಿಕಾರಿಗೆ ಬರಬಹುದು ಎನ್ನುವುದು ಸಹಜ ಪ್ರಶ್ನೆ.