Bharath Ranganath: ಯುರೋಪಿಯನ್ ಶೃಂಗಸಭೆಯಲ್ಲಿ ಕನ್ನಡಿಗ ಭರತ್ ರಂಗನಾಥ್‌ಗೆ ಡಾಕ್ಟರೇಟ್ ಪದವಿ
European Summit: ʼಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನದಲ್ಲಿ AI ಅಳವಡಿಕೆʼ ವಿಷಯದ ಕುರಿತು ಕ್ಯಾಲಿಫೋರ್ನಿಯಾ ಪಬ್ಲಿಕ್ ಯೂನಿವರ್ಸಸಿಟಿಯಲ್ಲಿ ಮಂಡಿಸಿದ ಪ್ರಬಂಧಕ್ಕಾಗಿ ಕನ್ನಡಿಗ ಭರತ್ ರಂಗನಾಥ್ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ನಡೆದ ಯುರೋಪಿಯನ್ ಶೃಂಗಸಭೆಯಲ್ಲಿ ಡಾಕ್ಟರೇಟ್ ಪದವಿ ನೀಡಲಾಗಿದೆ.
ಕನ್ನಡಿಗ ಭರತ್ ರಂಗನಾಥ್‌ಗೆ ಡಾಕ್ಟರೇಟ್ ಪದವಿ ನೀಡಲಾಯಿತು. -
ಬೆಂಗಳೂರು, ಡಿ.20: "ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನದಲ್ಲಿ AI ಅಳವಡಿಕೆʼ ವಿಷಯದ ಕುರಿತು ಕ್ಯಾಲಿಫೋರ್ನಿಯಾ ಪಬ್ಲಿಕ್ ಯೂನಿವರ್ಸಸಿಟಿಯಲ್ಲಿ ಮಂಡಿಸಿದ ಪ್ರಬಂಧಕ್ಕಾಗಿ ಕನ್ನಡಿಗ ಭರತ್ ರಂಗನಾಥ್ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ಇತ್ತೀಚೆಗೆ ನಡೆದ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತ ಯುರೋಪಿಯನ್ ಶೃಂಗಸಭೆಯಲ್ಲಿ (ESIRD-2025) ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಯುರೋಪಿಯನ್ ಶೃಂಗಸಭೆಯಲ್ಲಿ (European Summit) ವಿವಿಧ ದೇಶಗಳ ಶಿಕ್ಷಣ ತಜ್ಞರು, ಸಂಶೋಧಕರು, ಎಂಜಿನಿಯರ್‌ಗಳು ಭಾಗವಹಿಸಿದ್ದಲ್ಲದೆ, ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಬರಹಗಳನ್ನು ಜಾಗತಿಕ ತಜ್ಞರೊಂದಿಗೆ ಹಂಚಿಕೊಳ್ಳಲು, ಅತ್ಯುತ್ತಮ ಅಂತಾರಾಷ್ಟ್ರೀಯ ವೇದಿಕೆಯಾಗಿ ಮಾರ್ಪಟ್ಟಿತ್ತು.
ಕನ್ನಡಿಗರಾದ ನೀರಾವರಿ ತಜ್ಞ ಡಾ. ಎಂ. ಆರ್. ರಂಗನಾಥ ಮಾತನಾಡಿ, ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಕುರಿತು ನಿರಂತರ ಸಂಶೋಧನೆ ಮತ್ತು ವಿದ್ಯುತ್ ಉತ್ಪಾದನೆಯನ್ನು ಅನ್ವೇಷಿಸುವ ಮೂಲಕ ದೇಶವನ್ನು ಸುಸ್ಥಿರ ವಿದ್ಯುತ್ ಉತ್ಪಾದಕ ದೇಶವನ್ನಾಗಿ ಮಾಡುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು.
ಗಾಳಿಯ ಗುಣಮಟ್ಟ, ಅಂತರ್ಜಲ ನಿರ್ವಹಣೆ ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಕೃತ ಬುದ್ಧಿಮತ್ತೆ (ಎಐ) ಅಳವಡಿಸುವ ವಿವಿಧ ವಿಷಯಗಳ ಕುರಿತು ವಿವಿಧ ತಜ್ಞರು ತಮ್ಮ ಪ್ರಬಂಧಗಳನ್ನು ಮಂಡಿಸಿದರು.
ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
ಅಲ್ಲದೆ, ಶೃಂಗಸಭೆಯಲ್ಲಿ ವಿವಿಧ ಕ್ಷೇತ್ರಗಳ ಪರಿಣತಿ ಸಾಧಿಸಿದ ಸಾಧಕರಿಗೆ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಕ್ಯಾಲಿಫೋರ್ನಿಯಾ ಪಬ್ಲಿಕ್ ಯೂನಿವರ್ಸಸಿಟಿಯಲ್ಲಿ ʼಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನದಲ್ಲಿ AI ಅಳವಡಿಕೆʼ ಕುರಿತ ಪ್ರಬಂಧಕ್ಕಾಗಿ ಕನ್ನಡಿಗ ಭರತ್ ರಂಗನಾಥ್ ಅವರಿಗೂ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.